ಅಸ್ಸಾಂ ನೂತನ ಸಿಎಂ ಆಗಿ ನಾಳೆ ಹಿಮಂತ ಬಿಸ್ವಾ ಪ್ರಮಾಣವಚನ
ಗುವಾಹಟಿ : ಅಸ್ಸಾಂನ ನೂತನ ಸಿಎಂ ಆಗಿ ನಾಳೆ ಹಿಮಂತ ಬಿಸ್ವಾ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಈ ಬಾರಿ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಮುಂದಿನ ಸಿಎಂ ಯಾರು ಅನ್ನೋ ಗೊಂದಲ ಪಕ್ಷದಲ್ಲಿ ಶುರುವಾಗಿತ್ತು.
ಹೀಗಾಗಿ ಫಲಿತಾಂಶ ಬಂದು ವಾರ ಕಳೆದರೂ ಅಧಿಕಾರದ ಚುಕ್ಕಾಣಿ ಹಿಡಿಯುವ ವ್ಯಕ್ತಿ ಯಾರೆಂಬುದೇ ಕುತೂಹಲವಾಗಿ ಉಳಿದಿತ್ತು.
ಸಿಎಂ ರೇಸ್ ನಲ್ಲಿ ಸರ್ಬಾನಂದ ಸೊನೊವಾಲ್ ಹಾಗೂ ಹಿಮಂತ ಬಿಸ್ವಾ ಶರ್ಮಾ ಇಬ್ಬರೂ ಮುಂಚೂಣಿಯಲ್ಲಿದ್ದರು.
ಸಿಎಂ ಆಯ್ಕೆ ವಿಚಾರವಾಗಿ ಇಂದು ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ಶಾಸಕರು ಹಿಮಂತ ಬಿಸ್ವಾ ಅವವ ಹೆಸರನ್ನು ಸೂಚಿಸಿದ್ದಾರೆ.
ಅಲ್ಲದೇ ಅವರನ್ನೇ ಶಾಸಕಾಂಗ ಪಕ್ಷದ ನಾಯಕರಾಗಿ ಶಾಸಕರು ಆಯ್ಕೆ ಮಾಡಿಕೊಂಡಿದ್ದಾರೆ.