ಕೈಗೆಟುಕುವ ದರದಲ್ಲಿ Honor Play 6C 5G ಸ್ಮಾರ್ಟ್ಪ ಪೋನ್ ಬಿಡುಗಡೆ…
ಜನಪ್ರಿಯ ಸ್ಮಾರ್ಟ್ ಪೋನ್ ತಯಾರಕ ಕಂಪನಿ ಹಾನರ್ ತನ್ನ ಪ್ಲೇ ಸರಣಿಯ ನೂತನ ಹ್ಯಾಂಡ್ ಸೆಟ್ ಅನ್ನ ಚೀನಾದಲ್ಲಿ ಲಾಂಚ್ ಮಾಡಿದೆ. ಕೈಗೆಟುಕುವ ದರದಲ್ಲಿ 5G Honor Play 6C ಬಿಡುಗಡೆಯಾಗಿದೆ. ವಾಟರ್ ಡ್ರಾಪ್ ನಾಚ್ ಡಿಸ್ಪ್ಲೇ, ಸ್ನಾಪ್‌ಡ್ರಾಗನ್ 4-ಸರಣಿ ಚಿಪ್‌ಸೆಟ್ ಮತ್ತು ಪಾಸ್ಟ್ ಚಾರ್ಜಿಂಗ್ ಸಪೋರ್ಟಿಂಗ್ ನೊಂದಿಗೆ ಹಲವು ಫೀಚರ್ ಗಳು ಇದರಲ್ಲಿ ಲಭ್ಯವಿದೆ.
Honor Play 6C ವಿಶೇತೆಗಳು
Honor Play 6C ನಲ್ಲಿ 6.517 ಇಂಚಿನ IPS LCD ಡಿಸ್ಪ್ಲೇ ಜೊತೆಗೆ HD + 720 x 1600 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. 20: 9 ಅನುಪಾತ ಮತ್ತು 90 Hz ರೀಫ್ರೆಶ್ ರೇಟ್ ಅನ್ನ ಬೆಂಬಲಿಸುತ್ತದೆ. Honor ಸ್ಮಾರ್ಟ್‌ಫೋನ್ Qualcomm Snapdragon 480 5G ಪ್ರೊಸೆಸರ್ ನೊಂದಿಗೆ ಕಾರ್ಯ ನಿರ್ವಹಿಸುತ್ತದೆ.
ಸೆಲ್ಫಿ ಮತ್ತು ವೀಡಿಯೊ ಕಾಲ್ ಗಾಗಿ 5 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಮತ್ತು 13 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಅಳವಡಿಸಲಾಗಿದೆ. Honor Play 6C ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಮ್ ಆಧಾರಿತ UI 5.0 ನೊಂದಿಗೆ ರನ್ ಆಗುತ್ತದೆ.
ಸೆಕ್ಯೂರಿಟಿಗಾಗಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ. Play 6C ಗೆ 5000mAh ಬ್ಯಾಟರಿ ಒದಗಿಸಿದ್ದು, 22.5W ಫಾಸ್ಟ್ ಚಾರ್ಜಿಂಗ್ ಗೆ ಸಪೋರ್ಟ್ ಮಾಡುತ್ತದೆ. ಹ್ಯಾಂಡ್ಸೆಟ್ 6 GB ಮತ್ತು 8 GB RAM 128 GB ಇಂಟರ್ನಲ್ ಸ್ಟೋರೇಜ್ ಆಯ್ಕೆಯಲ್ಲಿ ಲಬ್ಯವಿದೆ. ಹ್ಯಾಂಡ್ಸೆಟ್ ಮ್ಯಾಜಿಕ್ ನೈಟ್ ಬ್ಲಾಕ್, ಅರೋರಾ ಬ್ಲೂ ಮತ್ತು ಟೈಟಾನಿಯಂ ಸಿಲ್ವರ್ ಬಣ್ಣಗಳಲ್ಲಿ ಬರುತ್ತದೆ.
Honor Play 6C 5G smartphone launched at an affordable price…