ಹೋಂಡಾ ಕಂಪನಿಗೆ 1.5 ಕೋಟಿ ಗ್ರಾಹಕರು : ಧನ್ಯವಾದ ಅರ್ಪಿಸಿದ ಕಂಪನಿ
ಬೆಂಗಳೂರು: ದೈತ್ಯ ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿಯಾದ ಹೋಂಡಾ ಮೋಟರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ದೇಶದ ದಕ್ಷಿಣ ವಲಯದಲ್ಲಿ 2001ರಿಂದ ಇದುವರೆಗೆ ಒಟ್ಟು 1.5 ಕೋಟಿ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿ ಹೊಸ ದಾಖಲೆ ಸೃಷ್ಟಿ ಮಾಡಿದೆ.
ಕಂಪನಿಯ ದಕ್ಷಿಣ ವಲಯದಲ್ಲಿ ಬರುವ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ, ಅಂಡಮಾನ್ ಕೇಂದ್ರಾಡಳಿತ ಪ್ರದೇಶದಲ್ಲಿ ಕಂಪನಿಯು ಕೇವಲ 5 ವರ್ಷಗಳಲ್ಲಿ 75 ಲಕ್ಷ ವಾಹನಗಳ ಮಾರಾಟವಾಗಿದೆ.
Whaaaat…! ಇಲ್ಲಿ ಗರ್ಲ್ ಫ್ರೆಂಡ್ಸ್ ಬಾಡಿಗೆಗೆ ಸಿಗ್ತಾರಾ..! : ಚೀನಾದ INTRESTING FACTS..!
ಹೌದು 2001ರಲ್ಲಿ ಕಂಪನಿಯು ತನ್ನ ಆಕ್ಟಿವಾ ಮಾದರಿಯ ದ್ವಿಚಕ್ರ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಆದ್ರೆ ಮೊದಲ 75 ಲಕ್ಷ ವಾಹನಗಳನ್ನು ಮಾರಾಟ ಮಾಡಲು ಹದಿನೈದು ವರ್ಷಗಳು ಬೇಕಾಗಿದ್ದವು. ಆದ್ರೆ ಇದೀಗ 5 ವರ್ಷಗಳಲ್ಲಿ 75 ಲಕ್ಷ ವಾಹನಗಳ ಮಾರಾಟವಾಗಿದೆ.
ಈ ಹಿನ್ನೆಲೆ ತಮ್ಮ ಗ್ರಾಹಕರಿಗೆ ಕಂಪನಿ ಧನ್ಯವಾದಗಳನ್ನ ಅರ್ಪಿಸಿದೆ. ‘ಹೋಂಡಾ ಕಂಪನಿಯ ವಾಹನ ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ನಾವು 1.5 ಕೋಟಿ ಗ್ರಾಹಕರಿಗೆ ಧನ್ಯವಾದ ಸಮರ್ಪಿಸುತ್ತಿದ್ದೇವೆ ಎಂದಿದೆ.
1009 ಸೋಲು, 65ನೇ ವಯಸ್ಸಿನಲ್ಲಿ ಮಿಲೇನಿಯರ್ ಆದ KFC – ಸಂಸ್ಥಾಪಕ ಹಾರ್ನಾಲ್ಡ್ ಸ್ಯಾಂಡರ್ಸ್ ಸಾಹಸಗಾಥೆ..!
ಇದೇ ವೇಲೆ ಗ್ರಾಹಕರು ನಮ್ಮ ಮೇಲೆ ಇರಿಸಿರುವ ಈ ವಿಶ್ವಾಸದ ಕಾರಣದಿಂದಾಗಿಯೇ ಕಳೆದ ಎರಡು ದಶಕಗಳ ಅವಧಿಯಲ್ಲಿ ಕಂಪನಿಯು ದಕ್ಷಿಣ ವಲಯದಲ್ಲಿ ನಂಬರ್ 1 ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ ಎಂದು ಕಂಪನಿಯ ಮಾರುಕಟ್ಟೆ ವಿಭಾಗದ ನಿರ್ದೇಶಕ ಯದುವೇಂದ್ರ ಸಿಂಗ್ ಗುಲೇರಿಯಾ ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel