Himachal Pradesh Election : ಹಿಮಾಚಲಪ್ರದೇಶದಲ್ಲಿ BJP ಅಧಿಕಾರಕ್ಕೆ..??
ಹಿಮಾಚಲ ಪ್ರದೇಶ ಮತ್ತು ಗುಜರಾತ್ ನ ವಿಧಾನಸಭಾ ಚುನಾವಣೆಯ ಮತದಾನ ಈಗಷ್ಟೇ ಮುಗಿದಿದೆ..
ಈಗ ಗುಜರಾತ್ ನಲ್ಲಿ 182 ಸ್ಥಾನಗಳಿಗೆ ಮತ್ತು ಹಿಮಾಚಲ ಪ್ರದೇಶದಲ್ಲಿ 68 ಸ್ಥಾನಗಳಿಗೆ ೀಗಷ್ಟೇ ಮತದಾನ ಪ್ರಭುಗಳು ತಮ್ಮ ಮತವನ್ನ ಚಲಾಯಿಸಿದ್ದಾರೆ..
ಚುನಾವಣಾ ಸಮೀಕ್ಷೆಗಳು ಕೂಡ ಹೊರಬಿದ್ದಿದ್ದು , ಹಿಮಾಚಲ ಪ್ರದೇಶದಲ್ಲಿ ಕಮಲರಳುವ ಲಕ್ಷಣ ಕಾಣುತ್ತಿದೆ..
ಸಮೀಕ್ಷೆ ಏನು ಹೇಳುತ್ತದೆ..??
ರಿಪಬ್ಲಿಕ್ ಟಿವಿ ಸಮೀಕ್ಷೆ ಪ್ರಕಾರ ಹಿಮಾಚಲ ಪ್ರದೇಶದಲ್ಲಿ 68 ಸ್ಥಾನಗಳ ಪೈಕಿ
ಬಿಜೆಪಿ 34 – 39 ,
ಕಾಂಗ್ರೆಸ್ 28 – 33 ,
ಆಮ್ ಆದ್ಮಿ ಪಾರ್ಟಿ 0 – 01 ,
ಇತರೇ 1 – 4
ಟಿವಿ9 ಭಾರತ್ ವರ್ಷ್ ಸಮೀಕ್ಷೆ ಪ್ರಕಾರ
ಬಿಜೆಪಿ – 32 -34
ಕಾಂಗ್ರೆಸ್ – 30 -32
ಆಮ್ ಆದ್ಮಿ ಪಾರ್ಟಿ – 0
ಇತರೇ – 3 -5
ಸಿ ವೋಟರ್ಸ್ ಸಮೀಕ್ಷೆ ಪ್ರಕಾರ
ಬಿಜೆಪಿ – 34 -39
ಕಾಂಗ್ರೆಸ್ – 28 -33
ಆಮ್ ಆದ್ಮಿ ಪಾರ್ಟಿ– 0- 1
ಇತರೇ – 1 -4
ಟೈಮ್ಸ್ ನೌ ಸಮೀಕ್ಷೆ ಪ್ರಕಾರ
ಬಿಜೆಪಿ- 44
ಕಾಂಗ್ರೆಸ್ – 21
ಆಮ್ ಆದ್ಮಿ ಪಾರ್ಟಿ – 0
ಇತರೇ– 1
ಇದೇ ಮೊದಲ ಬಾರಿ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸತತ 2ನೇ ಬಾರಿಗೆ ಅಧಿಕಾರ ಹಿಡಿಯುವ ಲಕ್ಷಣ ಕಾಣ್ತಿದೆ.
ಇನ್ನೂ ಆಮ್ ಆದ್ಮಿ ಪಾರ್ಟಿ ಜನ ಸಾಮಾನ್ಯರಿಗೆ ಉಚಿತ ಸೌಲಭ್ಯಗಳನ್ನು ನೀಡುವುದಾಗಿ ಘೋಷಣೆ ಮಾಡಿದರೂ ಹಿಮಾಚಲ ಪ್ರದೇಶದಲ್ಲಿ ಸಮೀಕ್ಷೆ ಪ್ರಕಾರ ಜನರು AAP ಕಡೆ ಒಲವು ತೋರಿದಂತೆ ಕಂಡು ಬಂದಿಲ್ಲ.