ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನವು ಕರ್ನಾಟಕದ ಕೊಪ್ಪಳ ಜಿಲ್ಲೆಯ ಹುಲಿಗಿ ಗ್ರಾಮದಲ್ಲಿದೆ. ಈ ಕ್ಷೇತ್ರವು ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿದೆ ಎಂದು ನಂಬಲಾಗಿದೆ. ಹಿಂದೆ ಈ ಪ್ರದೇಶವನ್ನು ವ್ಯಾಘ್ರಪುರಿ ಎಂದು ಕರೆಯಲಾಗುತ್ತಿತ್ತು, ಆದ್ದರಿಂದ ದೇವಿಯನ್ನು ವ್ಯಾಘ್ರೇಶ್ವರಿ ಎಂದೂ ಕರೆಯುತ್ತಾರೆ. ತಾಯಿ ಹುಲಿಗೆಮ್ಮ ರೇಣುಕಾ ಯಲ್ಲಮ್ಮ ದೇವಿಯ ಸ್ವರೂಪವೆಂದು ಭಕ್ತರು ನಂಬುತ್ತಾರೆ.
ಇತಿಹಾಸ:
ಶ್ರೀ ಹುಲಿಗೆಮ್ಮ ದೇವಿಯವರ ಈ ದೇವಸ್ಥಾನವು ಶಕ್ತಿಯ ಪೀಠವಾಗಿದ್ದು, ಸುಮಾರು ಎಂಟು ನೂರು ವರ್ಷಗಳ ಇತಿಹಾಸವನ್ನು ಹೊಂದಿದೆ. ಇದೇ ಗ್ರಾಮದವರಾದ ಶ್ರೀ ನಾಗಜೋಗಿ ಮತ್ತು ಶ್ರೀ ಬಸವಜೋಗಿ ಇವರು ಇಲ್ಲಿಯ ಶಿವಾಲಯದ ಅರ್ಚಕರಾದ ಶ್ರೀ ಸೋಮನಾಥಭಟ್ಟರ ಶಿಷ್ಯರಾಗಿದ್ದು, ಶ್ರೀ ದೇವಿಯ ಭಾಗವತದ ಮಹಿಮೆಯನ್ನು ಈರ್ವರಿಗೂ ಉಪದೇಶಿಸುತ್ತಿದ್ದರು. ಜೋಗಿಯರೀರ್ವರು ಪ್ರತಿ ಹುಣ್ಣಿಮೆಯಂದು ಸವದತ್ತಿಯ ಶ್ರೀ ಎಲ್ಲಮ್ಮನ ಕ್ಷೇತ್ರಕ್ಕೆ ತೆರಳಿ ದೇವಿಯ ದರ್ಶನ ಪಡೆಯುತ್ತಿದ್ದರು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಮಳೆಗಾಲದ ಪೂರ್ಣಿಮೆಯ ಒಂದು ದಿನ ಶ್ರೀ ದೇವಿ ಎಲ್ಲಮ್ಮನ ದರ್ಶನಕ್ಕೆ ತೆರಳುತ್ತಿದ್ದಾಗ ಮಳೆಯಿಂದ ಪ್ರಯಾಣಕ್ಕೆ ಅಡಚಣೆಯಾಗಿ ತೊಂದರೆಗೊಳಗಾದರು. ಶ್ರೀ ದೇವಿ ಎಲ್ಲಮ್ಮನ ಸ್ಮರಣೆ ಮಾಡುತ್ತ ಇಡೀ ರಾತ್ರಿ ಮಳೆಯಲ್ಲಿ ಕಳೆಯುವಂತಾಯಿತು. ಉಷ:ಕಾಲದ ಸಮಯದಲ್ಲಿ ಶ್ರೀ ದೇವಿ ಎಲ್ಲಮ್ಮನೇ ಸ್ವಪ್ನದಲ್ಲಿ ಬಂದು “ಇನ್ನು ಮುಂದೆ ನೀವು ಕಷ್ಟಪಟ್ಟು ಇಲ್ಲಿಯವರೆಗೆ ಬರಬೇಕಾಗಿಲ್ಲ-ನಿಮ್ಮೂರಿನ ಶಿವದೇವಾಲಯದ ಪಶ್ಚಿಮದಲ್ಲಿ ನನ್ನ ಸಾನಿಧ್ಯವಿದೆ” ಎಂದು ಉಪದೇಶ ಮಾಡಿದಂತಾಯಿತು.
ಜೋಗಿಯರೀರ್ವರು ಶ್ರೀ ಸಮನಾಥಭಟ್ಟರೊಡಗೂಡಿ ಶ್ರೀ ಸೋಮೇಶ್ವರ ದೇವಾಲಯದ ಪಶ್ಚಿಮದಲ್ಲಿ ಶೋಧಿಸಿದಾಗ ಸಾಲಿಗ್ರಾಮ ಮತ್ತು ಶ್ರೀಚಕ್ರ ದೊರೆತವು. ಅದೇ ಸ್ಥಾನದಲ್ಲಿ ಶ್ರೀ ದೇವಿಯವರ ಪ್ರತಿಷ್ಠಾಪನೆಯಾಯಿತು. ಈ ರೀತಿಯಲ್ಲಿ ಪ್ರತಿಷ್ಠಾಪನೆಗೊಂಡ ಸ್ಥಳವೇ ಈಗಿನ ಶ್ರೀ ಹುಲಿಗೆಮ್ಮ ದೇವಿಯ ಗರ್ಭಗುಡಿ. ಹೀಗೆ ಸವದತ್ತಿಯಲ್ಲಿ ಶ್ರೀ ದೇವಿಯು ಎಲ್ಲಮ್ಮ ಎನಿಸಿದರೆ, ಹುಲಿಗಿಯಲ್ಲಿ ಈ ಆದಿಶಕ್ತಿ ದೇವಿಯು ಶ್ರೀ ಹುಲಿಗೆಮ್ಮ ಎಂದು ಹೆಸರುವಾಸಿಯಾಗಿದ್ದಾಳೆ.
ದೇವಸ್ಥಾನದ ವಾಸ್ತುಶಿಲ್ಪವು 13ನೇ ಶತಮಾನಕ್ಕೆ ಸೇರಿದ್ದು ಎಂದು ಅಂದಾಜಿಸಲಾಗಿದೆ. ದೇವಸ್ಥಾನದ ಮುಂದೆ ಮಾತಂಗಿ, ಪರಶುರಾಮ, ಸುಬ್ರಹ್ಮಣ್ಯ, ಪಾರ್ವತಿ, ಗಣಪತಿ ಮತ್ತು ನವಗ್ರಹಗಳ ಗುಡಿಗಳಿವೆ.
ಮಹಿಮೆ:
ಹುಲಿಗೆಮ್ಮ ದೇವಿ ಭಕ್ತರನ್ನು ಕಷ್ಟಗಳಿಂದ ಕಾಪಾಡುತ್ತಾಳೆ ಮತ್ತು ಅವರ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎಂಬ ನಂಬಿಕೆ ಇದೆ.ದೂರದೂರುಗಳಿಂದ ಭಕ್ತರು ಇಲ್ಲಿಗೆ ಬಂದು ದೇವಿಯ ದರ್ಶನ ಪಡೆಯುತ್ತಾರೆ. ವಿಶೇಷವಾಗಿ ಮಂಗಳವಾರ, ಶುಕ್ರವಾರ ಮತ್ತು ಹುಣ್ಣಿಮೆಯ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ.
ಪ್ರತಿ ವರ್ಷ ಭರತ ಹುಣ್ಣಿಮೆಯ ನಂತರ ಒಂಬತ್ತು ದಿನಗಳ ಕಾಲ ಇಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರದಿಂದಲೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಹೊರಗೆ ಬಯಲಿನಲ್ಲಿ ಪಾಯಸವನ್ನು ತಯಾರಿಸಿ, ಕುದಿಯುವ ಪಾಯಸದ ಪಾತ್ರೆಗೆ ಕೈ ಹಾಕಿ ದೇವಿಗೆ ನೈವೇದ್ಯವನ್ನು ಅರ್ಪಿಸುವುದು ಇಲ್ಲಿನ ವಿಶೇಷ ಆಚರಣೆಯಾಗಿದೆ.
ಇತ್ತೀಚೆಗೆ ದೇವಸ್ಥಾನದ ಆಡಳಿತ ಮಂಡಳಿಯು ಭಕ್ತರಿಗೆ ಆನ್‌ಲೈನ್ ಪ್ರಸಾದ ಸೇವೆಯನ್ನು ಸಹ ಆರಂಭಿಸಿದೆ.
ಒಟ್ಟಾರೆಯಾಗಿ, ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನವು ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿರುವ ಒಂದು ಪ್ರಮುಖ ಶಕ್ತಿ ಕೇಂದ್ರವಾಗಿದೆ.








