ಹೆಚ್ಚಿನ ತೆರಿಗೆ ಬೇಡಿಕೆಯ ಪ್ರಕರಣ: ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಗೆದ್ದ ವೊಡಾಫೋನ್
ಹೊಸದಿಲ್ಲಿ, ಸೆಪ್ಟೆಂಬರ್26: ಭಾರತದ ಹೆಚ್ಚಿನ ತೆರಿಗೆ ಬೇಡಿಕೆಯ ಪ್ರಕರಣವನ್ನು ವೊಡಾಫೋನ್ ಗೆದ್ದಿದೆ. ಹೇಗ್‌ನಲ್ಲಿರುವ ಶಾಶ್ವತ ನ್ಯಾಯಾಲಯವು ಭಾರತದ ತೆರಿಗೆ ಇಲಾಖೆಯ ನಡವಳಿಕೆಯು ನ್ಯಾಯಯುತ ಮತ್ತು ನ್ಯಾಯಸಮ್ಮತವಾದ ಸೇವೆಯ ಖಾತರಿಯ ಉಲ್ಲಂಘನೆಯಾಗಿದೆ ಎಂದು ತೀರ್ಪು ನೀಡಿದೆ.
ವೊಡಾಫೋನ್ ಗ್ರೂಪ್ ಪಿಎಲ್‌ಸಿ ವಿರುದ್ಧ ಭಾರತ ಹೂಡಿದ್ದ 22,100 ಕೋಟಿ ರೂ ಮಧ್ಯಸ್ಥಿಕೆ ತೆರಿಗೆ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ.
ಇದಲ್ಲದೆ ಕಾನೂನು ಪ್ರಾತಿನಿಧ್ಯ, ನೆರವು ಮತ್ತು ಕಂಪನಿಯು ಮಧ್ಯಸ್ಥಿಕೆಗಾಗಿ ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕಕ್ಕಾಗಿ ವೊಡಾಫೋನ್ ಗ್ರೂಪ್‌ಗೆ 4.3 ಮಿಲಿಯನ್ ಪೌಂಡ್‌ಗಳನ್ನು ಮರುಪಾವತಿ ಮಾಡುವಂತೆ ಭಾರತ ಸರ್ಕಾರವನ್ನು ನ್ಯಾಯಾಲಯ ಕೋರಿದೆ.
ಹೋಗಿ ಬನ್ನಿ ಎಸ್’ಪಿಬಿ ಸರ್.. ವೀ ಮಿಸ್ ಯೂ..
ತೆರಿಗೆ ವಿವಾದ ಅಂತಿಮಗೊಳಿಸಲು ಮಧ್ಯಸ್ಥಗಾರರ ಒಮ್ಮತದ ಅಭಿಪ್ರಾಯ ಬರಲು ವಿಫಲವಾದ ಕಾರಣ ವೊಡಾಫೋನ್ 2016 ರಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ (ಐಸಿಜೆ) ಪ್ರಕರಣವನ್ನು ಸ್ಥಳಾಂತರಿಸಿತು.
2009 ರಲ್ಲಿ ಭಾರತವು ವೊಡಾಫೋನ್ ಗ್ರೂಪ್ ನಲ್ಲಿ 11 ಬಿಲಿಯನ್ ಡಾಲರ್ ಒಪ್ಪಂದದಲ್ಲಿ 7,990 ಕೋಟಿ ರೂ.ಗಳ ಕ್ಯಾಪಿಟಲ್ ಗೈನ್ ತೆರಿಗೆಗಾಗಿ ಬೇಡಿಕೆ ಇಟ್ಟಿತ್ತು. ವೊಡಾಫೋನ್ ಕಂಪನಿಗೆ ವಿಧಿಸಲಾದ ಬಡ್ಡಿ ಮತ್ತು ದಂಡವನ್ನು ಸೇರಿಸಿದ ನಂತರ ವೊಡಾಫೋನ್ ಗ್ರೂಪ್ ವಿರುದ್ಧದ ಒಟ್ಟು ತೆರಿಗೆ ಬೇಡಿಕೆ 22,100 ಕೋಟಿ ರೂ. ಗಾಗಿ ದಾವೆ ಹೂಡಲಾಗಿತ್ತು.








