ವಾಟರ್ ಹೀಟರ್ ಕರೆಂಟ್ ಶಾಕ್ ನಿಂದಾಗಿ ತಾಯಿ ಮಗು ನಿಧನ….
ಸ್ನಾನದ ಕೋಣೆಯಲ್ಲಿ ನೀರು ಕಾಯಿಸಲು ಹಾಕಿದ್ದ ವಾಟರ್ ಹೀಟರ್ ಬಕೆಟ್ ಬಿದ್ದ ಪರಿಣಾಮ್ ಕರೆಂಟ್ ಶಾಕ್ ನಿಂದಾಗಿ ತಾಯಿ ಮಗ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕನಕ ನಗರದಲ್ಲಿ ನಡೆದಿದೆ.
ಮೃತರನ್ನ ರಾಯಚೂರು ಮೂಲದವರಾದ ತಾಯಿ ಜ್ಯೋತಿ (25) ಮತ್ತು ಮಗ ಜಯಾನಂದ್ (4) ಎಂದು ಗರತಿಸಲಾಗಿದೆ. ಗಾರೆ ಕೆಲಸಕ್ಕೆಂದು ಕುಟುಂಬ ಸಮೇತರಾಗಿ ಬಂದು ಹೊಸಕೋಟೆ ತಾಲೂಕಿನ ಕನಕ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಸ್ನಾನ ಕೋಣೆಯಲ್ಲಿ ನೀರು ಕಾಯಿಸಲು ಹೀಟರ್ ಹಾಕಿದ್ದಾಗ ಮಗು ಆಕಸ್ಮಿಕವಾಗಿ ಬಕೆಟ್ ಬೀಳಿಸಿ ವಿದ್ಯುತ್ ಶಾಕ್ ಗೆ ಒಳಗಾಗಿದೆ. ಮಗು ಕೂಗಿಕೊಂಡಗಾ ತಾಯಿ ರಕ್ಷಿಸಲು ಓಡಿ ಹೋಗಿದ್ದಾರೆ. ಕೆಳಗಡೆ ನೀರಿನಲ್ಲಿ ಕರೆಂಟ್ ಹರಿಯುತ್ತಿದ್ದ ಕಾರಣ ತಾಯಿಗೂ ಕರೆಂಟ್ ಶಾಕ್ ಉಂಟಾಗಿದೆ. ಹೀಗಾಗಿ ತಾಯಿ ಜ್ಯೋತಿ ಮತ್ತು ಮಗ ಜಯಾನಂದ್ ಇಬ್ಬರೂ ಸಾವನ್ನಪ್ಪಿದ್ದಾರೆ.
ನಿನ್ನೆಯಿಂದ ಯಾರು ಹೊರಗೆ ಬರದಿದ್ದನ್ನ ಪಕ್ಕದ ಮನೆಯವರು ಗಮನಿಸಿ ಮನೆಗೆ ಹೋದಾಗ ಘಟನೆ ಕಂಡುಬಂದಿದೆ. ಕೆಲಸಕ್ಕೆ ಹೋಗಿದ್ದ ಪತಿ ಮನೆಗೆ ಬಂದಿದ್ದು, ಹೊಸಕೋಟೆ ಪೊಲೀಸ್ ಠಾಣೆಯ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ.
Hosakote : Mother and child died due to water heater current shock….