ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರವಾಗಿ ನಡೆಯುತ್ತಿರುವ ಅಧಿಕಾರ ಹಂಚಿಕೆ ಗೊಂದಲ, ನಾಯಕತ್ವ ಚರ್ಚೆ ಹಾಗೂ ಸಿಎಂ–ಡಿಸಿಎಂ ಬಣಗಳ ಒಳಜಗಳ ಕುರಿತಂತೆ ನಿರ್ಣಾಯಕ ಬೆಳವಣಿಗೆ ಸಂಭವಿಸಲಿದೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾಳೆ, ನಾಡಿದ್ದು ಹೈಕಮಾಂಡ್ ಸಭೆ ಇದೆ. ರಾಜ್ಯದಲ್ಲಿ ನಡೆಯುತ್ತಿರುವ ಗೊಂದಲ, ಕುರ್ಚಿ ಜಗಳ, ಅಧಿಕಾರ ಹಂಚಿಕೆ ಕುರಿತು ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರ ಮಾತಿನ ಪ್ರಕಾರ ಹಿಂದುಳಿದ ವರ್ಗಗಳ ಕುರಿತು ದೆಹಲಿಯಲ್ಲಿ ಪ್ರಮುಖ ಸಭೆ, ಬಿಹಾರ ಚುನಾವಣಾ ಫಲಿತಾಂಶ ಕುರಿತ ಚರ್ಚೆ ನಂತರ ಕರ್ನಾಟಕದ ಗೊಂದಲ ಬಗ್ಗೆ ಪ್ರತ್ಯೇಕ ಚರ್ಚೆ ನಡೆಯಲಿದೆ.
ಎಐಸಿಸಿ ಅಧ್ಯಕ್ಷರು ಎಲ್ಲಾ ವಿಷಯಗಳ ತೀರ್ಮಾನವನ್ನು ನಾವು ತೆಗೆದುಕೊಳ್ಳುತ್ತೇವೆ ಎಂದು ಈಗಾಗಲೇ ಹೇಳಿದ್ದಾರೆ. ಹೀಗಾಗಿ ನಾಳೆ ಅಥವಾ ನಾಡಿದ್ದು ರಾಜ್ಯದ ಗೊಂದಲ ಬಗೆಹರಿಯುವ ಸಾಧ್ಯತೆ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.
ಈ ಎಲ್ಲದರಿಂದ, ನಾಳೆ ನಡೆಯಲಿರುವ ಸಭೆಯಲ್ಲಿ ಪಕ್ಷದ ಭವಿಷ್ಯದ ದಿಕ್ಕು, ನಾಯಕತ್ವದ ಪ್ರಸ್ತುತ ಗೊಂದಲ ಹಾಗೂ ಮುಂದಿನ ಆಡಳಿತದ ಸ್ಥಿರತೆ ಬಗ್ಗೆ ಸ್ಪಷ್ಟತೆ ಬರುವ ನಿರೀಕ್ಷೆಯಿದೆ.








