Ananth Nag | ಅನಂತ್ ನಾಗ್’ಗೆ ಗೌರವ ಡಾಕ್ಟರೇಟ್
ಬೆಂ ಉತ್ತರ ವಿವಿಯಿಂದ ಗೌರವ ಡಾಕ್ಟರೇಟ್
ಅನಂತ್ ನಾಗ್ ಸೇರಿ ಮೂವರಿಗೆ ಡಾಕ್ಟರೇಟ್
ಕೋಲಾರದ ನಂದಿನಿ ಪ್ಯಾಲೇಸ್ ನಲ್ಲಿ ಕಾರ್ಯಕ್ರಮ
ಸಿನಿಮಾ ಕ್ಷೇತ್ರದಲ್ಲಿನ ಸಾಧನೆಗಾಗಿ ಗೌರವ ಡಾಕ್ಟರೇಟ್
ಬೆಂಗಳೂರು : ಅಭಿನಯ ಬ್ರಹ್ಮ , ಹಿರಿಯ ನಟ ಅನಂತ್ ನಾಗ್ ಇನ್ಮುಂದೆ ಡಾಕ್ಟರ್ ಅನಂತ್ ನಾಗ್ ಆಗಲಿದ್ದಾರೆ.
ಸಿನಿಮಾ ಕ್ಷೇತ್ರದಲ್ಲಿನ ಸಾಧನೆಗಾಗಿ ಅನಂತ್ ನಾಗ್ ಅವರಿಗೆ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಿದೆ.

ಕೋಲಾರದ ನಂದಿನಿ ಪ್ಯಾಲೇಸ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಡಾಕ್ಟರೇಟ್ ಪ್ರಧಾನ ಮಾಡಲಿದ್ದಾರೆ.
ಸಿನಿಮಾ ಕ್ಷೇತ್ರದಲ್ಲಿ ಸಾಧನೆಗಾಗಿ ಅನಂತ್ ನಾಗ್ ಅವರಿಗೆ, ಸಂಗೀತ ಕ್ಷೇತ್ರದಲ್ಲಿ ಎಸ್. ಬಲ್ಲೇಶ್ , ಭಜಂತ್ರಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸಾಧನೆಗಾಗಿ ಶರತ್ ಶರ್ಮಾಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗುತ್ತದೆ.