ಹಾಂಗ್‌ ಕಾಂಗ್‌ ನಲ್ಲಿ ಅಗ್ನಿ ಅವಘಡ : 20 ಸಾವಿರ ಮನೆಗಳಿಗೆ ವಿದ್ಯುತ್ ಕಡಿತ

1 min read

ಹಾಂಗ್‌ ಕಾಂಗ್‌ ನಲ್ಲಿ ಉಂಟಾಗಿರುವ ಅಗ್ನಿ ಅವಘಡದಿಂದಾಗಿ ಭಾರೀ ಸಮಸ್ಯೆ ಎದುರಾಗಿದೆ.. ಸುಮಾರು 20 ಸಾವಿರ ಮನೆಗಳಿಗೆ ಕಳೆದ ಎರಡು ದಿನಗಳಿಂದ ವಿದ್ಯುತ್ ಪೂರೈಕೆಯಾಗಿಲ್ಲ. ಬಿಸಿಗಾಳಿ ಮತ್ತು ಹದಗೆಟ್ಟ ವಾತಾವರಣದಿಂದಾಗಿ ಅಲ್ಲಿನ ಜನರು ಪರದಾಡುತ್ತಿದ್ದಾರೆ.

ಹಾಂಗ್‌ ಕಾಂಗ್ ನಗರದಲ್ಲಿ ಉಂಟಾದ ಅನಾಹುತ ಕುರಿತಂತೆ ತನಿಖೆಗೆ ಅಲ್ಲಿನ ಸರ್ಕಾರ ಆದೇಶಿಸಿದೆ. ವಿದ್ಯುತ್ ಪೂರೈಕೆದಾರ ಸಿಎಲ್‌ ಪಿ ಪವರ್‌ ಸಂಸ್ಥೆಯ ಕೇಬಲ್ ಬ್ರಿಜ್ ಒಂದು ಬೆಂಕಿಗೆ ಆಹುತಿಯಾಗಿದ್ದು, ಇದರಿಂದ 1,60,000 ಗ್ರಾಹಕರಿಗೆ ವಿದ್ಯುತ್ ಪೂರೈಕೆಯಲ್ಲಿ ತಡೆ ಉಂಟಾಗಿದೆ.  ಅಗತ್ಯ ಸೇವೆಗಳಿಗೆ, ಆಸ್ಪತ್ರೆ ಮತ್ತು ರೈಲ್ವೆಗೆ ವಿದ್ಯುತ್ ಪೂರೈಕೆ ಸರಿಪಡಿಸಲಾಗಿದೆ. ಮನೆಗಳಿಗೆ ವಿದ್ಯುತ್ ಪೂರೈಕೆ ಜಾಲವನ್ನು ಸರಿಪಡಿಸಲಾಗುತ್ತಿದೆ ಎಂದು ತಿಳಿಸಿದೆ..

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd