ಅವರ್ಣನೀಯ ಸೌಂದರ್ಯ ಹೊಂದಿರುವ ಹಿಮಾಲಯದಲ್ಲಿನ , ರೋಮಾಂಚನಕಾರಿ ವಿಚಾರಗಳು
ಹಿಮಾಲಯ…. ಹಿಮದ ರಾಶಿಯ ಹೊದಿಕೆಯಿಂದ ಆವರಿಸಲ್ಪಟ್ಟಿರುವ ಭೂಲೋಕದ ಸ್ವರ್ಗ. ಇಲ್ಲಿಗೆ ಬಂದರೆ ಯಾವುದೋ ಬೇರೆಯದ್ದೇ ಪ್ರಪಂಚಕ್ಕೆ ಬಂದಂತಹ ಅದ್ಭುತ ಅನುಭವವಾಗುತ್ತದೆ.
ಇನ್ನೂ ಹಿಮಾಲಯ ಅತ್ಯಂತ ದೊಡ್ಡದಾಗಿದ್ದು, ಸುಮಾರು 5 ದೇಶಗಳ ವರೆಗೂ ವಿಸ್ತರಿಸಿರುವುದು ವಿಶೇಷ. ವಿಶೇಷವಾಗಿ ಭಾರತ , ಪಾಕಿಸ್ತಾನ , ನೇಪಾಳ , ಭೂತಾನ್ , ಚೈನಾವನ್ನ ಈ ಹಿಮಾಲಯ ಆವರಿಸಿದೆ..
ವಿಶ್ವದ ಅತಿ ದೊಡ್ಡ ನದಿಗಳಲ್ಲಿ ಒಂದಾದ ಸಿಂಧುನದಿ , ಗಂಗಾನದಿ , ಬ್ರಹ್ಮಪುತ್ರ ಹುಟ್ಟುವ ಸ್ಥಳ ಹಿಮಾಲಯ. ಹೀಗೆ ಹಿಮಾಲಯದ ಬಗ್ಗೆ ಸಾಕಷ್ಟು ಕುತೂಹಲಕಾರಿ ವಿಚಾರಗಳಿವೆ.. ಅವುಗಳ ಬಗ್ಗೆಬಹುಶಃ ಸಾಕಷ್ಟು ಮಂದಿಗೆ ತಿಳಿದಿರೋದಿಲ್ಲ. ಹಿಮಾಲಯದ ಅನೇಕ ನಿಗೂಢಗಳ ಹಿಂದಿನ ಕಾರಣಗಳನ್ನ ತಿಳಿಯಲು ಇಂದಿಗೂ ವಿಜ್ಷಾನಿಗಳು ಪ್ರಯತ್ನಗಳನ್ನ ನಡೆಸುತ್ತಲೇ ಇದ್ದಾರೆ.
ಇಲ್ಲಿನ ವಾತಾವರಣ – ಇಡೀ ವಿಶ್ವದಲ್ಲಿನ ವಾತಾವರಣಕ್ಕೆ ಹೋಲಿಸಿದ್ರೆ , ಹಿಮಾಲಯದ ವಾತಾವರಣ , ತಾಜಾ ಹಾಗೂ ವಿಭಿನ್ನವಾಗಿದೆ.. ಮತ್ತೊಂದೆಡೆ ಜಗತ್ತಿನಲ್ಲಿ ಜನ ವಾಯು ಮಾಲಿನ್ಯದಿಂದ ಕಂಗಾಲಾಗಿ ಉಡಸಿರಾಡುವುದು ಕಷ್ಟವಾಗಿರುವಂತಹ ಪರಿಸ್ಥಿತಿದೆ.. ಆದ್ರೆ ಹಿಮಾಲಯದ ವಿಚಾರವೇ ಬೇರೆ.. ಇಲ್ಲಿನ ಜನರಿಗೆ ಕುಷ್ಟ ರೋಗ , ಕ್ಷಯ ರೋಗ , ಟಿಬಿ, ಚರ್ಮ ರೋಗದಂತಹ ಇನ್ನೂ ಅನೇಕ ಕಾಯಿಲೆಗಳು ಹತ್ತಿರಕ್ಕೂ ಸುಳಿಯೋದಿಲ್ಲ.. ಅರುಣಚಾಲಪ್ರದೇಶ , ಹಿಮಾಚಲ ಪ್ರದೇಶ , ಸಿಕ್ಕಿಂ , ಜಮ್ಮು ಕಾಶ್ಮೀರ , ಉತ್ತರಾಖಂಡ , ಅಸ್ಸಾಂ ರಾಜ್ಯಗಳಲ್ಲಿನ ಜನರ ಆರೋಗ್ಯ ದೇಶದ ಇತರೇ ರಾಜ್ಯಗಳಿಗಿಂತಲೂ ತುಂಬಾ ಉತ್ತಮವಾಗಿರುತ್ತದೆ.
ಅಲ್ದೇ ಬಹುತೇಕ ಇಲ್ಲಿನ ಎಲ್ಲಾ ಜನರು 100 ವರ್ಷ ಜೀವಿಸುತ್ತಾರೆ ಎನ್ನಲಾಗಿದೆ. ಇನ್ನೂ ಹಿಮಾಲಯ ಪರ್ವತ ಹಿಂದೂ ದೇವಾಲಯಗಳ ವಾಸತಾಣ ಎಂದೇ ಹೇಳಲಾಗುತ್ತದೆ.. ಅನೇಕ ಹಿಂದು ದೇವರುಗಳು ಇಲ್ಲಿ ನೆಲೆಸಿದ್ದಾರೆಂಬ ನಂಬಿಕೆಯಿದೆ.. ಅಲ್ಲದೇ ದೇವರಾಜ ಇಂದ್ರನ ವಾಸಸ್ಥಾನವಿದು ಎನ್ನಲಾಗಿದೆ.. ಅದಕ್ಕೆ ಸಾಕಷ್ಟು ಸಾಕ್ಷಿ ಪುರಾವೆಗಳು ಸಿಕ್ಕಿವೆ..
ಹಿಮಾಲಯದಲ್ಲಿ ನಿಗೂಢತೆಗಳು ಸಾಕಷ್ಟಿವೆ.. ಆದ್ರೆ ಇಲ್ಲಿನ ವಿಚಿತ್ರ ಪ್ರಾಣಿಗಳು ಹಿಮಾಲಯ ಬಿಟ್ರೆ ಬೇರೆ ಎಲ್ಲೂ ಸಹ ಸಿಗೋದಿಲ್ಲ.. ವಿಚಿತ್ರ ಪ್ರಾಣಿಗಳು ಹಿಮಾಲಯದ ತಪ್ಪಲಿನ ಬಗ್ಗೆ ಮಾತನಾಡಿದ್ರೆ ಮನಸ್ಸಿಗೆ ಮೊದಲು ಬರೋ ಪ್ರಾಣಿಯ ಹೆಸರು ಯತಿ. ಯತಿ ಅಥವ ಹಿಮಮಾನವ, ದೈತ್ಯಾಕಾರದಲ್ಲಿ ಇರುವ ಈ ಪ್ರಾಣಿಗಳು ಅರ್ಧ ಮನುಷ್ಯರ ರೀತಿ ಇನ್ನೂ ಅರ್ಧ ಮಂಗಗಳಂತೆ ಇದ್ದು, ಇವುಗಳನ್ನ ಅತ್ಯಂತ ರಹಸ್ಯಮಯ ಜೀವಿ ಅಂತ ಹೇಳಲಾಗುತ್ತದೆ..
ಅಪರೂಪದಲ್ಲೇ ಅಪರೂಪವಾದ ಯತಿಗಳು ತೀರ ಕಡಿಮೆ.. ಒಂದೆಡೆ ಈ ರೀತಿಯಾದ ಪ್ರಾಣಿಗಳು ಇಲ್ಲ ಎಂಬ ವಾದಗಳೂ ಇವೆ.. ಆದ್ರೆ ಹಿಮಾಲಯದ ಚಾರಣ ಮಾಡಲು ಬಂದ ಅನೇಕರು ಇವುಗಳನ್ನ ನೋಡಿರೋದಾಗಿ ಹೇಳಿಕೊಂಡಿದ್ದಾರೆ.. ಅಲ್ಲದೇ ವಿಜ್ಞಾನಿಗಳು ಹೇಳೋ ಪ್ರಕಾರ ಇಂದಿಗೂ ಹಿಮಾಲಯದ ಗುಹೆಗಳಲ್ಲಿ ಯತಿ ವಾಸಿಸುತ್ತಿವೆ..
ಆದ್ರೆ ಇವತ್ತಿನವರೆಗೂ ಈ ಬಗೆಗಿನ ವಿಚಾರ ರಹಸ್ಯವಾಗಿಯೇ ಉಳಿದಿದೆ.. ಯಾರೆಲ್ಲಾ ಯತಿಗಳನ್ನ ನೋಡಿದ್ದಾಗಿ ಹೇಳಿಕೊಂಡಿದ್ದಾರೋ ಅವರೆಲ್ಲರೂ ವಿಚಿತ್ರ ಘಟನೆಗಳನ್ನ ಎದುರಿಸಿದ್ದಾರೆ..
ಹಿಮಾಲಯದ ಮಡಿಲಲ್ಲಿ ಅನೇಕ ಚಮಕ್ತಾರಿ ಮರಗಡಿಗಳಿರೋದಾಗಿ ನಂಬಲಾಗಿದೆ.. ಜಡಿ ಭೂತಿ , ಔಷಧೀಯ ಗುಣಗಳಿರುವ ಗಿಡ ಮರಗಳಿಗೆ ಇಲ್ಲಿ ಯಾವುದೇ ಕೊರತೆಯಿಲ್ಲ..
ಇನ್ನೂ ಪುರಾಣದಲ್ಲಿ ಉಲ್ಲೇಖಿಸಿರುವಂತೆ ಇಲ್ಲಿ ಭಜರಂಗಬಲಿ ಹನುಮಾನ್ ಸಂಜೀವಿನಿ ಮೂಲಿಕೆ ತರಲು ಬಂದ ವಿಚಾರವೂ ಯಾರಿಗೂ ಗೊತ್ತಿಲ್ಲದೇ ಇರೋ ಸಂಗತಿ ಏನಲ್ಲ.
ಇಲ್ಲಿ ಸಹಸ್ರಾರು ಜಡಿ ಭೂತಿಗಳು ಸಿಗುತ್ತವೆ.. ಇಲ್ಲಿ ಸಿಗುವ ಚಮಕ್ತಾರಿ ಗಿಡಮೂಲಿಕೆಗಳು ಮನುಷ್ಯರು ಆಯುಷ್ಯವನ್ನೂ ಹೆಚ್ಚಿಸುತ್ತದೆ. ಹಿಮಾಲಯ ದಿವ್ಯ ಔಷಧಿಗಳ ಗಿಡಮೂಲಿಕೆಗಳ ವಿಚಾರದಲ್ಲಿ ಸರ್ವ ಶ್ರೇಷ್ಠ ಎಂದು ಅಥರ್ವ ವೇದ , ಆಯುರ್ವೇದಂತಹ ಗ್ರಂಥಗಳಲ್ಲಿಯೂ ಉಲ್ಲೇಖವಾಗಿದೆ.. ಮಹರ್ಷಿ ಚರಕ್ ಅವರು ಸಹ ತಮ್ಮ ಚರಕಸಹಿತೆಯಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾರೆ.