ಒಡೆದ ಹಿಮ್ಮಡಿಗಳು ಚಳಿಗಾಲದಲ್ಲಿ ಸಾಮಾನ್ಯ ಸಮಸ್ಯೆಯಾಗಿದ್ದು, ಇದು ನೋವು ಮತ್ತು ತೊಂದರೆಗಳನ್ನು ಉಂಟುಮಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಕೆಲವು ನೈಸರ್ಗಿಕ ಮನೆಮದ್ದುಗಳನ್ನು ಅನುಸರಿಸಬಹುದು.
1. ತೆಂಗಿನ ಎಣ್ಣೆ ಬಳಕೆ
ತೆಂಗಿನ ಎಣ್ಣೆ ಒಡೆದ ಹಿಮ್ಮಡಿಗಳನ್ನು ತೇವಗೊಳಿಸಲು ಅತ್ಯುತ್ತಮವಾಗಿದೆ.
ಇದು ಆಂಟಿ-ಮೈಕ್ರೋಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು, ಸೋಂಕುಗಳಿಂದ ರಕ್ಷಿಸುತ್ತದೆ.
ಕಾಲುಗಳನ್ನು ಉಗುರುಬೆಚ್ಚಗಿನ ನೀರಿನಲ್ಲಿ 10-15 ನಿಮಿಷ ನೆನೆಸಿ, ನಂತರ ಚೆನ್ನಾಗಿ ಒಣಗಿಸಿ ತೆಂಗಿನ ಎಣ್ಣೆಯನ್ನು ಹಚ್ಚಿ.
ರಾತ್ರಿ ಹೊತ್ತು ಸಾಕ್ಸ್ ಧರಿಸಿ ಮಲಗುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
2. ಬಾಳೆಹಣ್ಣು ಪೇಸ್ಟ್
ಎರಡು ಮಾಗಿದ ಬಾಳೆಹಣ್ಣುಗಳನ್ನು ಚೆನ್ನಾಗಿ ಮ್ಯಾಶ್ ಮಾಡಿ ಪೇಸ್ಟ್ ತಯಾರಿಸಿ.
ಈ ಪೇಸ್ಟ್ ಅನ್ನು ಹಿಮ್ಮಡಿಗಳ ಮೇಲೆ ಹಚ್ಚಿ 20 ನಿಮಿಷಗಳ ಕಾಲ ಹಾಗೆಯೇ ಬಿಡಿ.
ನಂತರ ನೀರಿನಿಂದ ತೊಳೆದು ಸ್ವಚ್ಛಗೊಳಿಸಿ.
ವಾರದಲ್ಲಿ 2-3 ಬಾರಿ ಇದನ್ನು ಪುನರಾವರ್ತಿಸಿದರೆ ಹಿಮ್ಮಡಿ ಬಿರುಕುಗಳು ಗುಣವಾಗುತ್ತವೆ.
3. ಜೇನುತುಪ್ಪ ಬಳಕೆ
ಜೇನುತುಪ್ಪವು ನೈಸರ್ಗಿಕ ಮಾಯಿಶ್ಚರೈಜರ್ ಆಗಿದ್ದು, ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಹೊಂದಿದೆ.
ಬೆಚ್ಚಗಿನ ನೀರಿಗೆ ಒಂದು ಕಪ್ ಜೇನುತುಪ್ಪವನ್ನು ಸೇರಿಸಿ, ಪಾದಗಳನ್ನು 15-20 ನಿಮಿಷಗಳ ಕಾಲ ಅದರಲ್ಲಿ ನೆನೆಸಿ.
ನಂತರ ಪಾದಗಳನ್ನು ತೊಳೆದು ಮಾಯಿಶ್ಚರೈಸರ್ ಅಥವಾ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಿ.
ಇದನ್ನು ಪ್ರತಿದಿನ ಮಾಡುವುದು ಉತ್ತಮ.
4. ಉಗುರುಬೆಚ್ಚಗಿನ ನೀರು ಮತ್ತು ಸಾಸಿವೆ ಎಣ್ಣೆ
ಕಾಲುಗಳನ್ನು 20 ನಿಮಿಷಗಳ ಕಾಲ ಉಗುರುಬೆಚ್ಚಗಿನ ನೀರಿನಲ್ಲಿ ನೆನೆಸಿ, ಡೆಡ್ ಸೆಲ್ಗಳನ್ನು ತೆಗೆದುಹಾಕಲು ಪ್ಯೂಮಿಕ್ ಕಲ್ಲು ಬಳಸಿ.
ನಂತರ ಸಾಸಿವೆ ಎಣ್ಣೆಯನ್ನು ಹಿಮ್ಮಡಿಗಳಿಗೆ ಮಸಾಜ್ ಮಾಡಿ ಮತ್ತು ಸಾಕ್ಸ್ ಧರಿಸಿ.
ಇದು ಚರ್ಮವನ್ನು ಕೋಮಲಗೊಳಿಸುತ್ತದೆ.
5. ಅಲೋವೆರಾ ಜೆಲ್ ಬಳಕೆ
ಅಲೋವೆರಾ ಜೆಲ್ ಚರ್ಮಕ್ಕೆ ತೇವಾಂಶ ನೀಡುವಲ್ಲಿ ಪರಿಣಾಮಕಾರಿಯಾಗಿದೆ.
ಬೆಚ್ಚಗಿನ ನೀರಿನಲ್ಲಿ ಕಾಲುಗಳನ್ನು ಸ್ವಚ್ಛಗೊಳಿಸಿದ ನಂತರ ಅಲೋವೆರಾ ಜೆಲ್ ಅನ್ನು ಹಿಮ್ಮಡಿಗಳ ಮೇಲೆ ಅನ್ವಯಿಸಿ.
ರಾತ್ರಿ ಹೊತ್ತು ಸಾಕ್ಸ್ ಧರಿಸಿ ಮಲಗಿ ಬೆಳಿಗ್ಗೆ ತೊಳೆದುಕೊಳ್ಳಿ.
6. ನಿಂಬೆ ರಸ ಮತ್ತು ರೋಸ್ ವಾಟರ್ ಮಿಶ್ರಣ
ಒಂದು ಬಕೆಟ್ ಉಗುರುಬೆಚ್ಚಗಿನ ನೀರಿಗೆ ನಿಂಬೆ ರಸ, ಗ್ಲಿಸರಿನ್ ಮತ್ತು ರೋಸ್ ವಾಟರ್ ಸೇರಿಸಿ.
15 ನಿಮಿಷಗಳ ಕಾಲ ಪಾದಗಳನ್ನು ಅದರಲ್ಲಿ ನೆನೆಸಿ, ನಂತರ ಸ್ಕ್ರಬ್ಬರ್ನಿಂದ ಡೆಡ್ ಸೆಲ್ಗಳನ್ನು ತೆಗೆದುಹಾಕಿ.
ಬಳಿಕ ಗ್ಲಿಸರಿನ್ ಮತ್ತು ರೋಸ್ ವಾಟರ್ ಮಿಶ್ರಣವನ್ನು ಹಿಮ್ಮಡಿಗಳಿಗೆ ಹಚ್ಚಿ.
7. ಶಿಯಾ ಬಟರ್ ಅಥವಾ ಆಲಿವ್ ಎಣ್ಣೆ
ಶಿಯಾ ಬಟರ್ ಅಥವಾ ಆಲಿವ್ ಎಣ್ಣೆಯನ್ನು ಬಳಸುವುದು ಕೂಡಾ ಒಡೆದ ಹಿಮ್ಮಡಿಗಳನ್ನು ಗುಣಪಡಿಸಲು ಸಹಾಯಕವಾಗಿದೆ.
ಇವು ಚರ್ಮಕ್ಕೆ ಅಗತ್ಯವಾದ ತೇವಾಂಶವನ್ನು ನೀಡುತ್ತವೆ ಮತ್ತು ಒಣತನವನ್ನು ಕಡಿಮೆ ಮಾಡುತ್ತವೆ.
8. ಪ್ಯಾರಾಫಿನ್ ಮೇಣ ಚಿಕಿತ್ಸೆ
ಪ್ಯಾರಾಫಿನ್ ಮೇಣವನ್ನು ಕರಗಿ ಅದಕ್ಕೆ ಕೊಂಚ ತೆಂಗಿನ ಎಣ್ಣೆ ಸೇರಿಸಿ ಮಿಶ್ರಣ ಮಾಡಿ.
ಈ ಮಿಶ್ರಣದಲ್ಲಿ ನಿಮ್ಮ ಕಾಲುಗಳನ್ನು ಮುಳುಗಿಸಿ, ಅದು ಒಣಗಿದ ಮೇಲೆ ಮತ್ತೆ ಮುಳುಗಿಸಿರಿ (2–3 ಬಾರಿ).
ಇದರಿಂದ ಚರ್ಮ ಕೋಮಲಾಗುತ್ತದೆ ಮತ್ತು ಬಿರುಕುಗಳು ಕಡಿಮೆ ಆಗುತ್ತವೆ.








