ADVERTISEMENT
Tuesday, March 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಇಂದು ಜಪಾನ್ ಪಾಲಿಗೆ ಅತ್ಯಂತ ಕರಾಳ ದಿನ… ಹಿರೋಶಿಮಾ ದಿನ..!

Namratha Rao by Namratha Rao
August 6, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

Related posts

By chanting the Sri Kanakadhara Stotra while sitting in this direction, you will get unbelievable benefits like miracles...!!!

ಶ್ರೀ ಕನಕಧಾರ ಸ್ತೋತ್ರವನ್ನು ಈ ದಿಕ್ಕಿಗೆ ಕುಳಿತು ಪಠಿಸುವುದರಿಂದ ನಡೆಯೋದಿಲ್ಲಾ ಪವಾಡಗಳೇ ನಂಬಲು ಸಾಧ್ಯವೇ ಆಗದೇ ಇರೋ ಲಾಭ ಸಿಗುತ್ತೆ…!!!

March 17, 2026
ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

March 17, 2026

ಇಂದು ಜಪಾನ್ ಪಾಲಿಗೆ ಅತ್ಯಂತ ಕರಾಳ ದಿನ… ಹಿರೋಶಿಮಾ ದಿನ..!

ಇಂದು ಜಪಾನ್, ಅದ್ರಲ್ಲೂ ಹಿರೋಶಿಮಾ ಜನರ ಪಾಲಿಗೆ ಅತ್ಯಂತ ಕರಾಳ ದಿನ…76 ವರ್ಷಗಳ ಹಿಂದೆ 1945ರ ಆಗಸ್ಟ್ 6ರಮದು ಅಮೆರಿಕಾ ನಡೆಸಿದ ಅಣುಬಾಂಬ್ ದಾಳಿಯ ಪರಿಣಾಮವನ್ನೂ ಅಲ್ಲಿನ ಜನರು ಇಂದಿಗೂ ಅನುಭವಿಸುತ್ತಲೇ ಇದ್ದಾರೆ.  ಅಮೆರಿಕಾ ಜಪಾನ್ ​ನ ಹಿರೋಷಿಮಾ ನಗರದ ಮೇಲೆ ಪರಮಾಣು ಬಾಂಬ್ ಎಸೆಯಿತು. ಅದಾದ 3 ದಿನದ ಬಳಿಕ ಮತ್ತೆ ನಾಗಸಾಕಿ ನಗರದ ಮೇಲೆ ಅಣು ಬಾಂಬ್ ಬೀಳಿಸಿತು.

ಜಪಾನ್ ಮೇಲೆ ಹಾಕಿದ ಎರಡು ಅಣು ಬಾಂಬ್​ಗಳಿಂದ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡರು. ಜಪಾನಿನ ಹಿರೋಶಿಮಾ ಮತ್ತು ನಾಗಾಸಾಕಿ ನಗರವನ್ನು ಗುರಿಯಾಗಿಸಿಕೊಂಡು ಅಮೆರಿಕಾ ಪರಮಾಣು ಬಾಂಬ್ ಸಿಡಿಸಿತು. ಆ ಕರಾಳ ದಿನದಂದು ಪ್ರಾಣ ಕಳೆದುಕೊಂಡವರ ಸ್ಮರಣಾರ್ಥವಾಗಿ ಆಗಸ್ಟ್ 6ರಂದು ಪ್ರತೀ ವರ್ಷ ಹಿರೋಷಿಮಾ ದಿನವನ್ನು ಆಚರಿಸಲಾಗುತ್ತದೆ.

1945 ಆಗಸ್ಟ್ 6ನೇ ತಾರೀಕಿನಂದು ಅಮೆರಿಕಾ ಜಪಾನ್​ನ ಹಿರೋಷಿಮಾ ನಗರದ ಮೇಲೆ ಪರಮಾಣು ಬಾಂಬ್ ಎಸೆಯಿತು. ಅದಾದ 3 ದಿನದ ಬಳಿಕ ಮತ್ತೆ ನಾಗಸಾಕಿ ನಗರದ ಮೇಲೆ ಅಣು ಬಾಂಬ್ ಬೀಳಿಸಿತು. ಅದರ ಪರಿಣಾಮ ಶೇ. 40ರಷ್ಟು ಜನರು ಸಾವಿಗೀಡಾದರು. ಸರಿಸುಮಾರು 1.40 ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು. ಅದರಲ್ಲಿ ಹೆಚ್ಚಿನವರು ನಾಗರಿಕರಾಗಿದ್ದು ದುರಾದೃಷ್ಟ.. 

ಜಪಾನ್‌ನ ಹಿರೋಶಿಮಾದಲ್ಲಿ ನಡೆದ ಅಣುಬಾಂಬ್‌ ನಿಂದಾಗಿ  ಈಗಾಲೂ ಅಲ್ಲಿನ ಜನರು ಇದರ ಸಮಸ್ಯೆ ಎದುರಿಸುತ್ತಿದ್ದಾರೆ. ಇವತ್ತಿಗೆ 75 ವರ್ಷವಾದರು ಅದರ ಆ ನೋವು ಮಾತ್ರ ಮಾಸಿಲ್ಲ. ದಶಕಗಳ ಹಿಂದೆ ನಡೆದ ಅಣುಬಾಂಬ್‌ ದುರಂತದಲ್ಲಿ  ಜನರು ಆಕ್ರಂದನ ಮುಗಿಲು ಮುಟ್ಟಿತ್ತು.  ಅಮೆರಿಕ ಎರಡನೇ ಮಹಾಯುದ್ಧದ ವೇಳೆ ಜಪಾನ್‌ನ ಹಿರೋಶಿಮಾ ಮೇಲೆ ಅಣುಬಾಂಬ್‌ ಹಾಕಿ ಆ. 6ರ ಗುರುವಾದ ಇಂದಿಗೆ 75 ವರ್ಷ ಸಂದಿದೆ. ಅಮೆರಿಕಾವು ಮಾರ್ಪಡಿಸಿದ ಬಿ-29 ಯುರೋನಿಯಂ ಗನ್ ಮಾದರಿಯದ್ದಾದ ಬಾಂಬ್ ದಿ ಲಿಟಲ್ ಬಾಯ್ ಎಂಬ ಹೆಸರಿನಿಂದ ಹಿರೋಶಿಮಾದಲ್ಲಿ ದಾಳಿ ನಡೆಸಿತ್ತು. ಆದಾದ 3 ದಿನಗಳ ಬಳಿಕ ದಿ ಫ್ಯಾಟ್ ಮೆನ್ ಎಂಬ ಹೆಸರಿನಿಂದ ನಾಗಾಸಾಕಿಯಲ್ಲಿ ಅಣುಬಾಂಬ್  ಬೀಳಿಸಿತು.

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಮರುನಾಮಕರಣ

ಹಿರೋಶಿಮಾದಲ್ಲಿ ನಡೆದ ಸ್ಪೋಟದ ನಂತರ ಸುಮಾರು 80,000 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿತ್ತು. ಆ ನಂತರ ಈ ಸ್ಪೋಟದ ಭೀಕರತೆಯಿಂದಾಗಿ ಅದೆಷ್ಟೋ ಜನ ಪ್ರಾಣ ಕಳೆದುಕೊಂಡರು. ಸ್ಟೋಟ ನಡೆದ ವರ್ಷಗಳ ನಂತರವೂ ಸಹ ಜನರು ಪ್ರಾಣ ಕಳೆದುಕೊಂಡರು. ಈ ಬಾಂಬ್​ ಸ್ಟೋಟದ ಪರಿಣಾಮ ಎಷ್ಟು ಭೀಕರವಾಗಿದೆ ಅಂದರೆ ಜಪಾನಿನಲ್ಲಿ ಜನರು ಇಂದಿಗೂ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

1939 ರಲ್ಲಿ ಶುರುವಾದ ಎರಡನೇ ಮಹಾಯುದ್ಧವು ಆರು ವರ್ಷಗಳಾದರೂ ಮುಗಿದಿರಲಿಲ್ಲ. ನೇರ ಹಣಾಹಣಿ ಬಹುತೇಕ ನಿಂತಿದ್ದರೂ ಶೀತಲ ಸಮರ ಮುಂದುವರಿದೇ ಇತ್ತು. ಆಗಸ್ಟ್‌ 6ರ ಮುಂಜಾನೆ ಲಿಟ್ಲ ಬಾಯ್‌ ಎಂಬ ಹೆಸರಿನ 4030 ಕಿ.ಗ್ರಾಂ. ತೂಕದ ಅಣುಬಾಂಬ್‌ ಅನ್ನು ಹಿಡಿದುಕೊಂಡು ಬಾಂಬರ್‌ ವಿಮಾನವನ್ನು ಅದರ ಪೈಲೆಟ್‌ ಪೌಲ್‌ ದಿ ಟಿಬೆಟ್ಸ್‌ ಜಪಾನ್‌ ದೇಶದತ್ತ ಹಾರಿಸಿದ್ದ. ಅವನ ಜತೆ ಅವರ ಸಹ ಪೈಲಟ್‌ಗಳಾಗಿದ್ದ ಕ್ಯಾ. ವಿಲಿಯಂ ಪರ್ಸನ್‌ ಹಾಗೂ ಲೇ ಮೋರಿಸ್‌ ಜೆಪ್ಸಿನ್‌ ಇಬ್ಬರೂ ಬಾಂಬ್‌ ಸ್ಪೋಟಕ್ಕೆ ಕ್ಷಣಗಣನೆ ಮಾಡುತ್ತಿದ್ದರು. ಬೆಳಗ್ಗಿನ ಜಾವ ಸುಮಾರು ಎಂಟು ಗಂಟೆಯ ಸಮಯಕ್ಕೆ ಸಾವಿರ ಅಡಿಗಳಷ್ಟು ಎತ್ತರದಿಂದ ಹಿರೋಶಿಮಾದ ಕೇಂದ್ರ ಭಾಗವನ್ನು ಗುರಿಯಾಗಿಸಿ ಬಾಂಬ್‌ ಎಸೆಯಲಾಯಿತು. ಇಡೀ ನಗರಕ್ಕೆ ನಗರವೇ ಛಿದ್ರವಾಗಿ ಹೋಯಿತು.ಇದರ ಪ್ರಬಲ ವಿಕಿರಣ ದೂರ ದೂರಕ್ಕೂ ವ್ಯಾಪಿಸಿ 42 ಚದರ ಮೈಲಿಗಳಷ್ಟು ಪ್ರದೇಶವನ್ನು ಕ್ಷಣಾರ್ಧದಲ್ಲಿ ನಾಶಮಾಡಿತು.

ಬಿಬಿಪಿಎಂಗೆ ಟೆನ್ಷನ್ : ಡೆಲ್ಟಾ ಪ್ಲಸ್ ಸೋಂಕಿತ ಪರಾರಿ

ಈ ಘಟನೆಯಲ್ಲಿ ಸಾಕಷ್ಟು ಜನ ಕಾಣೆಯಾದರೆ ಇನ್ನಷ್ಟು ಜನರು ವಿಕಿರಣದ ದುಷ್ಪರಿಣಾಮಕ್ಕೆ ಒಳಗಾದರು. ಎರಡು ದಿನಗಳ ಕಾಲ ಹಿರೋಶಿಮಾ ನಗರ ಸ್ಥಬ್ಧವಾಗಿತ್ತು. ಈ ಘಟನಯಲ್ಲಿ ಲಕ್ಷಕ್ಕೂ ಅಧಿಕ ಮಂದಿ ಸಾವನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಮುಂದೆ ಬಾಂಬ್‌ ತಯಾರಿಕೆ ನಿಷೇಧಿಸಿ ವಿಶ್ವಶಾಂತಿ ಸಾರಲೆಂದು ಹಿರೋಶಿಮಾದಲ್ಲಿ ಶಾಂತಿವನ ಉದ್ಯಾನದ ಸ್ಥಾಪನೆಯಾಯಿತು. ಶಾಂತಿವನದ ಮೂಲೆಯಲ್ಲಿ ಅಣುಬಾಂಬಿನ ವಿಧ್ವಂಸಕ್ಕೆ ಸಾಕ್ಷಿ ಯಾಗಿ ಹಿರೋಶಿಮಾ ಶಾಂತಿ ಸ್ಮಾರಕ ಸ್ಥಾಪಿಸಲಾಯಿತು. ಈ ಹಿನ್ನೆಲೆ ಈ ದಿನವನ್ನು ಹಿರೋಶಿಮಾ ದಿನ ಎಂದು ಜಪಾನೀಯರು ಆಚರಿಸುತ್ತಾರೆ.

Tags: hiroshima dayjapannagasaki
ShareTweetSendShare
Join us on:

Related Posts

By chanting the Sri Kanakadhara Stotra while sitting in this direction, you will get unbelievable benefits like miracles...!!!

ಶ್ರೀ ಕನಕಧಾರ ಸ್ತೋತ್ರವನ್ನು ಈ ದಿಕ್ಕಿಗೆ ಕುಳಿತು ಪಠಿಸುವುದರಿಂದ ನಡೆಯೋದಿಲ್ಲಾ ಪವಾಡಗಳೇ ನಂಬಲು ಸಾಧ್ಯವೇ ಆಗದೇ ಇರೋ ಲಾಭ ಸಿಗುತ್ತೆ…!!!

by admin
March 17, 2026
0

ನಮಸ್ಕಾರ ಸ್ನೇಹಿತರೆ ಕನಕಧಾರ ಸ್ತೋತ್ರವನ್ನು ಮನೆಯಲ್ಲಿ ಪಠನೆ ಮಾಡುವುದರಿಂದ ಯಾವ ರೀತಿಯ ಫಲಗಳು ದೊರೆಯುತ್ತವೆ ಹಾಗೆಯೇ ಕನಕಧಾರಾ ಸ್ತೋತ್ರವನ್ನು ಪಠಿಸುವಾಗ ಯಾವ ನಿಯಮಗಳನ್ನು ಮುಖ್ಯವಾಗಿ ಅನುಸರಿಸಬೇಕು ಎಂಬುವುದರ...

ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

by Shwetha
March 17, 2026
0

ಮಾರ್ಚ್ 17 ಕರುನಾಡಿಗೆ ಕೇವಲ ಒಂದು ದಿನಾಂಕವಲ್ಲ, ಅದೊಂದು ಹಬ್ಬ. ಕನ್ನಡ ಚಿತ್ರರಂಗದ ಹೆಮ್ಮೆಯ ಪುತ್ರ, ಕರುನಾಡಿನ ಅಚ್ಚುಮೆಚ್ಚಿನ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ...

1200 ಚದರಡಿ ಮೇಲ್ಪಟ್ಟ ಕಟ್ಟಡಗಳಿಗೆ ಓಸಿ ಕಡ್ಡಾಯ ಸಚಿವ ಭೈರತಿ ಸುರೇಶ್ ಖಡಕ್ ಎಚ್ಚರಿಕೆ

1200 ಚದರಡಿ ಮೇಲ್ಪಟ್ಟ ಕಟ್ಟಡಗಳಿಗೆ ಓಸಿ ಕಡ್ಡಾಯ ಸಚಿವ ಭೈರತಿ ಸುರೇಶ್ ಖಡಕ್ ಎಚ್ಚರಿಕೆ

by Shwetha
March 17, 2026
0

ರಾಜಧಾನಿ ಬೆಂಗಳೂರಿನಲ್ಲಿ ಸ್ವಂತದ್ದೊಂದು ಸಣ್ಣ ಮನೆ ಕಟ್ಟಿಕೊಂಡು ನೆಮ್ಮದಿಯಾಗಿ ಬದುಕಬೇಕು ಎಂದು ಕನಸು ಕಾಣುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ರಾಜ್ಯ ಸರ್ಕಾರವು ಬಹುದೊಡ್ಡ ರಿಲೀಫ್...

ಯುದ್ಧದ ಪರಿಣಾಮ.. ತರಕಾರಿ ಬೆಲೆಯಲ್ಲಿ ಭಾರೀ ಇಳಿಕೆ

ಯುದ್ಧದ ಪರಿಣಾಮ.. ತರಕಾರಿ ಬೆಲೆಯಲ್ಲಿ ಭಾರೀ ಇಳಿಕೆ

by Shwetha
March 17, 2026
0

ಇರಾನ್, ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಉದ್ವಿಗ್ನ ಪರಿಸ್ಥಿತಿ ಹಾಗೂ ಯುದ್ಧದ ಪರಿಣಾಮ ಕರ್ನಾಟಕದ ಆರ್ಥಿಕತೆಯ ಮೇಲೂ ಪ್ರಭಾವ ಬೀರಲು ಆರಂಭಿಸಿದೆ. ಯುದ್ಧದ ಪರಿಣಾಮವಾಗಿ ದೇಶಾದ್ಯಂತ...

ಪಿಂಕ್ ಲೈನ್ ಮೆಟ್ರೋಗೆ ಬಂದಿಳಿದ ನಾಲ್ಕನೇ ರೈಲು

ಪಿಂಕ್ ಲೈನ್ ಮೆಟ್ರೋಗೆ ಬಂದಿಳಿದ ನಾಲ್ಕನೇ ರೈಲು

by Shwetha
March 17, 2026
0

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ನಮ್ಮ ಮೆಟ್ರೋ ವಿಸ್ತರಣೆಯ ಭಾಗವಾಗಿ ಪಿಂಕ್ ಲೈನ್‌ನಲ್ಲಿ ಸೇವೆ ಆರಂಭಿಸಲು ಸಿದ್ಧತೆಗಳನ್ನು ವೇಗಗೊಳಿಸಿದೆ. ಮೇ ತಿಂಗಳಲ್ಲಿ ಪಿಂಕ್ ಲೈನ್ ಮೆಟ್ರೋ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram