ಮನೆಮದ್ದುಗಳು ನೆಗಡಿ ಮತ್ತು ಕೆಮ್ಮಿನಿಂದ ನಮ್ಮನ್ನು ಕಾಪಾಡುವುದರ ಜೊತೆಗೆ ಯಾವುದೇ ಅಡ್ಡಪರಿಣಾಮ ಬೀರದಂತೆ ನೋಡಿಕೊಳ್ಳುತ್ತವೆ.ಯಾವುದು ತಿಳಿಯೋಣ ಅಲ್ವಾ..
ಶುಂಠಿ ಚಹಾ
ಶುಂಠಿ ಚಹಾ ಒಳ್ಳೆ ರುಚಿಯಿರುತ್ತದೆ. ಅಷ್ಟು ಮಾತ್ರವಲ್ಲ ನೆಗಡಿ ಮತ್ತು ಕೆಮ್ಮಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಶುಂಠಿ ಚಹಾ ಕುಡಿಯುವುದರಿಂದ ಮೂಗಿನಲ್ಲಿರುವ ನೀರಿನಂಶ ಒಣಗಿ, ಕಫ ಹೊರಹಾಕುತ್ತದೆ. ಶೀಘ್ರಗತಿಯಲ್ಲಿ ನೆಗಡಿ ಶಮನಗೊಂಡು, ಬಹುಬೇಗ ಚೇತರಿಕೆ ಕಾಣಬಹುದು. ಅಷ್ಟೇ ಅಲ್ಲದೇ ಶುಂಠಿ ಚಹಾದಲ್ಲಿ ವಿಟಮಿನ್ ‘ ಸಿ ಪೊಟ್ಯಾಶಿಯಂ, ಮೆಗ್ನೀಷಿಯಂ ಮತ್ತು ಕಬ್ಬಿಣದ ಅಂಶ ಇದೆ. ಶುಂಠಿ ಚಹಾ ಕುಡಿಯುವುದರಿಂದ ಮನುಷ್ಯನ ದೇಹಕ್ಕೆ ಈ ಎಲ್ಲಾ ಅಂಶಗಳು ಸೇರಿ ಅನೇಕ ರೀತಿಯ ಆರೋಗ್ಯ ಪೂರಕವಾದ ಲಾಭಗಳು ಲಭಿಸುತ್ತವೆ.
ಹಾಲು ಮತ್ತು ಅರಿಶಿನ
ಎಲ್ಲರ ಅಡುಗೆ ಮನೆಗಳಲ್ಲಿ ಕಂಡುಬರುವ ಅರಿಶಿನ ಆಂಟಿ ಆಕ್ಸಿಡೆಂಟ್ (ಉತ್ಕರ್ಷಣ ನಿರೋಧಕ) ಗುಣವನ್ನು ಹೊಂದಿದ್ದು, ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಬೆಚ್ಚಗಿನ ಹಾಲಿನಲ್ಲಿ ಚಿಟಿಕೆಯಷ್ಟು ಅರಿಶಿನ ಬೆರೆಸಿ ಕುಡಿಯಿರಿ. ಇದು ಶೀತ ಮತ್ತು ಕೆಮ್ಮಿನ ವಿರುದ್ಧ ಹೋರಾಡಲು ಜನಪ್ರಿಯ ಮತ್ತು ಪರಿಣಾಮಕಾರಿ ಮದ್ದಾಗಿದೆ. ರಾತ್ರಿ ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ಅರಿಶಿನದ ಹಾಲನ್ನು ಕುಡಿಯುವುದು ಶೀತ ಮತ್ತು ಕೆಮ್ಮಿನಿಂದ ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
ನಿಂಬೆ, ದಾಲ್ಚಿನ್ನಿ ಮತ್ತು ಜೇನುತುಪ್ಪದ ಮಿಶ್ರಣ
ನೆಗಡಿ ಮತ್ತು ಕೆಮ್ಮಿಗೆ ಮತ್ತೊಂದು ಪರಿಣಾಮಕಾರಿ ಮನೆಮದ್ದು ನಿಂಬೆ, ದಾಲ್ಚಿನ್ನಿ ಮತ್ತು ಜೇನುತುಪ್ಪದ ಮಿಶ್ರಣವಾಗಿದೆ. ಈ ಸಿರಪ್ ಶೀತ ಮತ್ತು ಕೆಮ್ಮನ್ನು ಪರಿಣಾಮಕಾರಿಯಾಗಿ ಗುಣಪಡಿಸುತ್ತದೆ.
ಈ ಸಿರಪ್ ತಯಾರಿಸುವುದು ಹೇಗೆ?
ಅರ್ಧ ಚಮಚ ಜೇನುತುಪ್ಪಕ್ಕೆ ಕೆಲವು ಹನಿ ನಿಂಬೆ ರಸ, ಒಂದು ಚಿಟಿಕೆ ದಾಲ್ಚಿನ್ನಿ ಸೇರಿಸಿ. ನೆಗಡಿ ಮತ್ತು ಕೆಮ್ಮನ್ನು ಗುಣಪಡಿಸಲು ಈ ಸಿರಪ್ ಅನ್ನು ದಿನಕ್ಕೆ ಎರಡು ಬಾರಿ ಸೇವಿಸಿ.
ಉಗುರು ಬೆಚ್ಚನೆಯ ನೀರುನೆಗಡಿ, ಕೆಮ್ಮಿನ ಜೊತೆಗೆ ಗಂಟಲು ನೋಯುತ್ತಿದ್ದರೆ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಬೆಚ್ಚಗಿನ ನೀರು ಗಂಟಲಿನಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ ಹಾಗೆಯೇ ಸೋಂಕನ್ನು ಕೂಡ ಹೋಗಲಾಡಿಸಲು ಸಹಾಯ ಮಾಡುತ್ತದೆ.