Hijab Controvercy : ಬಾಗಲಕೋಟೆ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಣೆ
ಬಾಗಲಕೋಟೆ : ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದದ ಬಗ್ಗೆ ಹೈಕೋರ್ಟ್ ನಲ್ಲಿ ಚರ್ಚೆಯಾಗ್ತಿದೆ… ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಯಾವ ವಿದ್ಯಾರ್ಥಿಗಳು ಸಹ ಧಾರ್ಮಿಕ ಗುರುತುಗಳನ್ನ ಧರಿಸದಂತೆ ಆದೇಶ ನೀಡಿದ್ರೂ ಸಹಿತ ಅಲ್ಲಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗಳ ಬಳಿ ಹೋಗ್ತಿರೋದು ಕಂಡು ಬಂದಿದೆ… ಆದ್ರೆ ಎಲ್ಲೂ ಕೂಡ ಹಿಜಾಬ್ ಧರಿಸಿ ಬಂದವರನ್ನ ಸಾಲೆಗಳ ಒಳಗೆ ಬಿಡಲಾಗುತ್ತಿಲ್ಲ…
ಅಂತೆಯೇ ಇಂದು ಸಹ ಬಾಗಲಕೋಟೆಯ ಗುಳೇದಗುಡ್ಡ ಪಟ್ಟಣದ ಎಸ್ ಎಂ ಭಂಡಾರಿ ಕಲಾ, ಆರ್ ಆರ್ ಭಂಡಾರಿ ವಾಣಿಜ್ಯ ಮತ್ತು ಎಸ್ ಕೆ ರಾಠಿ ವಿಜ್ಞಾನ ಕಾಲೇಜ್ ನಲ್ಲಿ ವಿದಯಾರ್ಥಿಗಳು ಹಿಜಾಬ್ ತೆಗೆಯಲು ನಿರಾಕರಿಸಿದ್ದಾರೆ… ಹೀಗಾಗಿ ಅವರನ್ನ ಕಾಲೇಜ್ ಒಳಗೆ ಬರಲು ಸಿಬ್ಬಂದಿ ಅವಕಾಶ ನೀಡಿಲ್ಲ.. ಹೀಗಾಗಿ ಕಾಲೇಜ್ ಗೇಟ್ ಹೊರಗೇ ವಿದ್ಯಾರ್ಥಿನಿಯರು ಹಾಗೂ ಪಾಲಕರು ನಿಂತಿದ್ದರು,.
ನಾಲ್ವರು ಪಿಯು ವಿದ್ಯಾರ್ಥಿನಿಯರು ಹಾಗೂ ಪಾಲಕರು ಪ್ರಾಂಶುಪಾಲರಿಗಾಗಿ ಕಾದು ಕುಳಿತಿದ್ದದ್ದು ಕಂಡುಬಂತು.. ಸಿಬ್ಬಂದಿ ಹಿಜಾಬ್ ತೆಗೆದು ಕಾಲೇಜ್ ಒಳಗೆ ಹೋಗುವಂತೆ ಸೂಚನೆ ನೀಡಿದ್ರೂ , ಹಿಜಾಬ್ ಹಾಕಿಕೊಂಡೇ ಹೋಗುವುದಾಗಿ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದರು.. ಕಾಲೇಜ್ ಒಳಗಡೆ ಬಿಡದೇ ಇರುವ ಬಗ್ಗೆ ಪಾಲಕರು ಅಸಮಧಾನವನ್ನೂ ಹೊರಹಾಕಿದರು..








