ಹಿಮಚ್ಛಾದಿತ ಪ್ರದೇಶದಲ್ಲಿ ಯೋಗ ಪ್ರದರ್ಶಿಸಿದ ITBP ಸೈನಿಕರು…
ಹಿಮಾಲಯ ಪರ್ವತ ಶ್ರೇಣಿಯ ಗಡಿ ಭಾಗದಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸೈನಿಕರು ಯೋಗಾಸನಗಳನ್ನ ಪ್ರದರ್ಶಿಸಿದರು. 8ನೇ ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ ಮತ್ತು ಅಸ್ಸಾಂ ಸೇರಿದಂತೆ ಭಾರತ-ಚೀನಾ ಗಡಿಯಲ್ಲಿ ಐಟಿಬಿಪಿ ಯೋಧರು ಯೋಗಾಭ್ಯಾಸ ಮಾಡಿದರು.
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್‌ನ ಹಿಮ ವೀರರು ಸಿಕ್ಕಿಂನಲ್ಲಿ ಹಿಮಭರಿತ ಸ್ಥಿತಿಯಲ್ಲಿ 17,000 ಅಡಿ ಎತ್ತರದಲ್ಲಿ ಯೋಗಾಭ್ಯಾವನ್ನ ಪ್ರದರ್ಶಿಸಿರುವ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
.@ITBP_official Jawans dedicate a song on 8th #IDY2022. ITBP personnel have been exemplary in promoting Yoga by demonstrating Surya Namaskar & other yogasanas at different high altitude Himalayan ranges on India-China border including Ladakh, HP, UK, Sikkim & AP over years. pic.twitter.com/H7bLx3XZ3f
— DD News (@DDNewslive) June 21, 2022
ಹಿಮಾಲಯದ ಗಡಿಯಲ್ಲಿ ಐಟಿಬಿಪಿ ಸೈನಿಕರು ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಹಾಡೊಂದನ್ನು ಅರ್ಪಿಸಿದ್ದಾರೆ. ಐಟಿಬಿಪಿ 33ನೇ ಬೆಟಾಲಿಯನ್ ಯೋಧರು ಬ್ರಹ್ಮಪುತ್ರ ನದಿಯ ಎದುರಿನ ಗುವಾಹಟಿಯ ಲಚಿತ್ ಘಾಟ್‌ನಲ್ಲಿ ಯೋಗಾಭ್ಯಾಸ ನಡೆಸಿದರು.
ಆಯುಷ್ ಸಚಿವಾಲಯವು ಈ ಬಾರಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷಗಳಾಗಿರುವುದರಿಂದ ಈ ವಿಷಯವನ್ನು ಇಟ್ಟುಕೊಂಡು 75 ವರ್ಷಗಳ ಪ್ರಮುಖ ವಿಷಯವನ್ನು ಇಟ್ಟುಕೊಂಡು ಯೋಗ ದಿನಾಚರಣೆ ಆಚರಿಸುತ್ತಿದೆ. ಇದರಿಂದಾಗಿ ಕೇಂದ್ರ ಮಂತ್ರಿಗಳಿಗೆ ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ದೇಶದ ಪ್ರಮುಖ 75 ಸ್ಥಳಗಳನ್ನು ಗುರುತಿಸಿದೆ. ಇದರಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ದಸರಾ ಮೈದಾನದಲ್ಲಿ ಯೋಗವನ್ನು ಮಾಡಿದ್ದಾರೆ.