ಐಪಿಎಲ್ ನಲ್ಲಿ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ತೋರುತ್ತಿದ್ದು, ಮತ್ತೊಂದು ವಿಶೇಷ ದಾಖಲೆ ಬರೆದಿದ್ದಾರೆ.
ಐಪಿಎಲ್ ನ 25ನೇ ಪಂದ್ಯದಲ್ಲಿ ಮುಂಬೈ ತಂಡವು ಆರ್ ಸಿಬಿ ವಿರುದ್ಧ ಭರ್ಜರಿಯಾಗಿ ಜಯ ಸಾಧಿಸಿದೆ. ರನ್ ಚೇಸಿಂಗ್ ಮಾಡುವ ವೇಳೆ ರೋಹಿತ್ ಶರ್ಮಾ 24 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 3 ಫೋರ್ ಗಳೊಂದಿಗೆ 38 ರನ್ ಗಳಿಸಿದ್ದರು. ಈ ಮೂರು ಸಿಕ್ಸರ್ ಮೂಲಕ ರೋಹಿತ್ ಶರ್ಮಾ ವಾಂಖೆಡೆ ಸ್ಟೇಡಿಯಂನಲ್ಲಿ 100 ಸಿಕ್ಸ್ಗಳನ್ನು ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಒಂದೇ ಸ್ಟೇಡಿಯಂನಲ್ಲಿ 100 ಸಿಕ್ಸರ್ ಸಿಡಿಸಿ 2ನೇ ಭಾರತೀಯ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ. ವಿರಾಟ್ ಕೊಹ್ಲಿ ಇದಕ್ಕೂ ಮುನ್ನ ಇಂತಹ ದಾಖಲೆ ಮಾಡಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಿಂಗ್ ಕೊಹ್ಲಿ 114 ಸಿಕ್ಸರ್ ಬಾರಿಸಿದ್ದಾರೆ. ಈಗ ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ 2ನೇ ಸ್ಥಾನದಲ್ಲಿದ್ದಾರೆ.
ಅಲ್ಲದೇ, ಇನ್ನು ಕೇವಲ 3 ಸಿಕ್ಸರ್ ಗಳನ್ನು ಸಿಡಿಸಿದರೆ ಟಿ20 ಕ್ರಿಕೆಟ್ನಲ್ಲಿ 500 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಲಿದ್ದಾರೆ.