ತ್ರೀ-ಸದಸ್ಯ ಪೀಠ ತೀರ್ಪನ್ನು ಎಲ್ಲರೂ ಪಾಲಿಸಬೇಕು : ರಘುಪತಿ ಭಟ್ – Saaksha Tv
ಉಡುಪಿ: ಹಿಜಾಬ್ ಕುರಿತು ಹೈಕೋರ್ಟ್ ತೀರ್ಪು ನೀಡಿದ್ದು, ಇದನ್ನು ನಾವು ಸ್ವಾಗತಿಸುತ್ತೇವೆ ಮತ್ತು ಸಂತೋಷ ವ್ಯಕ್ತಪಡಿಸುತ್ತೇನೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಶಾಸಕರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತ್ರೀ-ಸದಸ್ಯ ಪೀಠ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಆ ಆರು ವಿದ್ಯಾರ್ಥಿನಿಯರು ಹಠ ಮಾಡದೇ ಶಾಲೆಗೆ ಬರಬೇಕು. ಅವರೆಲ್ಲರಿಗೂ ಸಮವಾದ ಶಿಕ್ಷಣ ನೀಡುತ್ತೇವೆ. ಇಷ್ಟು ದಿನ ಅವರ ಶಿಕ್ಷಣಕ್ಕೆ ಸಮಸ್ಯೆ ಆಗಿದ್ದರೆ, ಅವರಿಗೆ ಪ್ರತ್ಯೇಕ ನೋಟ್ಸ್ ನೀಡಲಾಗುತ್ತದೆ ಎಂದು ಹೇಳಿದರು.
ತ್ರಿ ಸದಸ್ಯ ಪೀಠ ವಿಚಾರಣೆ ಮಾಡಿ ತೀರ್ಪು ನೀಡಿದೆ. ತ್ರಿ ಸದಸ್ಯ ಪೀಠದಲ್ಲಿ ಮುಸ್ಲಿಂ ನ್ಯಾಯಾಧೀಶರು ಇದ್ದರು. ಇದು ಐತಿಹಾಸಿಕ ತೀರ್ಪು ಆಗಿದೆ. ಸುಪ್ರೀಂಕೋರ್ಟ್ಗೆ ಹೋಗಲು ಅವಕಾಶ ಇದೆ. ಆದರೆ ದೇಶ ಮಟ್ಟದಲ್ಲಿ ಮತ್ತೆ ಈ ವಿಚಾರ ತೆಗೆದುಕೊಂಡು ಹೋಗಿ ಹಿಂದೂ-ಮುಸ್ಲಿಂರ ಮಧ್ಯೆ ಕಂದಕ ಮೂಡಿಸಬಾರದು ಎಂದಿದ್ದಾರೆ.









