ನ್ಯೂಯಾರ್ಕ್: ಅಮೆರಿಕದಲ್ಲಿ ಕಿಡಿಗೇಡಿಗಳು ಹಿಂದೂ ದೇವಾಲಯ ಧ್ವಂಸಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಅಮೆರಿಕದ ಮೆಲ್ವಿಲ್ಲೆಯಲ್ಲಿನ (Melville) ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನವನ್ನು (BAPS Swaminayaran Temple) ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್ ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ (Indian Consulate General) ಅಮೆರಿಕಾದ ಕಾನೂನು ಅಧಿಕಾರಗಳ ಮುಂದೆ ವಿಷಯವನ್ನು ಪ್ರಸ್ತಾಪಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಮೆಲ್ವಿಲ್ಲೆಯಲ್ಲಿರುವ ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನ ಧ್ವಂಸಗೊಳಿಸಿರುವ ಕುರಿತು ನ್ಯೂಯಾರ್ಕ್ ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಖಂಡಿಸಿದ್ದು, ಇದು ಸ್ವೀಕಾರವಲ್ಲ ಹಾಗೂ ಅಮೆರಿಕಾದ ಕಾನೂನು ಅಧಿಕಾರಿಗಳು ಹೇಯ ಕೃತ್ಯ. ಕೂಡಲೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಲಾಗಿದೆ.
ಅಮೆರಿಕಾದ ಹಿಂದೂ ಸಂಸ್ಥೆಯು (Hindu American Foudation) ದೇವಾಲಯದ ಧ್ವಂಸಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಅಮೆರಿಕಾದ ನ್ಯಾಯ ಇಲಾಖೆಗೆ ತಿಳಿಸಿದೆ.
ಕ್ಯಾಲಿಫೋನಿರ್ಯಾ ಹಾಗೂ ಕೆನಡಾದ ದೇವಸ್ಥಾನಗಳ ಮೇಲೆ ಆದ ದಾಳಿಯ ನಂತರ ಅದೇ ಮಾದರಿಯಲ್ಲಿ ನ್ಯೂಯಾರ್ಕ್ ದೇವಸ್ಥಾನದ ಧ್ವಂಸ ನಡೆದಿದೆ ಎಂದು ಅಮೆರಿಕಾದ ಹಿಂದೂ ಸಂಸ್ಥೆಯು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದೆ.