Hijab Controvercy : ಕೇಸರಿ ಶಾಲುಧಾರಿಗಳ ಮುಂದೆ ಕಿರುಚಿದ ಮಂಡ್ಯ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ…..
ನವದೆಹಲಿ : ರಾಜ್ಯದಲ್ಲಿ ಹಿಜಬ್ – ಕೇಸರಿ ಶಾಲು ಸಂಘರ್ಷ ತಾರಕಕ್ಕೇರಿದ್ದು , ಮೂರು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ..
ಅದ್ರಲ್ಲೂ ಮಂಡ್ಯದಲ್ಲಿ ಇತ್ತೀಚೆಗೆ ಪಿಇಎಸ್ ಕಾಲೇಜು ಆವರಣದಲ್ಲಿ ಹಿಜಬ್ ಧಾರಿಗಳು ಕೇಸರಿ ಶಾಲು ಧಾರಿಗಳ ನಡುವೆ ಸಂಘರ್ಷವೇರ್ಪಟ್ಟಿತ್ತು..
ಆಗ ಹಿಜಬ್ ಧರಿಸಿದ್ದ ವಿದ್ಯಾರ್ಥಿನಿ, ನೂರೂರು ಕೇಸರಿ ಧಾರಿ ವಿದ್ಯಾರ್ಥಿಗಳ ಮುಂದೆ ಅಲ್ಲಾಹು ಅಕ್ಬರ್’ ಘೋಷಣೆ ಕೂಗಿದ್ದಾಳೆ.. ಇದು ಈಗ ರಾಷ್ಟ್ರವ್ಯಾಪಿ ಚರ್ಚೆಯಾಗ್ತಿದೆ..
ಜೈ ‘ಶ್ರೀ ರಾಮ್’ ಘೋಷಣೆ ಕೂಗುತ್ತಿದ್ದ ಹುಡುಗರ ಮುಂದೆ ಒಬ್ಬಳೇ ನಿಂತು ‘ಅಲ್ಲಾಹು ಅಕ್ಬರ್’ ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಜಮಾತ್ ಉಲೆಮಾ-ಎ-ಹಿಂದ್ ಸಂಘಟನೆ 5 ಲಕ್ಷ ರೂ. ಬಹುಮಾನ ಘೋಷಿಸಿದೆ..
ಕಾಲೇಜಿನಲ್ಲಿ ಹುಡುಗರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾಗ ಮುಸ್ಕಾನ್ ಅಲ್ಲಾಹು ಅಕ್ಬರ್ ಎಂದು ಕೂಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೀಗ ಜಮಾತ್ ಉಲೆಮಾ-ಎ-ಹಿಂದ್ ಟ್ವೀಟ್ ಮಾಡಿ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ.