Hijab Controvercy : ಹೈಕೋರ್ಟ್ ಮಧ್ಯಂತರ ಆದೇಶ ಸಮಾಧಾನಕರವಾಗಿಲ್ಲ – ಅಥಾವುಲ್ಲಾ
ಉಡುಪಿ : ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ಸಂಬಂಧ ಹೈಕೋರ್ಟ್ ವಿಚಾರಣೆ ಮುಂದೂಡಿದೆ.. ಆದ್ರೆ ಮುಂದಿನ ಆದೇಶದ ವರೆಗೂ ಯಾರೂ ಸಹ ಧಾರ್ಮಿಕ ವಸ್ತ್ರಗಳನ್ನು ಧರಿಸದಂತೆ ಸೂಚನೆ ನೀಡಿದೆ.. ಆದ್ರೆ ಹೈಕೋರ್ಟ್ ಮಧ್ಯಂತರ ಆದೇಶ ಸಮಾಧಾನಕರವಾಗಿಲ್ಲ ಎಂದು ಉಡುಪಿಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಅಧ್ಯಕ್ಷ ಅಥಾವುಲ್ಲಾ ಹೇಳಿಕೆ ನೀಡಿದ್ದಾರೆ.. ಈ ಮೂಲಕ ನ್ಯಾಯಾಲಯದ ಮಧ್ಯಂತರ ಆದೇಶದ ವಿರುದ್ಧ ಅಪಸ್ವರವೆತ್ತಿದ್ದಾರೆ.
ಉಡುಪಿಯಲ್ಲಿ ಮಾತನಾಡಿರೋ ಅವರು , ಮಕ್ಕಳು ಹಿಜಾಬ್ ಇಲ್ಲದೆ ತರಗತಿ ಪ್ರವೇಶ ಮಾಡುವುದು ಅವರಿಗೆ ಮತ್ತು ಪೋಷಕರಿಗೆ ಬಿಟ್ಟ ವಿಚಾರ. ಹೈಕೋರ್ಟ್ ಮಧ್ಯಂತರ ಆದೇಶ ಸಮಾಧಾನಕರವಾಗಿಲ್ಲ. ನಮಗೆ ಕೋರ್ಟ್ ನಿಂದ ಉತ್ತಮ ನ್ಯಾಯಯುತ ತೀರ್ಮಾನ ಬರುವ ನಿರೀಕ್ಷೆ ಇದೆ ಎಂದಿದ್ದಾರೆ.
ಇನ್ನೂ ಸೋಮವಾರ ದಿಂದ ಚರ್ಚೆ ಮುಂದುವರೆಯಲಿದೆ. ಕೋರ್ಟ್ ಮೇಲೆ ನಮಗೆ ಭರವಸೆ ಇದೆ. ನಮ್ಮ ಪರವಾಗಿ ತೀರ್ಪು ಬರಲಿದೆ ಎನ್ನುವ ನಂಬಿಕೆ ನಮಗಿದೆ. ನಮ್ಮ ವಿರುದ್ದ ತೀರ್ಪು ಬಂದಲ್ಲಿ ಕಾನೂನಾತ್ಮಕ ಹೋರಾಟ ಮುಂದುವರೆಯಲಿದೆ. ತರಗತಿಗೆ ಹೋಗುವುದು ಮಕ್ಕಳು ಮತ್ತು ಅವರ ಪೋಷಕರಿಗೆ ಬಿಟ್ಟ ವಿಚಾರ. ಅವರ ಧಾರ್ಮಿಕ ನಂಬಿಕೆಗೆ ಬಿಟ್ಟ ವಿಚಾರ. ಕೇಸರಿ ಶಾಲು ಹೊಸದಾಗಿ ಬಂದಿರುವುದು. ಕೋರ್ಟ್ ದಾರಿ ತಪ್ಪಿಸುವ ಪ್ರಯತ್ನವನ್ನು ಎಬಿವಿಪಿ, ಸಂಘಪರಿವಾರ ಮಾಡಿದೆ. ತರಗತಿಗೆ ಭಾಗವಹಿಸುವುದು ಅವರ ಆಯ್ಕೆಗೆ ಬಿಟ್ಟ ವಿಚಾರ. ಕೇಸರಿಯನ್ನು ಮುಂದಿಟ್ಟುಕೊಂಡು ಹಿಜಾಬ್ ಬ್ಯಾನ್ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ..








