Hijab Controvercy : ನ್ಯಾಯಾಲಯದ ಅದೇಶ ಏನು ಬರುತ್ತೋ ಅದನ್ನ ಪಾಲನೆ ಮಾಡೋಣ : ಆರಗ ಜ್ಞಾನೇಂದ್ರ
ಹಿಜಬ್ – ಕೇಸರಿ ಸಂಘರ್ಷದ ವಿಚಾರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ.. ಸಿಎಂ ಈಗಷ್ಟೇ ದೆಹಲಿಯಿಂದ ಬಂದಿದ್ದಾರೆ. ನಮ್ಮ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಈಗ ಸಮಾಲೋಚನೆ ಮಾಡಲಾಗಿದೆ. ಇತ್ತೀಚೆಗಿನ ಬೆಳವಣಿಗೆಗಳ ಹಿನ್ನೆಲೆ. ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಸೂಕ್ತ ಕ್ರಮಗಳ ಚರ್ಚೆ ಮಾಡಲಾಗಿದೆ. ಮುಂದೆ ಸಣ್ಣ ಘಟನೆಗೂ ಅವಕಾಶ ಕೂಡ ನೀಡದೆ ಬಂದೋಬಸ್ತ್ ಇರುವ ಬಗ್ಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ..
Covid Live Updates: ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಸಾವಿನ ಸಂಖ್ಯೆ
ಅಲ್ದೇ ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಗಮನ ಕೊಡಬೇಕು. ನ್ಯಾಯಾಲಯದ ಅದೇಶ ಏನು ಬರುತ್ತೋ ಅದನ್ನ ಪಾಲನೆ ಮಾಡೋಣ. ಎಲ್ಲರೂ ಕೂಡ ಶಾಂತಿಸೌಹಾರ್ದತೆಯಿಂದ ವರ್ತಿಸಿ ಸಹಕಾರ ನೀಡಬೇಕು. ಪರಿಸ್ಥಿತಿ ಕೈ ಮೀರುತ್ತಿದೆ ಎನ್ನಿಸಿದ ಕಡೆ ಸೆಕ್ಷನ್ 144 ಹಾಕಲಾಗಿದೆ. ಅವಶ್ಯಕತೆ ಇಲ್ಲದೆ ಇದ್ರೆ ಎಲ್ಲೂ ಸೆಕ್ಷನ್ 144 ಹಾಕಲ್ಲ ಎಂದಿದ್ದಾರೆ.