Hijab controvercy : ಕೋರ್ಟ್ ಆದೇಶ ಪಾಲನೆ ಮಾಡುವುದು ನಮ್ಮ ಜವಾಬ್ದಾರಿ : ಆರಗ ಜ್ಞಾನೇಂದ್ರ
ಬೆಂಗಳೂರು : ವಿಜಾಬ್ ಕೇಸರಿ ಶಾಲು ವಿವಾದದ ವಿಚಾರದಲ್ಲಿ , ಕೋರ್ಟ್ ಆದೇಶ ಪಾಲನೆ ಮಾಡುವುದು ನಮ್ಮ ಜವಾಬ್ದಾರಿ. ಅದರ ಅರಿವು ನಮಗಿದೆ.. ಎಲ್ಲರೂ ಆದೇಶಕ್ಕೆ ಬದ್ಧರಾಗಿರಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.
ನಗರದಲ್ಲಿ ಮಾತನಾಡಿರುವ ಅವರು , ಆನ್ಲೈನ್ ಗೇಮ್ ಗೆ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ… ನಾವು ಉತ್ತಮ ಉದ್ದೇಶದಿಂದ ಆನ್ಲೈನ್ ಗೇಮ್ ನಿಷೇಧ ಕಾಯ್ದೆ ತಂದಿದ್ದೆವು. ಈಗ ಕೋರ್ಟ್ ನಿರ್ದೇಶನ ನೀಡಿದೆ
ಕೋರ್ಟ್ ಜಡ್ಜ್ ಮೆಂಟ್ ಕಾಪಿ ತರಿಸಿ ಪರಿಶೀಲಿಸಿ , ಯಾವುದರ ಬಗ್ಗೆ ಹೇಳಿದೆ,ಯಾವ ಕಲಂ ತೆಗೆಯಬಹದು ನೋಡ್ತೇವೆ. ಮತ್ತೊಮ್ಮೆ ತೆಗೆದು ಅದನ್ನ ತರ್ತೇವೆ. ಕೋರ್ಟ್ ಆರ್ಡರ್ ಅನ್ನ ನಾವು ಒಪ್ತೇವೆ ಎಂದಿದ್ದಾರೆ..
ಜೊತೆಗೆ ಕೋರ್ಟ್ ಸಂಪೂರ್ಣವಾಗಿ ಅವಕಾಶಕೊಟ್ಟಿಲ್ಲ. ಹಣ ಇಟ್ಟು ಆಡುವುದಕ್ಕೆ ಅವಕಾಶ ಕೊಟ್ಟಿಲ್ಲ. ಇದರ ಬಗ್ಗೆ ಮತ್ತೊಮ್ಮೆ ಕೂತುಚರ್ಚೆ ಮಾಡ್ತೇವೆ ಎಂದು ತಿಳಿಸಿದ್ದಾರೆ..








