ಮಹಿಳೆ ಮಗು ಮೇಲೆ ಆಸಿಡ್ ಎರಚಿದ್ದ ಆರೋಪಿಯ ಜಾಮೀನು ರದ್ದುಪಡಿಸಿದ ಹೈಕೋರ್ಟ್..!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿ ಅತ್ತಿಗೆ ಮತ್ತು ಆಕೆಯ ಮಗುವಿನ ಮೇಲೆ ಆಸಿಡ್ ದಾಳಿ ನಡೆಸಿದ್ದ ಆರೋಪಿಗೆ ನೀಡಲಾಗಿದ್ದ ಜಾಮೀನನ್ನು ಹೈಕೋರ್ಟ್ ರದ್ದುಪಡಿಸಿದೆ. ಅಲ್ಲದೇ ಆತನನ್ನ ಅರೆಸ್ಟ್ ಮಾಡುವಂತೆ ನ್ಯಾಯಾಲಯವು ನಿರ್ದೇಶಿಸಿದೆ.
ಜಿಲ್ಲಾ ಸೆಷನ್ಸ್ ನ್ಯಾಯಾಲಯ ನೀಡಿದ ಜಾಮೀನು ರದ್ದುಗೊಳಿಸುವಂತೆ ಸಂತ್ರಸ್ತೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಕೋಡಿಂಬಳದಲ್ಲಿ ಕಳೆದ ವರ್ಷ ಜನವರಿಯಲ್ಲಿ ಈ ಘಟನೆ ನಡೆದಿತ್ತು. ಸಂತ್ರಸ್ತೆಯ ಗಂಡ ಸಾವನ್ನಪ್ಪಿದ್ದು, 2 ವರ್ಷದ ಮಗಳೊಂದಿಗೆ ಆಕೆ ವಾಸಿಸುತ್ತಿದ್ದಳು.
7 ತಿಂಗಳ ಒಳಗೆ 3 ರಾಜ್ಯಗಳಿಗೆ ಏಳೇಳು ಬಾರಿ ಮಾರಾಟವಾದ ಯುವತಿ ಆತ್ಮಹತ್ಯೆ
ಸಂತ್ರಸ್ತೆಯ ಪತಿಯ ಹಿರಿಯ ಸಹೋದರ ಕೆ. ಜಯನಂದ ಆಗಾಗ ಆಕೆಯನ್ನ ಸಾಲ ನೀಡುವಂತೆ ಪೀಡುಸುತ್ತಿದ್ದ ಎನ್ನಲಾಗಿದೆ. ಬಳಿಕ ಜನವರಿ 23 ರಂದು ಆಕೆಯ ಮನೆಗೆ ಹೋಗಿ ನಿಂಧಿಸಿದ್ದ. ಅದರ ವಿಡಿಯೋ ಮಾಡಲು ಸಂತ್ರಸ್ತೆ ಮುಂದಾದ ವೇಳೆ, ಆಕೆ ಹಾಗೂ ಮಗುವಿನ ಮೇಲೆ ಆಸಿಡ್ ಎರಚಿದ್ದಾನೆ.
ಆಕೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಜಯನಂದನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದರು. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಆರೋಪಿಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿತ್ತು. ಇದೀಗ ಆ ಜಾಮೀನನ್ನು ಹೈಕೋರ್ಟ್ ರದ್ದುಪಡಿಸಿದೆ.
1009 ಸೋಲು, 65ನೇ ವಯಸ್ಸಿನಲ್ಲಿ ಮಿಲೇನಿಯರ್ ಆದ KFC – ಸಂಸ್ಥಾಪಕ ಹಾರ್ನಾಲ್ಡ್ ಸ್ಯಾಂಡರ್ಸ್ ಸಾಹಸಗಾಥೆ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel