Samantha ಸಾಹಸ ಮೆಚ್ಚಿಕೊಂಡ ಹಾಲಿವುಡ್ ನಿರ್ದೇಶಕ ಯಾನಿಕ್ ಬೆನ್..
ಸಮಂತ ನಟನೆಯ ಬಹುನಿರೀಕ್ಷೆಯ ಯಶೋಧ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು ಪ್ಯಾನ್ ಇಂಡಿಯ ಲೆವೆಲ್ ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ಟ್ರೇಲರ್ ರಿಲೀಸ್ ಮಾಡಿ ಪ್ರಮೋಟ್ ಮಾಡಿದ್ದಾರೆ.
ಚಿತ್ರದಲ್ಲಿ ಸಮಂತಾ ಬಾಡಿಗೆ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಸಸ್ಪೆನ್ಸ್ , ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದೆ. ಮುಂದೆ ಶಾಕುಂತಲಂ ವಿಜಯ್ ದೇವರಕೊಂಡ ಜೊತೆಗೆ ನಟಿಸುತ್ತಿರುವ ಖುಷಿ ಸೇರಿ ಸಾಕಷ್ಟು ಸಿನಿಮಾಗಳು ಸಮಂತಾ ಬಳಿ ಇವೆ.. ಶಾಕುಂತಲಂ ರಿಲೀಸ್ ಹಂತದಲ್ಲಿದೆ..
ಯಶೋಧ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು , ಈ ಸಿನಿಮಾದಲ್ಲಿ ಸ್ಯಾಮ್ ಶ್ರಮ ನೋಡಿ ಹಾಲಿವುಡ್ ಸಾಹಸ ನಿರ್ದೇಶಕ ಯಾನಿಕ್ ಬೆನ್ ಹಾಡಿ ಹೊಗಳಿದ್ದಾರೆ. ಚಿತ್ರದಲ್ಲಿ ಆಕ್ಷನ್ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿರುವುದಕ್ಕೆ ಸಮಂತಾ ಅವರ ಸಮರ್ಪಣಾ ಮನೋಭಾವ ಮತ್ತು ಇಚ್ಛಾಶಕ್ತಿಯೇ ಕಾರಣ ಎಂದು ಹಾಡಿ ಹೊಗಳಿದ್ದಾರೆ ಸಾಹಸ ನಿರ್ದೇಶಕ ಯಾನಿಕ್ ಬೆನ್
ಶ್ರೀದೇವಿ ಮೂವೀಸ್ ಅಡಿಯಲ್ಲಿ ಶಿವಲೆಂಕ ಕೃಷ್ಣ ಪ್ರಸಾದ್ ನಿರ್ಮಿಸಿರುವ ಈ ಅದ್ಧೂರಿ ಬಜೆಟ್ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
Hollywood director Yannick Ben liked Samantha’s adventure.