Hockey Worldcup : ನಿರೀಕ್ಷೆ ಮಟ್ಟದಲ್ಲಿ ಪ್ರದರ್ಶನ ನೀಡಲು ವಿಫಲವಾದ ಭಾರತ ಪುರುಷರ ಹಾಕಿ ತಂಡ
ನಿರೀಕ್ಷೆ ಮಟ್ಟದಲ್ಲಿ ಪ್ರದರ್ಶನ ನೀಡಲು ವಿಫಲವಾದ ಭಾರತ ಪುರುಷರ ಹಾಕಿ ತಂಡ ವೇಲ್ಸ್ ವಿರುದ್ಧ 4-2 ಗೋಲುಗಳಿಂದ ಗೆಲುವು ಸಾಧಿಸಿತ್ತಾದರೂ ನೇರವಾಗಿ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು.
ಕ್ವಾರ್ಟರ್ ಫೈನಲ್ ಪ್ರವೇಶಿಸಬೇಕಿದ್ದಲ್ಲಿ ಭಾರತ ಭಾನುವಾರ ನ್ಯೂಜಿಲೆಂಡ್ ವಿರುದ್ಧ ಕ್ರಾಸ್ ಓವರ್ ಪಂದ್ಯವನ್ನು ಗೆಲ್ಲಬೇಕಿದೆ.
ಕಳಿಂಗಾ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಭಾರತ ಹಾಕಿ ತಂಡ ನಿರೀಕ್ಷೆಗೆ ತಕ್ಕಂತೆ ಆಟ ಆಡಲಿಲ್ಲ. ಇದರ ಪರಿಣಾಮ 4-2 ಗೋಲುಗಳಿಂದ ಮಾತ್ರ ಗೆಲ್ಲಲು ಸಾಧ್ಯಯವಾಯಿತು.
ಈ ಗೆಲುವಿನೊಂದಿಗೆ ಭಾರತ ತಂಡ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ವೇಲ್ಸ್ ಟೂರ್ನಿಯಲ್ಲಿ 3 ಪಂದ್ಯವನ್ನು ಸೋತು ಟೂರ್ನಿಯಿಂದ ಹೊರಬಿತ್ತು.
ನೇರ ಕ್ವಾರ್ಟರ್ ಫೈನಲ್ ಪ್ರವೇಶದ ಕನಸು ಕಂಡಿದ್ದ ಭಾರತ ತಂಡ ವೇಲ್ಸ್ ವಿರುದ್ಧ 8 ಗೋಲುಗಳನ್ನು ಹೊಡೆದು ಭಾರೀ ಅಂತರದಿಂದ ಗೆಲ್ಲಬೇಕಿತ್ತು. ಆದರೆ ವೇಲ್ಸ್ ಆತಿಥೇಯರಿಗೆ ಕಠಿಣ ಸವಾಲು ನೀಡಿ 2 ಗೋಲು ದಾಖಲಿಸಿತು.
ಭಾರತ ಪರ ಆಕಾಶದೀಪ್ ಸಿಂಗ್ (32ಮತ್ತು 45ನೇ ನಿಮಿಷ), ಶಂಶೀರ್ ಸಿಂಗ್ (21ನೇ ನಿಮಿಷ), ಹರ್ಮನ್ಪ್ರೀತ್ ಸಿಂಗ್ (59ನೇ ನಿಮಿಷ) ಗೋಲುಗಳನ್ನು ಬಾರಿಸಿದರು.
ವೇಲ್ಸ್ ಪರ ಗಾರೆತ್ ಪುರ್ಲಾಂಗ್ (42ನೇ ನಿಮಿಷ), ಜಾಕೊಬ್ ಡ್ರಾಪೆರ್ (44ನೇ ನಿಮಿಷ) ಗೋಲುಗಳನ್ನು ಹೊಡೆದರು.
ಭಾರತ ತಂಡ ಈ ಪಂದ್ಯದಲ್ಲೂ ಪೆನಾಲ್ಟಿ ಕಾರ್ನರ್ ಸಮಸ್ಯೆ ಎದುರಿಸಿತು. ಈ ಪಂದ್ಯದಲ್ಲಿ ಭಾರತಕ್ಕೆ 7 ಪೆನಾಲ್ಟಿ ಅವಕಾಶ ಸಿಕ್ಕಿತ್ತು ಇದರಲ್ಲಿ 6 ಅನ್ನು ಗೋಲ್ನನಾಗಿ ಪರಿವರ್ತಿಸಬಹುದಿತ್ತು. ಆದರೆ ಈ ಅವಕಾಶವನ್ನು ಕೈಚೆಲ್ಲಿತು.
ವಿಶ್ವದ 14ನೇ ರ್ಯಾಂಕ್ ತಂಡವಾಗಿರುವ ವೇಲ್ಸ್ 5ನೇ ಶ್ರೇಯಾಂಕ ತಂಡ ಭಾರತದ ದಾಳಿಯನ್ನು ಸಮರ್ಥವಾಗಿ ಎದುರಿಸಿತು.
hockey Worldcup , indian mens hockey team doesn’t performed well








