Hijab Controversy | ಪ್ರತ್ಯೇಕ ಪಿಯು ಕಾಲೇಜು ಸ್ಥಾಪನೆಗೆ ಮುಸ್ಲಿಮರ ಪಣ
ಮಂಗಳೂರು : ಕರಾವಳಿ ಭಾಗದಲ್ಲಿ ಹುಟ್ಟಿಕೊಂಡ ಹಿಜಾಬ್ ವಿವಾದ ಹೇಗೆ ರಾಜ್ಯದಾದ್ಯಂತ ವ್ಯಾಪಿಸಿ, ದೇಶದೆಲ್ಲೆಡೆ ಸದ್ದು ಮಾಡಿತ್ತು ಎಂಬೋದನ್ನ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಹಿಜಾಬ್ ಇಲ್ಲದೇ ನಾವು ಕಾಲೇಜಿಗೆ ಬರಲ್ಲ ಎಂದಿದ್ದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರನ್ನ ಶಾಲೆಗೆ ಕಳುಹಿಸಲ್ಲ ಎಂದಿದ್ದ ಮುಸ್ಲಿಮರು ಇದೀಗ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಪ್ರತ್ಯೇಕ ಪಿಯು ಕಾಲೇಜು ಸ್ಥಾಪನೆಗೆ ಅಲ್ಪಸಂಖ್ಯಾತರು ಪಣತೊಟ್ಟಿದ್ದು, ಹೊಸ ಕಾಲೇಜಿಗಾಗಿ ಪಿಯು ಬೋರ್ಡ್ ಗೆ ಮನವಿ ಸಲ್ಲಿಕೆ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13 ಮುಸ್ಲಿಮ್ ಆಡಳಿತ ಸಂಸ್ಥೆಗಳು ಪಿಯು ಕಾಲೇಜು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಬಂದ 14 ಅರ್ಜಿಗಳ ಪೈಕಿ 13 ಮುಸ್ಲಿಂ ಶಿಕ್ಷಣ ಸಂಸ್ಥೆಗಳದ್ದಾಗಿದೆ.
ಈ 14 ಅರ್ಜಿಗಳ ಪೈಕಿ 2 ಕಾಲೇಜಿಗಷ್ಟೇ ಪಿಯು ಕಾಲೇಜು ಸ್ಥಾಪಿಸಲು ಈಗಾಗಲೇ ಅನುಮತಿ ನೀಡಲಾಗಿದೆ.
ಒಂದು ಮುಸ್ಲಿಂ ಮತ್ತು ಮತ್ತು ಸುಬ್ರಹ್ಮಣ್ಯದ ಒಂದು ಮುಸ್ಲಿಮೇತರ ಆಡಳಿತದ ಕಾಲೇಜಿಗೆ ಅನುಮತಿ ಸಿಕ್ಕಿದೆ.
ಉಳಿದ 12 ಮುಸ್ಲಿಂ ಆಡಳಿತದ ಕಾಲೇಜಿನ ಅನುಮತಿ ಅರ್ಜಿಗಳು ಪೆಂಡಿಂಗ್‍ನಲ್ಲಿ ಇಡಲಾಗಿದೆ.








