5 ರುಪಾಯಿಗೆ 60 km ಚಲಿಸುವ ಕಾರು ನಿರ್ಮಿಸಿದ ಕೇರಳ ವ್ಯಕ್ತಿ…
ಅವಶ್ಯಕತೆ ಆವಿಷ್ಕಾರದ ತಾಯಿ ಎಂಬ ಮಾತಿದೆ. ಹೆಚ್ಚುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆಯ ನಡುವೆ ಈ ಹಣದುಬ್ಬರದಿಂದ ಜನತೆಗೆ ನೆಮ್ಮದಿ ನೀಡುವಂತಹ ಸಾಧನದ ಅವಶ್ಯಕತೆ ಈಗ ಹೆಚ್ಚಾಗಿದೆ. ಈ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಕೇರಳದ 67 ವರ್ಷದ ವ್ಯಕ್ತಿಯೊಬ್ಬರು ಕೇವಲ 5 ರೂಪಾಯಿಯಲ್ಲಿ 60 ಕಿ.ಮೀ.ವರೆಗೆ ಚಲಿಸುವಂತಹ ಎಲೆಕ್ಟ್ರಿಕ್ ಕಾರ್ ನ್ನ ಮನೆಯಲ್ಲೆ ನಿರ್ಮಿಸಿದ್ದಾರೆ.
ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನೆಲೆಸಿರುವ ಆಂಟೋನಿ ಜಾನ್ ಈ ಸಾಧನೆ ಮಾಡಿದ್ದಾರೆ. ತಮ್ಮ ಮನೆಯಲ್ಲೇ ಕುಳಿತು ಎಲೆಕ್ಟ್ರಿಕ್ ಕಾರನ್ನು ವಿನ್ಯಾಸಗೊಳಿಸಿದ್ದಾರೆ. ಇದನ್ನು ತಯಾರಿಸಲು 4.5 ಲಕ್ಷ ರೂಪಾಯಿ ಖರ್ಚಾಗಿದೆ, 2-3 ಜನರು ಈ ಕಾರಿನಲ್ಲಿ ಕುಳಿತುಕೊಳ್ಳಬಹುದು. ಈ ಕಾರಿನ ಬಹುದೊಡ್ಡ ವೈಶಿಷ್ಟ್ಯವೆಂದರೆ ಈ ಕಾರು ಕೇವಲ 5 ರೂಪಾಯಿಯಲ್ಲಿ 60 ಕಿಲೋಮೀಟರ್ ಮೈಲೇಜ್ ಕೊಡುತ್ತದೆ. .
ಮಲಯಾಳಂ ಭಾಷೆಯ ಯೂಟ್ಯೂಬ್ ಚಾನೆಲ್ Village Vartha ಅವರು ಆಂಟನಿ ಜಾನ್ ವಿನ್ಯಾಸಗೊಳಿಸಿದ ಕಾರಿನ ಕಥೆಯನ್ನು ಹಂಚಿಕೊಂಡಿದೆ ಆಂಟೋನಿ ಜಾನ್ ಪ್ರತಿದಿನ 60 ಕಿಲೋಮೀಟರ್ ದೂರದಲ್ಲಿರುವ ಆಫೀಸ್ ಗೆ ತೆರಳಲು ಎಲೆಕ್ಟ್ರಿಕ್ ಸ್ಕೂಟರ್ ಬಳಸುತ್ತಿದ್ದರು. ಆದರೆ ಬಿಸಿಲು, ಮಳೆಯಂತಹ ಕೆಟ್ಟ ವಾತಾವರಣದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳಲ್ಲಿ ಪ್ರಯಾಣಿಸಲು ತೊಂದರೆ ಅನುಭವಿಸಬೇಕಾಯಿತು.
ಈ ಸಮಸ್ಯೆಗಳಿಂದ ಮುಕ್ತಿ ಹೊಂದಲು ಆಂಟೋನಿ ಜಾನ್ ವ ಎಲೆಕ್ಟ್ರಿಕ್ ಕಾರು ತಯಾರಿಸುವ ಕೆಲಸ ಆರಂಭಿಸಿದರು. ಈ ಕೆಲಸಕ್ಕಾಗಿ ಅವರು ಗ್ಯಾರೇಜ್ ಅವರನ್ನ ಸಹ ಸಂಪರ್ಕಿಸಿದರು. ಗ್ಯಾರೇಜ್ ನ ಮೆಕ್ಯಾನಿಕ್ಸ್ ಜೊತೆ ಸೇರಿ ಎಲೆಕ್ಟ್ರಿಕ್ ಕಾರನ್ನು ಡಿಸೈನ್ ಮಾಡಿ ಕಾರು ತಯಾರಿಸುವ ಕೆಲಸ ಆರಂಭಿಸಿದರು.
ಹಲವು ವರ್ಷಗಳ ಕಠಿಣ ಪರಿಶ್ರಮದ ನಂತರ, ಎಲೆಕ್ಟ್ರಿಕ್ ಕಾರು ಸಿದ್ಧವಾಗಿದೆ. ಈ ಕಾರು ಸಾಮಾನ್ಯ ಕಾರಿನಂತೆ ಸ್ಟೀರಿಂಗ್, ಬ್ರೇಕ್, ಕ್ಲಚ್, ಆಕ್ಸಿಲರೇಟರ್, ಎಲ್ಲಾ ಪೀಚರ್ ಗಳನ್ನ ಹೊಂದಿದೆ. ಈ ಕಾರಿನ ಗರಿಷ್ಠ ವೇಗ ಗಂಟೆಗೆ 25 ಕಿಲೋಮೀಟರ್. ಅದರಲ್ಲಿರುವ ಬ್ಯಾಟರಿಯ ವ್ಯಾಪ್ತಿಯು 60 ಕಿಲೋಮೀಟರ್ ಮೈಲೇಜ್ ನೀಡುತ್ತದೆ. .