ಹಲಸೂರಿನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನವು ಬೆಂಗಳೂರಿನ ಅತ್ಯಂತ ಹಳೆಯ ಮತ್ತು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಸುಮಾರು 250 ವರ್ಷಗಳಿಗಿಂತಲೂ ಹಳೆಯದು ಎಂದು ಹೇಳಲಾಗುತ್ತದೆ. ಇದು ಹಲಸೂರು ಮೆಟ್ರೋ ನಿಲ್ದಾಣದ ಬಳಿ, ಶ್ರೀ ಆದಿ ವಿನಾಯಕ ದೇವಸ್ಥಾನದ ಎದುರು ಮತ್ತು ಪ್ರಸಿದ್ಧ ಹಲಸೂರು ಸೋಮೇಶ್ವರ ದೇವಸ್ಥಾನದ ಸಮೀಪದಲ್ಲಿದೆ.
ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯವು ಬಹುಶಃ 18ನೇ ಶತಮಾನಕ್ಕೆ ಸೇರಿರುತ್ತದೆ, ಈ ದೇವಸ್ಥಾನ ನಿರ್ಮಾಣವಾಗಿ ಸುಮಾರು 250 ವರ್ಷಗಳಾಗಿರುತ್ತದೆ ಎಂಬ ಪ್ರತೀತಿ ಇದೆ. ಆದರೆ ಈ ಕುರಿತು ಯಾವುದೇ ಶಾಸನ ಗ್ರಂಥಗಳಲ್ಲಿ ಉಲ್ಲೇಖವಿರುವುದಿಲ್ಲ.
ಈ ಸ್ಥಳದಲ್ಲಿ ಅನೇಕ ವರ್ಷಗಳ ಹಿಂದೆ ಒಂದು ದೊಡ್ಡ ಹುತ್ತವಿತ್ತು ಅನೇಕ ಭಕ್ತಾದಿಗಳಿಂದ ಆ ಹುತ್ತಕ್ಕೆ ಪೂಜೆಯು ನಡೆಯುತ್ತಿತ್ತು. ಒಂದಾನೊಂದು ದಿನ ರಾಜ ವಂಶಸ್ಥರೊಬ್ಬರು ಮದರಾಸಿಗೆ ಹೋಗುವ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಭಕ್ತಾದಿಗಳನ್ನು ನೋಡಿ ವಿಶೇಷವೇನೆಂದು ಕೇಳಲು ಅಲ್ಲಿಯ ಭಕ್ತಾದಿಗಳು ಹುತ್ತಕ್ಕೆ ಹರಕೆ ಹೊತ್ತು ಪೂಜೆ ಮಾಡುವುದರಿಂದ ನಾಗರಾಜನು ಅವರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸಿ ಮಂಗಳವನ್ನುಂಟು ಮಾಡುವನೆಂದು ನಂಬಿ ಪೂಜಿಸುತ್ತಿರುವುದಾಗಿ ತಿಳಿಸಿದರು. ರಾಜ ಪರಿವಾರದವರಲ್ಲಿ ಒಬ್ಬರಿಗೆ ದೃಷ್ಠಿ ದೋಷವಿತ್ತು, ದೃಷ್ಠಿ ದೋಷದ ನಿವಾರಣೆಗಾಗಿ ಹರಕೆ ಹೊತ್ತರು, ಕಾಲನಂತರ ಸುಬ್ರಹ್ಮಣ್ಯನ ಅನುಗ್ರಹದಿಂದ ದೃಷ್ಟಿ ದೋಷ ನಿವಾರಣೆಯಾದ್ದರಿಂದ ಮತ್ತು ಶ್ರೀ ಸ್ವಾಮಿಯು ಭಕ್ತನ ಕನಸಿನಲ್ಲಿ ಬಂದು ತನ್ನ ಮೂರ್ತಿಯನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಲು ಆಗ್ರಹಿಸಿದನು. ತದ ನಂತರ ಹುತ್ತದ ಪಕ್ಕದಲ್ಲಿ ಅಲ್ಲಿಯ ರಾಜನು ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯವನ್ನು ನಿರ್ಮಿಸಲಾಯಿತು ಎಂದು ವಾಡಿಕೆಯ ಮಾತು ಪ್ರಚಲಿತದಲ್ಲಿದೆ. ದೇವಾಲಯವು ಋಷಿಗಳು, ಸಿದ್ದ ಪುರುಷರುಗಳಿಂದ ಮತ್ತು ಮೂಲ ಮೂರ್ತಿ/ಇತರೆ ಮೂರ್ತಿಗಳು ಉದ್ಭವ ಮೂರ್ತಿಗಳಾಗಿರುವುದಿಲ್ಲ, ಮಾನುಷ ಪ್ರತಿಷ್ಟೆಯಾಗಿರುತ್ತದೆ. ಬೆಂಗಳೂರು ನಗರದಲ್ಲಿ ವಿಭಿನ್ನ ಜನಗಳಿದ್ದರೂ ಉತ್ತಮ ಭಾಂದವ್ಯವಿರುತ್ತದೆ. ವಿವಿಧ ಜನಾಂಗದವರು ತಮ್ಮಗಳ ಧರ್ಮಸಂಸ್ಕೃತಿ, ಧಾರ್ಮಿಕತೆ, ಉತ್ಸವಾಚರಣೆಗಳು ಹಾಗೂ ಹಲಸೂರಿನ ಸುತ್ತಮುತ್ತ ತಮಿಳು ಜನಾಂಗದವರು ಹೆಚ್ಚು ನೆಲೆಸಿರುವ ಕಾರಣ, ತಮಿಳು ಜನಾಂಗದ ಬಹುತೇಕ ಜನರು ಶ್ರೀ ಸುಬ್ರಹ್ಮಣ್ಯಸ್ವಾಮಿಯನ್ನು ಮುರುಗನ್ ಎಂಬ ಹೆಸರಿನಿಂದಲೂ ಕರೆಯುತ್ತಾರೆ, ಈ ದೇವರ ಮೂರ್ತಿಯನ್ನು ಭಕ್ತಾದಿಗಳಿಂದ ಪ್ರತಿಷ್ಟಾಪಿಸಲಾಗಿರುತ್ತದೆ. ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವರಿಗೆ ಹರಕೆ ಹೊತ್ತು ಪೂಜೆ ಮಾಡುವುದರಿಂದ ಶ್ರೀ ಸ್ವಾಮಿಯ ಅನುಗ್ರಹದಿಂದ ಅವರ ಕಷ್ಟ ಕಾರ್ಪಣ್ಯಗಳು, ಕಲ್ಯಾಣಬಾಗ್ಯ, ಮಂಗಳ ಕಾರ್ಯಗಳು ಇತರೆ ಫಲಗಳು ಲಭಿಸುತ್ತವೆ ಮತ್ತು ನಾಗ ದೋಷ, ಸರ್ಪ ದೋಷ, ಇನ್ನು ಹಲವಾರು ದೋಷಗಳಿಗೆ ಹರಕೆ ಹೊತ್ತು ದೋಷ ಪರಿಹಾರ ಮಾಡಿಕೊಳ್ಳುತ್ತಾರೆ. ಶ್ರೀ ಸ್ವಾಮಿಗೆ ಮಹಾಭಿಷೇಕ, ಪಂಚಾಮೃತ ಅಭಿಷೇಕ, ಗಂಧದಲಂಕಾರ, ವಿಭೂತಿ, ಹೂವು, ಪೂಜೆ ಇತರೆ ಅಲಂಕಾರಗಳಿಂದ ಶ್ರೀ ಸ್ವಾಮಿಯು ಪ್ರಸಿದ್ದಿಯಾಗಿದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಶ್ರೀ ಸ್ವಾಮಿಯವರಿಗೆ ಪ್ರತಿ ಮಂಗಳವಾರ ಮಹಾಭಿಷೇಕ, ಗಂಧ ಹಾಗೂ ವಿಭೂತಿ ಅಲಂಕಾರಗಳು, ಮಹಾಮಂಗಳಾರತಿ ಇನ್ನು ಇತರೆ ವಿಶೇಷ ಪೂಜೆಗಳು ನಡೆಯುತ್ತವೆ. ದೇವಾಲಯದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿಯವರ ಆಡಿಕೃತಿಕೆ ದಿನದಂದು ಭಕ್ತಾದಿಗಳು ಬೆನ್ನಿಗೆ ವೇಲಾಯುಧಗಳನ್ನು ಚುಚ್ಚಿಕೊಂಡು ಕಾವಡಿ, ಇತರೆ ಆಟದೊಂದಿಗೆ ಮೆರವಣಿಗೆ ಹೋಗುವುದು ವಾಡಿಕೆ. ತೆಪ್ಪೋತ್ಸವಗಳಂದು ವಿಶೇಷ ಪೂಜೆಗಳನ್ನು ಉತ್ಸವ ಮಾಡಲಾಗುತ್ತದೆ. ಲಕ್ಷಾರ್ಚನೆ, ಸುರಸಂಹಾರಗಳು, ಶ್ರೀ ಸ್ವಾಮಿಯ ವಿಶೇಷತೆ ಮತ್ತು ಸಂಪ್ರದಾಯವಾಗಿರುತ್ತದೆ. ಕಾರ್ತಿಕ ದೀಪಂ, ಪಂಗನಿ ಉತ್ತರು, ಇತರೆ ಹಬ್ಬಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯವು ಹಲಸೂರುನಲ್ಲಿದ್ದು, ನಗರದ ಮಧ್ಯೆಯಿರುತ್ತದೆ. ಶ್ರೀ ದೇವಾಲಯದ ಸುತ್ತ/ಸಮೀಪ ಪ್ರಕೃತಿಯ ವಿಶೇಷತೆಗಳೇನು ಇರುವುದಿಲ್ಲ. ಈ ದೇವಾಲಯವನ್ನು ಕಾಲಾಂತರದಲ್ಲಿ ಯಾವ ರಾಜ / ಅರಸ ಪಾಳೆಗಾರ ಅಥವಾ ಯಾರಾದರು ಜೀರ್ಣೋದ್ದಾರಗೊಳಿಸಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇರುವುದಿಲ್ಲ. ದೇವಾಲಯದ ಮೂಲ ಮೂರ್ತಿಯು ಶಿಲೆಯಿಂದ ರಚಿಸಲ್ಪಟ್ಟಿರುತ್ತದೆ. ಯಾವುದೇ ವಿಶೇಷ ಕಲೆಗಳಿರುವುದಿಲ್ಲ. ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವರಿಗೆ ಪ್ರತಿ ತಿಂಗಳ ಷಷ್ಟಿ, ಹಾಗೂ ಕೃತಿಕ ನಕ್ಷತ್ರ, ಮಂಗಳವಾರಗಳಂದು ಪೂಜೆ ಸಲ್ಲಿಸಿದರೆ ಭೂಮಿ ಸಂಬಂಧವಾದ ವ್ಯಾಜ್ಯಗಳಿಗೆ ಪರಿಹಾರ ಸಿಗುವುದಾಗಿ ಭೂ ಲಾಭ, ವಿಶೇಷ ಫಲ ಪ್ರಾಪ್ತಿಯಾಗುವುದಾಗಿ ನಂಬಿಕೆಯಿದೆ ಹಾಗೂ ಹರಕೆ ಹೊತ್ತು ಪೂಜೆ ಮಾಡುವುದರಿಂದ ಶ್ರೀ ಸ್ವಾಮಿಯ ಅನುಗ್ರಹದಿಂದ ಅವರ ಕಷ್ಟ ಕಾರ್ಪಣ್ಯಗಳು ದೂರವಾಗುತ್ತವೆ. ಕಲ್ಯಾಣ, ಮಂಗಳ ಕಾರ್ಯಗಳು ಇತರೆ ಶುಭಫಲಗಳು ಲಭಿಸುತ್ತವೆ ಮತ್ತು ನಾಗ ದೋಷ, ಸರ್ಪ ದೋಷ, ಇನ್ನು ಹಲವಾರು ದೋಷಗಳಿಗೆ ಹರಕೆ ಹೊತ್ತು ದೋಷ ಪರಿಹಾರ ಮಾಡಿಕೊಳ್ಳುತ್ತಾರೆ. ಮತ್ತು ಅನ್ನದಾನ, ತುಲಾಭಾರ, ಪ್ರಸಾದ ಸೇವೆಗಳನ್ನು ಹಲವಾರು ಭಕ್ತರು ಸಲ್ಲಿಸುತ್ತಾರೆ. ದೇವಾಲಯದ ಒಳ ಆವರಣದಲ್ಲಿ ಕಲ್ಯಾಣಿ ಇರುತ್ತದೆ. ಆದರೆ ಭಕ್ತಾದಿಗಳಿಗೆ ಕಲ್ಯಾಣಿಯಲ್ಲಿ ಸ್ನಾನ ಮಾಡಲು ಅವಕಾಶವಿರುವುದಿಲ್ಲ. ಆದರೆ ವಿವಿಧ ದೋಷ ಪರಿಹಾರಕ್ಕಾಗಿ ಇಲ್ಲಿ ಭಕ್ತಾದಿಗಳು ಪಂಚಾಂಗದಂತೆ ನಡೆಯುವ ಶ್ರೀ ಸುಬ್ರಹ್ಮಣ್ಯಸ್ವಾಮಿಯವರ ತೆಪ್ಪೋತ್ಸವದಲ್ಲಿ ಸೇವೆ ಸಲ್ಲಿಸುತ್ತಾರೆ. ಭಕ್ತಾದಿಗಳಿಗೆ ಅವರ ಕೋರಿಕೆಯಂತೆ ಶ್ರೀ ಸ್ವಾಮಿಯ ಸನ್ನಿದಿಯಲ್ಲಿ ತೀರ್ಥಕಾಯಿ ನಿಂಬೆಹಣ್ಣು ಇಟ್ಟು ಪೂಜೆ ಮಾಡಿ ಕೊಡಲಾಗುತ್ತದೆ.
ಬಾಗಿಲು ತೆರೆಯುವ ಸಮಯ
06:30 AM IST – 12:30 PM IST
05:30 PM IST – 08:30 PM IST
ಬಾಗಿಲು ಮುಚ್ಚುವ ಸಮಯ
08:30 PM IST
ಸಾಮಾನ್ಯ ದರ್ಶನ