Mandya : ಮಹಿಳೆಯರು , ಮೋದಿ ಬಗ್ಗೆ ಹಗುರವಾಗಿ ಮಾತನಾಡಿದವನಿಗೆ ಮಹಿಳೆಯರಿಂದ ಧರ್ಮದೇಟು…!!
ಮಂಡ್ಯ : ಚಲಿಸುತ್ತಿದ್ದ ಬಸ್ ಒಂದರಲ್ಲಿ ವ್ಯಕ್ತಿಯೋರ್ವ ಮಹಿಳೆಯರನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದೂ ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆಯೂ ಹಗುರವಾಗಿ ಮಾತನಾಡಿದ್ದಾನೆ… ಇದ್ರಿಂದ ರೊಚ್ಚಿಗೆದ್ದ ಮಹಿಳೆಯರು ಆತನಿಗೆ ಹಿಗ್ಗಾ ಮುಗ್ಗ ಥಳಿಸಿದ್ದಾರೆ.. ಈ ಘಟನೆ ಮಂಡ್ಯದಲ್ಲಿ ನಡೆದಿದೆ..
ಮಂಡ್ಯದ ಶ್ರೀರಂಗಪಟ್ಟಣದಿಂದ ಮೈಸೂರಿಗೆ ತೆರಳುತ್ತಿದ್ದ ಬಸ್ ನಲ್ಲಿ ಮೋದಿ ಹಾಗೂ ಮಹಿಳೆಯರ ಬಗ್ಗೆ ಈತ ಕೆಟ್ಟ ಪದಗಳಲ್ಲಿ ಬೈದಿದ್ದಾನೆ.. ಇದ್ರಿಂದ ಮೊದಲಿಗೆ ಸಿಟ್ಟಾದ ಮಹಿಳೆಯರು ಆತನಿಗೆ ವಾರ್ನಿಂಗ್ ಕೊಟ್ಟಿದ್ದಾರೆ…
ಇಷ್ಟಕ್ಕೂ ಸುಮ್ಮಾನಗದೇ ಅತಿ ಮಾಡಿದಾಗ ಅವನನ್ನ ಬಸ್ ನಿಂದ ಕೆಳಗಿಳಿಸಿ ಸರಿಯಾಗಿ ಗೂಸ ಕೊಟ್ಟಿದ್ದಾರೆ.. ಮಹಿಳೆಯರು ಥಳಿಸುತ್ತಿದ್ದಂತೆ ಆ ವ್ಯಕ್ತಿ ಅವರಿಗೆ ಧಮ್ಕಿ ಸಹ ಹಾಕಿದ್ದಾನೆ..
ನಿಮ್ಮ ಕಥೆ ಮುಗಿಸುತ್ತೇನೆ ವಿವಿ ಮೊಹಲ್ಲಕ್ಕೆ ಬನ್ನಿ ಎಂದಿದ್ದಾನೆ.. ಇದ್ರಿಂದ ಮತ್ತಷ್ಟು ರೊಚ್ಚಿಗೆದ್ದ ಮಹಿಳೆಯರು ಮತ್ತೆ ಮುಖಾ ಮೂತಿ ನೋಡದೇ ಆ ವ್ಯಕ್ತಿಗೆ ಸರಿಯಾಗಿ ಬಾರಿಸಿದ್ದಾರೆ…