ಇಂದು ಜಪಾನ್ ಪಾಲಿಗೆ ಅತ್ಯಂತ ಕರಾಳ ದಿನ… ಹಿರೋಶಿಮಾ ದಿನ..!
ಇಂದು ಜಪಾನ್, ಅದ್ರಲ್ಲೂ ಹಿರೋಶಿಮಾ ಜನರ ಪಾಲಿಗೆ ಅತ್ಯಂತ ಕರಾಳ ದಿನ…76 ವರ್ಷಗಳ ಹಿಂದೆ 1945ರ ಆಗಸ್ಟ್ 6ರಮದು ಅಮೆರಿಕಾ ನಡೆಸಿದ ಅಣುಬಾಂಬ್ ದಾಳಿಯ ಪರಿಣಾಮವನ್ನೂ ಅಲ್ಲಿನ ಜನರು ಇಂದಿಗೂ ಅನುಭವಿಸುತ್ತಲೇ ಇದ್ದಾರೆ. ಅಮೆರಿಕಾ ಜಪಾನ್ ನ ಹಿರೋಷಿಮಾ ನಗರದ ಮೇಲೆ ಪರಮಾಣು ಬಾಂಬ್ ಎಸೆಯಿತು. ಅದಾದ 3 ದಿನದ ಬಳಿಕ ಮತ್ತೆ ನಾಗಸಾಕಿ ನಗರದ ಮೇಲೆ ಅಣು ಬಾಂಬ್ ಬೀಳಿಸಿತು.
ಜಪಾನ್ ಮೇಲೆ ಹಾಕಿದ ಎರಡು ಅಣು ಬಾಂಬ್ಗಳಿಂದ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡರು. ಜಪಾನಿನ ಹಿರೋಶಿಮಾ ಮತ್ತು ನಾಗಾಸಾಕಿ ನಗರವನ್ನು ಗುರಿಯಾಗಿಸಿಕೊಂಡು ಅಮೆರಿಕಾ ಪರಮಾಣು ಬಾಂಬ್ ಸಿಡಿಸಿತು. ಆ ಕರಾಳ ದಿನದಂದು ಪ್ರಾಣ ಕಳೆದುಕೊಂಡವರ ಸ್ಮರಣಾರ್ಥವಾಗಿ ಆಗಸ್ಟ್ 6ರಂದು ಪ್ರತೀ ವರ್ಷ ಹಿರೋಷಿಮಾ ದಿನವನ್ನು ಆಚರಿಸಲಾಗುತ್ತದೆ.
1945 ಆಗಸ್ಟ್ 6ನೇ ತಾರೀಕಿನಂದು ಅಮೆರಿಕಾ ಜಪಾನ್‌ನ ಹಿರೋಷಿಮಾ ನಗರದ ಮೇಲೆ ಪರಮಾಣು ಬಾಂಬ್ ಎಸೆಯಿತು. ಅದಾದ 3 ದಿನದ ಬಳಿಕ ಮತ್ತೆ ನಾಗಸಾಕಿ ನಗರದ ಮೇಲೆ ಅಣು ಬಾಂಬ್ ಬೀಳಿಸಿತು. ಅದರ ಪರಿಣಾಮ ಶೇ. 40ರಷ್ಟು ಜನರು ಸಾವಿಗೀಡಾದರು. ಸರಿಸುಮಾರು 1.40 ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು. ಅದರಲ್ಲಿ ಹೆಚ್ಚಿನವರು ನಾಗರಿಕರಾಗಿದ್ದು ದುರಾದೃಷ್ಟ.. 
ಜಪಾನ್‌ನ ಹಿರೋಶಿಮಾದಲ್ಲಿ ನಡೆದ ಅಣುಬಾಂಬ್ ನಿಂದಾಗಿ ಈಗಾಲೂ ಅಲ್ಲಿನ ಜನರು ಇದರ ಸಮಸ್ಯೆ ಎದುರಿಸುತ್ತಿದ್ದಾರೆ. ಇವತ್ತಿಗೆ 75 ವರ್ಷವಾದರು ಅದರ ಆ ನೋವು ಮಾತ್ರ ಮಾಸಿಲ್ಲ. ದಶಕಗಳ ಹಿಂದೆ ನಡೆದ ಅಣುಬಾಂಬ್ ದುರಂತದಲ್ಲಿ ಜನರು ಆಕ್ರಂದನ ಮುಗಿಲು ಮುಟ್ಟಿತ್ತು. ಅಮೆರಿಕ ಎರಡನೇ ಮಹಾಯುದ್ಧದ ವೇಳೆ ಜಪಾನ್‌ನ ಹಿರೋಶಿಮಾ ಮೇಲೆ ಅಣುಬಾಂಬ್ ಹಾಕಿ ಆ. 6ರ ಗುರುವಾದ ಇಂದಿಗೆ 75 ವರ್ಷ ಸಂದಿದೆ. ಅಮೆರಿಕಾವು ಮಾರ್ಪಡಿಸಿದ ಬಿ-29 ಯುರೋನಿಯಂ ಗನ್ ಮಾದರಿಯದ್ದಾದ ಬಾಂಬ್ ದಿ ಲಿಟಲ್ ಬಾಯ್ ಎಂಬ ಹೆಸರಿನಿಂದ ಹಿರೋಶಿಮಾದಲ್ಲಿ ದಾಳಿ ನಡೆಸಿತ್ತು. ಆದಾದ 3 ದಿನಗಳ ಬಳಿಕ ದಿ ಫ್ಯಾಟ್ ಮೆನ್ ಎಂಬ ಹೆಸರಿನಿಂದ ನಾಗಾಸಾಕಿಯಲ್ಲಿ ಅಣುಬಾಂಬ್ ಬೀಳಿಸಿತು.
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಮರುನಾಮಕರಣ
ಹಿರೋಶಿಮಾದಲ್ಲಿ ನಡೆದ ಸ್ಪೋಟದ ನಂತರ ಸುಮಾರು 80,000 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿತ್ತು. ಆ ನಂತರ ಈ ಸ್ಪೋಟದ ಭೀಕರತೆಯಿಂದಾಗಿ ಅದೆಷ್ಟೋ ಜನ ಪ್ರಾಣ ಕಳೆದುಕೊಂಡರು. ಸ್ಟೋಟ ನಡೆದ ವರ್ಷಗಳ ನಂತರವೂ ಸಹ ಜನರು ಪ್ರಾಣ ಕಳೆದುಕೊಂಡರು. ಈ ಬಾಂಬ್ ಸ್ಟೋಟದ ಪರಿಣಾಮ ಎಷ್ಟು ಭೀಕರವಾಗಿದೆ ಅಂದರೆ ಜಪಾನಿನಲ್ಲಿ ಜನರು ಇಂದಿಗೂ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
1939 ರಲ್ಲಿ ಶುರುವಾದ ಎರಡನೇ ಮಹಾಯುದ್ಧವು ಆರು ವರ್ಷಗಳಾದರೂ ಮುಗಿದಿರಲಿಲ್ಲ. ನೇರ ಹಣಾಹಣಿ ಬಹುತೇಕ ನಿಂತಿದ್ದರೂ ಶೀತಲ ಸಮರ ಮುಂದುವರಿದೇ ಇತ್ತು. ಆಗಸ್ಟ್ 6ರ ಮುಂಜಾನೆ ಲಿಟ್ಲ ಬಾಯ್ ಎಂಬ ಹೆಸರಿನ 4030 ಕಿ.ಗ್ರಾಂ. ತೂಕದ ಅಣುಬಾಂಬ್ ಅನ್ನು ಹಿಡಿದುಕೊಂಡು ಬಾಂಬರ್ ವಿಮಾನವನ್ನು ಅದರ ಪೈಲೆಟ್ ಪೌಲ್ ದಿ ಟಿಬೆಟ್ಸ್ ಜಪಾನ್ ದೇಶದತ್ತ ಹಾರಿಸಿದ್ದ. ಅವನ ಜತೆ ಅವರ ಸಹ ಪೈಲಟ್‌ಗಳಾಗಿದ್ದ ಕ್ಯಾ. ವಿಲಿಯಂ ಪರ್ಸನ್ ಹಾಗೂ ಲೇ ಮೋರಿಸ್ ಜೆಪ್ಸಿನ್ ಇಬ್ಬರೂ ಬಾಂಬ್ ಸ್ಪೋಟಕ್ಕೆ ಕ್ಷಣಗಣನೆ ಮಾಡುತ್ತಿದ್ದರು. ಬೆಳಗ್ಗಿನ ಜಾವ ಸುಮಾರು ಎಂಟು ಗಂಟೆಯ ಸಮಯಕ್ಕೆ ಸಾವಿರ ಅಡಿಗಳಷ್ಟು ಎತ್ತರದಿಂದ ಹಿರೋಶಿಮಾದ ಕೇಂದ್ರ ಭಾಗವನ್ನು ಗುರಿಯಾಗಿಸಿ ಬಾಂಬ್ ಎಸೆಯಲಾಯಿತು. ಇಡೀ ನಗರಕ್ಕೆ ನಗರವೇ ಛಿದ್ರವಾಗಿ ಹೋಯಿತು.ಇದರ ಪ್ರಬಲ ವಿಕಿರಣ ದೂರ ದೂರಕ್ಕೂ ವ್ಯಾಪಿಸಿ 42 ಚದರ ಮೈಲಿಗಳಷ್ಟು ಪ್ರದೇಶವನ್ನು ಕ್ಷಣಾರ್ಧದಲ್ಲಿ ನಾಶಮಾಡಿತು.
ಬಿಬಿಪಿಎಂಗೆ ಟೆನ್ಷನ್ : ಡೆಲ್ಟಾ ಪ್ಲಸ್ ಸೋಂಕಿತ ಪರಾರಿ
ಈ ಘಟನೆಯಲ್ಲಿ ಸಾಕಷ್ಟು ಜನ ಕಾಣೆಯಾದರೆ ಇನ್ನಷ್ಟು ಜನರು ವಿಕಿರಣದ ದುಷ್ಪರಿಣಾಮಕ್ಕೆ ಒಳಗಾದರು. ಎರಡು ದಿನಗಳ ಕಾಲ ಹಿರೋಶಿಮಾ ನಗರ ಸ್ಥಬ್ಧವಾಗಿತ್ತು. ಈ ಘಟನಯಲ್ಲಿ ಲಕ್ಷಕ್ಕೂ ಅಧಿಕ ಮಂದಿ ಸಾವನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಮುಂದೆ ಬಾಂಬ್ ತಯಾರಿಕೆ ನಿಷೇಧಿಸಿ ವಿಶ್ವಶಾಂತಿ ಸಾರಲೆಂದು ಹಿರೋಶಿಮಾದಲ್ಲಿ ಶಾಂತಿವನ ಉದ್ಯಾನದ ಸ್ಥಾಪನೆಯಾಯಿತು. ಶಾಂತಿವನದ ಮೂಲೆಯಲ್ಲಿ ಅಣುಬಾಂಬಿನ ವಿಧ್ವಂಸಕ್ಕೆ ಸಾಕ್ಷಿ ಯಾಗಿ ಹಿರೋಶಿಮಾ ಶಾಂತಿ ಸ್ಮಾರಕ ಸ್ಥಾಪಿಸಲಾಯಿತು. ಈ ಹಿನ್ನೆಲೆ ಈ ದಿನವನ್ನು ಹಿರೋಶಿಮಾ ದಿನ ಎಂದು ಜಪಾನೀಯರು ಆಚರಿಸುತ್ತಾರೆ.








