ಬಾಗಲಕೋಟೆ: ಉತ್ತರ ಕರ್ನಾಟಕ ಭಾಗದ ಶಕ್ತಿ ದೇತೆಗಳಲ್ಲಿ ಒಬ್ಬಳಾದ ಬದಾಮಿಯ ಬನಶಂಕರಿ ಮಹಾರಥೋತ್ಸವ ಅದ್ದೂರಿಯಾಗಿ ನೆರವೇರಿತು.
ಗುರುವಾರ ಸಂಜೆ ಗೋಧೂಳಿ ಮುಹೂರ್ತದಲ್ಲಿ ಹರಿಯುವ ಮಲಪ್ರಭಾ ನದಿಯಿಂದ ಹೊಸಹಗ್ಗವನ್ನು ಭಕ್ತರು ತರುತ್ತಿದ್ದಂತೆ ಹೊಸ ಹಗ್ಗದ ಮೂಲಕ ಸಾವಿರಾರು ಭಕ್ತರು ತೇರು ಎಳೆದು ಪುನೀತರಾದರು.
ಪಂಡಿತ್ ದೈವಜ್ಞ ಪ್ರಧಾನ ತಾಂತ್ರಿಕ್ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲಾಡಳಿತ ಬನಶಂಕರಿ ದೇವಿ ಜಾತ್ರೆ ರದ್ದುಗೊಳಿಸಿತ್ತು. ಆದರೆ ಭಕ್ತರ ಒತ್ತಾಯದ ಮೇರೆಗೆ ಈ ಬಾರಿ ಸರಳವಾಗಿ ಆಚರಿಸಲು ಅನುಮತಿ ನೀಡಲಾಗಿತ್ತು. ರಥಕ್ಕೆ ಸಾವಿರಾರು ಭಕ್ತರು ಉತ್ತತ್ತಿ, ಬಾಳೆಹಣ್ಣು ಸಮರ್ಪಿಸಿ ಭಕ್ತಿಭಾವ ಮೆರೆದರು.
ಪ್ರತಿವರ್ಷ ಬನಶಂಕರಿ ಜಾತ್ರೆ ಅಂಗವಾಗಿ ತಿಂಗಳ ಪೂರ್ತಿ ನಾಟಕ ಪ್ರದರ್ಶನ, ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿತ್ತು. ಕೊರೊನಾ ಹಿನ್ನೆಲೆಯಲ್ಲಿ ನಾಟಕ ಪ್ರದರ್ಶನಕ್ಕೆ ನಿಷೇಧ ಇರುವುದರಿಂದ ಜಾತ್ರೆಯಲ್ಲಿ ಹಿಂದಿನ ವರ್ಷಗಳ ಕಳೆ ಕಟ್ಟಿಲ್ಲ.
ಹೊಸ ಹಗ್ಗ ತರುವ ಭಕ್ತರು..
ಪ್ರತಿವರ್ಷ ಬಾದಾಮಿ ಬನಶಂಕರಿ ದೇವಿ ರಥೋತ್ಸವಕ್ಕೆ ಹೊಸ ಹಗ್ಗದಿಂದಲೇ ಭಕ್ತರು ತೇರು ಎಳೆಯುವುದು ಸಂಪ್ರಧಾಯ. ಈ ಹಗ್ಗವನ್ನು ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮದ ಭಕ್ತರು ತರುತ್ತಾರೆ. ಮಲಪ್ರಭಾ ನದಿಯಲ್ಲೇ ಹೊಳೆ ಬಂಡಿ ಮೂಲಕ ಜೈಕಾರ ಹಾಕುತ್ತಾ ಹೊಳೆ ಬಂಡಿಯನ್ನು ಎತ್ತುಗಳು ಮತ್ತು ಭಕ್ತರು ಎಳೆದು ತರುವುದು ಇಲ್ಲಿನ ವಿಶೇಷ. ಅದರಂತೆ ಈ ವರ್ಷವೂ ಹರಿಯುವ ನದಿಯಲ್ಲೇ ಭಕ್ತರು ಹೊಳೆ ಬಂಡಿ ಓಡಿಸಿಕೊಂಡು ಬಂದರು.
ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಬಳಿಕ ದೇಗುಲದಾವರಣದಲ್ಲಿ ಮೆರವಣಿಗೆ ನಡೆಯಿತು. ಇನ್ನು ಜಾತ್ರೋತ್ಸವ ಹಿನ್ನೆಲೆ ಬನಶಂಕರಿ ದೇವಿಗೆ ವಿಶೇಷ ಅಲಂಕಾರ, ಪೂಜಾ ವಿಧಿವಿಧಾನಗಳು ನಡೆದವು. ರಥೋತ್ಸವದ ಬಳಿಕ ಭಕ್ತರು ದೇಗುಲ ದರ್ಶನಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಹೀಗಾಗಿ ಹೊರಗಿನಿಂದಲೇ ಭಕ್ತರು ಕಾಯಿ ಒಡೆದು, ದೂರದಿಂದಲೇ ದರ್ಶನ ಪಡೆದು ಊರುಗಳಿಗೆ ವಾಪಸ್ ಆದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel