Hockey World Cup : ಆಸ್ಟ್ರೇಲಿಯಾ, ಇಂಗ್ಲೆಂಡ್ ಭರ್ಜರಿ ಜಯ
ಜೆರ್ಮಿ ಹೆವಾರ್ಡ್ ಮತ್ತು ಟಾಮ್ ಕ್ರೇಗ್ ಅವರ ತಲಾ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ಫ್ರಾನ್ಸ್ ವಿರುದ್ಧ ದಾಖಲೆಯ 8-0 ಗೋಲುಗಳಿಂದ ಭರ್ಜರಿ ಗೆಲುವು ದಾಖಲಿಸಿದೆ.
ಪಂದ್ಯದುದ್ದಕ್ಕೂ ಸಂಪುರ್ಣ ಹಿಡಿತ ಸಾಧಿಸಿದ ಆಸ್ಟ್ರೇಲಿಯಾ ಸ್ಮರಣೀಯ ಗೆಲುವು ದಾಖಲಿಸಿತು. ಟಾಮ್ ಕ್ರೇಗ್ 8, 31, ಮತ್ತು 44 ನಿಮಿಷಗಳಲ್ಲಿ ಗೋಲು ಹೊಡೆದರು. ತಂಡದ ಮತ್ತೋರ್ವ ಆಟಗಾರ ಜೆರ್ಮಿ ಹೆವಾರ್ಡ್ 12 ನಿಮಿಷಗಳ ಅಂತರದಲ್ಲಿ ಮೂರು ಪೆನಾಲ್ಟಿ ಅವಕಾಶಗಳನ್ನು ಗೋಲನ್ನಾಗಿ ಪರಿವರ್ತಿಸಿದರು. ಹೆವಾರ್ಡ್ 26, 28, 38ನೇ ನಿಮಿಷಗಳಲ್ಲಿ ಗೋಲು ಹೊಡೆದರು.
ಕಠಿಣ ಗೆಲುವು ದಾಖಲಿಸಿದ ಅರ್ಜೆಂಟಿನಾ
ಮಾಜಿ ಒಲಿಂಪಿಕ್ ಚಾಂಪಿಯನ್ ಅರ್ಜೆಂಟಿನಾ ಹಾಕಿ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ತಿಣುಕಾಡಿ 1-0 ಗೋಲಿನಿಂದ ಗೆದ್ದುಕೊಂಡಿತು.
ಮೊದಲ ಎರಡೂ ಕ್ವಾರ್ಟರ್ನಲ್ಲಿ ಕಠಿಣವಾಗಿ ಹೋರಾಡಿದ ಅರ್ಜೆಂಟಿನಾ 42ನೇ ನಿಮಿಷದಲ್ಲಿ ಕಾಸೆಲ್ಲಾ ಮೈಕೊ ಅವರ ನೆರೆವಿನಂದ ಗೋಲು ಹೊಡೆಯಿತು.
ಮೊದಲ ಕ್ವಾರ್ಟರ್ನಲ್ಲಿ ಒತ್ತಡ ಹಾಕಿ ದ.ಆಫ್ರಿಕಾಕ್ಕೆ ಅವಕಾಶವಿದ್ದರೂ ಗೋಲು ಹೊಡೆಯುವಲ್ಲಿ ವಿಫಲವಾಯಿತು. ಎರಡನೆ ಕ್ವಾರ್ಟರ್ನಲ್ಲಿ ಬಲಿಷ್ಠವಾಗಿ ಬಂದ ಅರ್ಜೆಂಟಿನಾ ಸಿಕ್ಕ 3 ಪೆನಾಲ್ಟಿ ಅವಕಾಶನ್ನು ಕೈಚೆಲ್ಲಿತು.
ಇಂಗ್ಲೆಂಡ್ಗೆ ಭರ್ಜರಿ ಜಯ
ಮತ್ತೊಂದು ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡ ಮೊದಲ ಬಾರಿ ವಿಶ್ವಕಪ್ ಆಡುತ್ತಿರುವ ವೇಲ್ಸ್ ತಂಡವನ್ನು 5-0 ಗೋಲುಗಳಿಂದ ಸೋಲಿಸಿತು. ಇಂಗ್ಲೆಂಡ್ ಪರ ಪಾರ್ಕ್ ನಿಕೊಲೊಸ್ (0), ಅನಸೆಲ್ ಲಿಯಾಮ್ (37ನೇ ನಿಮಿಷ),ರೊಪೆರ್ ಫಿಲ್ (41 ನೇ ನಿಮಿಷ), ನಿಕೊಲೊಸ್ (57ನೇ ನಿಮಿಷ) ಗೋಲುಗಳನ್ನು ಹೊಡೆದರು.
Hockey World Cup , Australia , england won