ಬೆಂಗಳೂರು: ನಗರದಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಬೇಟೆ ನಡೆಸಿದ್ದು, ಸ್ಪಾ ಹೆಸರಿನಲ್ಲಿ ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ (Prostitue) ದಂಧೆಯನ್ನು ಬಯಲಿಗೆ ಎಳೆದಿದ್ದಾರೆ.
10 ಜನ ಸಿಸಿಬಿ ಅಧಿಕಾರಿಗಳ (CCB Officers) ತಂಡ ಟಿನ್ ಫ್ಯಾಕ್ಟರಿ ಬಳಿ ಇರುವ ನಿರ್ವಾನ್ ಇಂಟರ್ ನ್ಯಾಷನಲ್ ಸ್ಪಾನ ಫಸ್ಟ್ ಫ್ಲೋರ್ ಹಾಗೂ 6ನೇ ಫ್ಲೋರ್ ಗೆ ದಾಳಿ ನಡೆಸಿ, 44 ಮಹಿಳೆಯರನ್ನು ರಕ್ಷಿಸಿದ್ದಾರೆ. ಬೇರೆ ರಾಜ್ಯದಿಂದ ಬಂದಿದ್ದ ಅನಿಲ್ ಈ ಸ್ಪಾ ನಡೆಸುತ್ತಿದ್ದ ಎನ್ನಲಾಗಿದೆ.
34 ರೂಂಗಳನ್ನು ಒಳಗೊಂಡ ಬಹುಮಹಡಿ ಕಟ್ಟಡದಲ್ಲಿ ಹೊರ ರಾಜ್ಯ, ಹೊರ ದೇಶದಿಂದ ಯುವತಿಯರು, ಮಹಿಳೆಯರನ್ನು ಕರೆಯಿಸಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಎನ್ನಲಾಗಿದ್ದು, 34 ಜನರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
ಅಲ್ಲದೇ, ಮಾಲೀಕ ಅನಿಲ್ ಗೆ ಸೇರಿದ್ದ ಮೂರುವರೆ ಕೋಟಿ ರೂ. ಮೌಲ್ಯದ ಬೆನ್ಜ್ ಕಾರನ್ನು ಸಿಸಿಬಿ ಸೀಜ್ ಮಾಡಲಾಗಿದೆ. ಈ ಕುರಿತು ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








