Honey Trap | ನವ್ಯ ಶ್ರೀ ಹನಿಟ್ರ್ಯಾಪ್ ಕೇಸ್ : ರಾಜ್ಯ ಕಾಂಗ್ರೆಸ್ ಗೆ ಮುಜುಗರ
ಕಾಂಗ್ರೆಸ್ ಕಾರ್ಯರ್ಕತೆ ನವ್ಯಶ್ರೀ ಆರ್. ರಾವ್ ಎಂಬುವವರ ವಿರುದ್ಧ ಹನಿಟ್ರ್ಯಾಪ್ ಪ್ರಕರಣ ದಾಖಲಾಗಿದ್ದು, ಇದು ರಾಜ್ಯ ಕಾಂಗ್ರೆಸ್ ಗೆ ಭಾರಿ ಮುಜುಗರವನ್ನು ಉಂಟು ಮಾಡಿದೆ.
ಸೋಶಿಯಲ್ ಮೀಡಿಯಾದಲ್ಲಿ ಈಕೆ ರಾಜ್ಯ ಮತ್ತು ರಾಷ್ಟ್ರ ನಾಯಕರ ಜೊತೆ ಇರುವ ಫೋಟೋಗಳು ವೈರಲ್ ಆಗುತ್ತಿವೆ.
ಹನಿ ಟ್ರ್ಯಾಪ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಜಿ ಪರಮೇಶ್ವರ್ ಅವರೊಂದಿಗೆ ನವ್ಯ ಶ್ರೀ ತೆಗೆಸಿಕೊಂಡಿರುವ ಫೋಟೋಗಳು ಮುನ್ನಲೆಗೆ ಬಂದಿವೆ.
ನವ್ಯಶ್ರೀ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ವೈರಲ್ ಆದ ಬೆನ್ನಲ್ಲೇ ನವ್ಯಶ್ರೀ ರಾವ್ ವಿರುದ್ಧ ಬೆಳಗಾವಿ ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ಎಂಬುವವರು ದೂರು ನೀಡಿದ್ದಾರೆ.
ಡಿಸೆಂಬರ್ 2020ರಲ್ಲಿ ತಾವು ಬೆಂಗಳೂರಲ್ಲಿ ಕೆಲಸ ಮಾಡುವಾಗ ‘ಸಾಫ್ಟ್ವೇರ್ ಇಂಜಿನಿಯರ್ ಹಾಗೂ ಕಾಂಗ್ರೆಸ್ ಕಾರ್ಯಕರ್ತೆ, ‘ಚನ್ನಪಟ್ಟಣದಲ್ಲಿ ನವ್ಯ ಫೌಂಡೇಶನ್ ಹೆಸರಿನ ಎನ್ಜಿಒ ನಡೆಸುವುದಾಗಿ ಪರಿಚಯ ಮಾಡಿಕೊಂಡಿದ್ದರು.

ನನಗೆ ಮದುವೆಯಾಗಿ ಮೂರು ಮಕ್ಕಳಿವೆ ಎಂದು ಗೊತ್ತಿದ್ದರೂ ಪರಿಚಯ ಬೆಳೆಸಿಕೊಂಡಿದ್ದರು. ‘ಒಂದೂವರೆ ವರ್ಷ ಪರಿಚಯದಲ್ಲಿ ಬೇರೆ ಬೇರೆ ಸ್ಥಳ ಸೇರಿ ಬೆಳಗಾವಿಯಲ್ಲಿ ಭೇಟಿಯಾಗಿದ್ವಿ’2021ರ ಡಿಸಂಬರ್ 24 ರಂದು ನನಗೆ ಕರೆ ಮಾಡಿ ‘ನವ್ಯಶ್ರೀ ಹಾಗೂ ನಾನು ಆತ್ಮೀಯವಾಗಿ ಇರುವ ವಿಡಿಯೋ ಇದೆ ಎಂದು ‘ನವ್ಯಶ್ರೀ ಹಾಗೂ ತಿಲಕರಾಜ್ ಬೆದರಿಕೆ ಹಾಕಿದ್ದಾರೆ.
50 ಲಕ್ಷ ಹಣ ನೀಡದಿದ್ರೆ ನನ್ನ ಪತ್ನಿ, ಸಂಬಂಧಿಕರು ಹಾಗೂ ಸೋಷಿಯಲ್ ಮಿಡಿಯಾ ದಲ್ಲಿ ವಿಡಿಯೋ ವೈರಲ್ ಮಾಡುವುದಾಗಿ ಹೇಳಿದ್ದಾರೆ.
ಬಳಿಕ ತನ್ನ ಮನೆಗೆ ಬಂದು ತನ್ನ ಬೇಡಿಕೆ ಈಡೇರುವವರೆಗೂ ಮನೆ ಬಿಟ್ಟು ಹೋಗಲ್ಲ ಅಂತಾ ಬೆದರಿಕೆ ಹಾಕಿದ್ದಾರೆ ಎಂದು ರಾಜಕುಮಾರ ಟಾಕಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ರಾಜಕುಮಾರ ಟಾಕಳೆ ನೀಡಿದ ದೂರಿನ ಅನ್ವಯ ನವ್ಯಶ್ರೀ ವಿರುದ್ಧ ಐಪಿಸಿ 1860(u/s.384, 448, 504, 506, 34) ರಡಿ ಕೇಸ್ ದಾಖಲು ಮಾಡಲಾಗಿದೆ.