ಬಿಸಿಸಿಐಯಿಂದ ಬೆದರಿಕೆ : ಹರ್ಷಲ್ ಗಿಬ್ಸ್ ಗಂಭೀರ ಆರೋಪ
ನವದೆಹಲಿ : ದಕ್ಷಿಣ ಆಫ್ರಿಕಾದ ಮಾಜಿ ಸ್ಟಾರ್ ಕ್ರಿಕೆಟರ್ ಹರ್ಷಲ್ ಗಿಬ್ಸ್ ಬಿಸಿಸಿಐ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಪಾಕಿಸ್ತಾನದಲ್ಲಿ ನಡೆಯಲಿರುವ ಕಾಶ್ಮೀರ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸದಂತೆ. ಒಂದು ವೇಳೆ ಭಾಗವಹಿಸಿದ್ರೆ ಮುಂದೆ ಭಾರತದಲ್ಲಿ ನಡೆಯಲಿರುವ ಯಾವುದೇ ಟೂರ್ನಿಯಲ್ಲಿ ಭಾಗವಹಿಸಲು ಅನುಮತಿ ನೀಡಲ್ಲ ಎಂದು ಬಿಸಿಸಿಐ ಎಚ್ಚರಿಕೆ ನೀಡಿರುವುದಾಗಿ ಗಿಬ್ಸ್ ಆರೋಪಿಸಿದ್ದಾರೆ. ಆದರೆ, ಗಿಬ್ಸ್ ಆರೋಪಕ್ಕೆ ಬಿಸಿಸಿಐ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇನ್ನು ಕೆಪಿಎಲ್ 2021 ಸೀಸನ್ ಮುಂದಿನ ತಿಂಗಳು ಆಗಸ್ಟ್ 6 ರಿಂದ ಆರಂಭವಾಗಲಿದೆ. ಶ್ರೀಲಂಕಾದ ಮಾಜಿ ಕ್ರಿಕೆಟಿಗ ತಿಲಕರತ್ನೆ ದಿಲ್ಶಾನ್ ಮತ್ತು ಗಿಬ್ಸ್ ಸೇರಿದಂತೆ ಇತರ ಕ್ರಿಕೆಟಿಗರು ಕೂಡ ಪಂದ್ಯಾವಳಿಯಲ್ಲಿ ಆಡಲಿದ್ದಾರೆ.
ಬಿಸಿಸಿಐ, ಕಾಶ್ಮೀರ ಪ್ರೀಮಿಯರ್ ಲೀಗ್ (ಕೆಪಿಎಲ್) ಅನ್ನು ರಾಜಕೀಯದೊಂದಿಗೆ ಲಿಂಕ್ ಮಾಡುತ್ತಿದೆ. ಬಿಸಿಸಿಐ ನಾನು ಕೆಪಿಎಲ್‍ನಲ್ಲಿ ಆಡದಂತೆ ತಡೆಯುತ್ತಿದೆ. ಅದಲ್ಲದೆ ಒಂದು ವೇಳೆ ಭಾಗವಹಿಸಿದ್ರೆ ಮುಂದೆ ಭಾರತದಲ್ಲಿ ನಡೆಯಲಿರುವ ಯಾವುದೇ ಟೂರ್ನಿಯಲ್ಲಿ ಭಾಗವಹಿಸಲು ಅನುಮತಿ ನೀಡಲ್ಲ ಎಂದು ಬಿಸಿಸಿಐ ಎಚ್ಚರಿಕೆ ನೀಡುತ್ತಿದೆ. ಬಿಸಿಸಿಐ ಈ ರೀತಿಯಾಗಿ ನಡೆದುಕೊಳ್ಳುತ್ತಿರುವುದು ನನಗೆ ಇಷ್ಟವಾಗುತ್ತಿಲ್ಲ. ಈ ವಿಚಾರ ನನಗೆ ತುಂಬಾ ನೋವುಂಟು ಮಾಡಿದೆ “ಎಂದು ಅವರು ಟ್ವೀಟ್ ಮಾಡಿದ್ದಾರೆ.