Hijab Controvercy : ಹಿಜಾಬ್ ವಿಚಾರ – RSS , BJP ಅಜಜೆಂಡಾ ಅಷ್ಟೇ : ರಾಮಲಿಂಗಾರೆಡ್ಡಿ
ಬೆಂಗಳೂರು : ರಾಜ್ಯದಲ್ಲಿ ಹೊತ್ತಿರುವ ಹಿಜಾಬ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕರಾದ ರಾಮಲಿಂಗಾರೆಡ್ಡಿ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.. ಇದು ಬಿಜೆಪಿ rss ನವರ ಹಿಡನ್ ಅಜೆಂಡಾ ಅಷ್ಟೆ… ಮೊನ್ನೆ ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರು ಸ್ಥಬ್ದ ಚಿತ್ರಕ್ಕೆ ಅವಕಾಶ ಕೊಟ್ಟಿಲ್ಲ. ಇದಕ್ಕೆ ಸೌತ್ ಕೆನರಾ ಭಾಗದಲ್ಲಿ ಸರ್ಕಾರದ ವಿರುದ್ಧ ಕಿಡಿ ಕಾರಿದರು. ಈ ಅಸಮಧಾನ ಸರಿ ಮಾಡೋಕೆ ಈ ಹಿಜಾಬ್ ವಿಚಾರ ಮುನ್ನೆಲೆಗೆ ತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ..
ಅಲ್ಲದೇ ಮೊದ್ಲು ಹಿಜಾಬ್ ಹಾಕ್ತಾ ಇದ್ರೂ, ಯಾಕೆ ಗಲಾಟೆ ಆಗಿಲ್ಲ. ಈಗ ಯಾಕೆ ಸಮಸ್ಯೆ ಆಯ್ತು ಎಲ್ಲ ರಾಜಕೀಯ ಪ್ರೇರಿತ ಅಷ್ಟೇ. ಜನರ ಅಸಮಧಾನ ಸರಿ ಮಾಡೋಕೆ ಬಿಜೆಪಿ ರಾಜಕೀಯದ ಆಟ ಎಂದಿದ್ದಾರೆ..
ಇದೇ ವೇಳೆ 2009ಕ್ಕು ಮುಂಚೆ ಡಿ ಲಿಮಿಟೇಶನ್ ಮಾಡಿದಾಗ ಬಿಎಸ್ವೈ ಸರ್ಕಾರ ಇತ್ತು. ಕಾಂಗ್ರೆಸ್ ಹೆಸರು ಬಳಸಿ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ..
2009ರಲ್ಲೂ, ಈಗಲೂ ಎಲ್ಲ ಟೈಂ ಅಲ್ಲಿಯೂ ಡಿ ಲಿಮಿಟೇಶನ್ ಮಾಡ್ತಾ ಇರೋದು ಬಿಜೆಪಿಯವ್ರೇ. ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು rss ಅವ್ರು ಶಾಸಕರು ಸಂಸದರ ಕಚೇರಿಯಲ್ಲಿ ಮಾಡ್ತಾರಾ??
ಮುಖ್ಯ ಆಯುಕ್ತರು ಯಾವ ಪಕ್ಷಕ್ಕೂ ಸೇರದೆ ಆವರ ಜವಾಬ್ದಾರಿ ನಿರ್ವಹಿಸಬೇಕು . ವೈಜ್ಞಾನಿಕವಾಗಿ ವಿಂಗಡನೆ ಮಾಡಬೇಕು. ವಾಮ ಮಾರ್ಗದಲ್ಲಿ ವಾರ್ಡ್ ವಿಂಗಡನೆ ಮಾಡಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ..
ಅಲ್ಲದೇ ಮುಂದೆ ಕೋರ್ಟ್ ಹೋಗಿ ಹೋರಾಟ ನಡೆಸ್ತೀವೆ. ಪ್ರಜಾಪ್ರಭುತ್ವ ಅಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ಮುಖ್ಯ ಆಯುಕ್ತರು ಬಿಜೆಪಿ ಹೇಳಿದಾಗೆ ಕೇಳುತ್ತಿದ್ದಾರೆ. ಆದ್ರೇ ಆಯುಕ್ತರು ನ್ಯಾಯಯತವಾಗಿ ಕೆಲಸ ಮಾಡಬೇಕು. ರಾಜಕೀಯ ಪ್ರೇರಿತವಾಗಿ ಕೆಲಸ ಮಾಡಬಾರದು. ಬಿಜೆಪಿ ಹೇಳಿದ ಹಾಗೆ ಕೇಳಬಾರದು ಎಂದು ಹೇಳಿದ್ದಾರೆ..









