KGF 3 ಸಿನಿಮಾ ಬರುತ್ತೋ..? ಇಲ್ವೋ…?
ಯಶ್ ಹೀರೋ ಆಗಿ ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2′ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಬಿರುಗಾಳಿ ಎಬ್ಬಿಸಿದೆ.
ಒಂದೆಡೆ ಕಲೆಕ್ಷನ್ಸ್ ಮತ್ತೊಂದೆಡೆ ಪ್ರೇಕ್ಷಕರ ಮೌತ್ ಟಾಕ್ ನೊಂದಿಗೆ ಸಿನಿಮಾ ಸೂಪರ್ ಡೂಪರ್ ಸಕ್ಸಸ್ ಕಾಣುತ್ತಿದೆ.
ಅದರಲ್ಲೂ ಬಾಲಿವುಡ್ ನಲ್ಲಿ ರೂ. 400 ಕೋಟಿಗೂ ಹೆಚ್ಚು ಲೂಟಿ ಮಾಡಿ ಇತಿಹಾಸ ಬರೆದಿದೆ. ಭಾರತದ ಎಲ್ಲಾ ಭಾಷೆಗಳನ್ನು ಒಳಗೊಂಡಂತೆ ರೂ. 900 ಕೋಟಿ ಮತ್ತು ವಿಶ್ವದಾದ್ಯಂತ ರೂ. 1170 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
ಈ ನಡುವೆ ಈ ಸಿನಿಮಾದ ಸೀಕ್ವೆಲ್ ಬಗ್ಗೆ ಸಾಕಷ್ಟು ಮಾತುಗಳು ಹರಿದಾಡುತ್ತಿದೆ.

ಕೆಜಿಎಫ್3 ಸಿನಿಮಾ ಮಾರ್ವೆಲ್ ಶೈಲಿಯಲ್ಲಿ ತೆರೆಕಾಣಲಿದ್ದು, ಅಕ್ಟೋಬರ್ ನಂತರ ಚಿತ್ರೀಕರಣ ಶುರುವಾಗಲಿದೆ ಎಂದು ಹೊಂಬಾಳೆ ನಿರ್ಮಾಪಕ ವಿಜಯ್ ಕಿರಂಗದೂರ್ ಹೇಳಿರುವುದಾಗಿ ವರದಿಯಾಗಿದೆ.
ಆದರೆ, ಇತ್ತೀಚಿನ ಸುದ್ದಿಗೆ ಹೊಂಬಳ ಕಂಪನಿಯ ಮತ್ತೊಬ್ಬ ನಿರ್ಮಾಪಕ ಕಾರ್ತಿಕ್ ಗೌಡ ಪ್ರತಿಕ್ರಿಯಿಸಿದ್ದಾರೆ. ‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.
ಇದೀಗ ನಮ್ಮಲ್ಲಿ ಸಾಕಷ್ಟು ಉತ್ತಮ ಪ್ರಾಜೆಕ್ಟ್ ಗಳಿವೆ. ನಮ್ಮ ಗಮನ ಅದರ ಮೇಲಿದೆ. ಹಾಗಾಗಿ ಸದ್ಯ ಹೊಂಬಾಳೆ ಸಂಸ್ಥೆ ‘ಕೆಜಿಎಫ್3′ ಬಗ್ಗೆ ಯೋಚಿಸುತ್ತಿಲ್ಲ.
ಶೂಟಿಂಗ್ ಶುರುವಾದರೆ ಅಧಿಕೃತ ಘೋಷಣೆ ಮಾಡುತ್ತೇವೆ ಎಂದು ಕಾರ್ತಿಕ್ ಗೌಡ ಟ್ವೀಟ್ ಮಾಡಿದ್ದಾರೆ. hombale-films-producer-karthik-gowda-about-kgf-3








