ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರ ದೇವರಗುಂಡಿಯ ಫಾಲ್ಸ್ ನಲ್ಲಿ ನಡೆದ ಲಲನೆಯರ ಅರೆಬೆತ್ತಲೆ, ಹಾಟ್ ಫೋಟೋ ಶೂಟ್‍ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಳ್ಯ ತಾಲೂಕಿನ ತೋಡಿಕಾನ ಗ್ರಾಮದ ದೇವರಗುಂಡಿಯ ಫಾಲ್ಸ್‍ನಲ್ಲಿ ಬೆಂಗಳೂರಿನಿಂದ ಬಂದಿದ್ದ ಮಾಡೆಲ್ ಬೃಂದಾ ಅರಸ್ ಸೇರಿ ಇಬ್ಬರು ಮಾಡೆಲ್‍ಗಳ ಅರೆಬೆತ್ತಲೆ ಬಿಕಿನಿ ಫೋಟೋಶೂಟ್ ಮಾಡಲಾಗಿದೆ.
ದೇವಗುಂಡಿಯಲ್ಲಿ ಪುರಾಣ ಪ್ರಸಿದ್ಧ ಹಾಗೂ 13ನೇ ಶತಮಾನದ ಐತಿಹಾಸಿಕ ಮಲ್ಲಿಕಾರ್ಜುನ ಸ್ವಾಮಿ ಮಂದಿರವಿದೆ. ಈ ದೇವಸ್ಥಾನದಿಂದ 2 ಕಿ.ಮೀ ದೂರದಲ್ಲಿ ದೇವರಗುಂಡಿ ಫಾಲ್ಸ್ ಇದೆ. ಈ ಫಾಲ್ಸ್‍ನಲ್ಲಿ ಸಾಕ್ಷಾತ್ ಶಿವನೇ ಸ್ನಾನಕ್ಕೆ ಬರುತ್ತಿದ್ದ ಎಂಬ ಐತಿಹ್ಯವಿದೆ. ಹೀಗಾಗಿ ಸ್ಥಳೀಯರು ಈ ಫಾಲ್ಸ್ ನ್ನು ದೇವರಕೊಂಡ ಎಂದೇ ಕರೆಯುತ್ತಾರೆ. ವರ್ಷದ ಏಳೆಂಟು ಬಾರಿ ವಿಶೇಷ ಹಬ್ಬದ ದಿನಗಳಲ್ಲಿ ಇಲ್ಲಿನ ದೇವರಕೊಂಡ ತೀರ್ಥವನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಅಭಿಷೇಕ ಮಾಡಲಾಗುತ್ತದೆ. ಹೀಗಾಗಿ ಸ್ಥಳೀಯರು ದೇವರಕೊಂಡದಲ್ಲಿ ನೀರಿಗೆ ಇಳಿಯುವುದಿಲ್ಲ. ಪವಿತ್ರ ಭಾವನೆಯಿರುವ ಕಾರಣಕ್ಕೆ ದೇವರಕೊಂಡದ ಪರಿಶುದ್ಧತೆಯನ್ನು ಸ್ಥಳೀಯರು ಕಾಪಾಡಿಕೊಂಡು ಬಂದಿದ್ದಾರೆ.
ಇಷ್ಟು ಪವಿತ್ರ ಭಾವನೆ ಹೊಂದಿರುವ ಕ್ಷೇತ್ರದಲ್ಲಿ ಮಾಡೆಲ್‍ಗಳ ಹಸಿಬಿಸಿ ಬಿಕಿನಿ ಫೋಟೋ ಶೂಟ್ ಮಾಡಲಾಗಿದೆ. ಅಷ್ಟೇ ಅಲ್ಲದೆ ಫಾಲ್ಸ್‍ಗೆ ಇಳಿದು ಮೇಲಿನಿಂದ ಧುಮ್ಮಕಿಕ್ಕುವ ಜಲಧಾರೆಗೆ ಮೈಯೊಡ್ಡಿ ಹಸಿಬಿಸಿ ಫೋಟೋ ಶೂಟ್ ಮಾಡಿ ಪವಿತ್ರ ಕ್ಷೇತ್ರವನ್ನು ಅಪವಿತ್ರ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಫೋಟೋಶೂಟ್‍ಗೆ ಅನುಮತಿ ಪಡೆದಿಲ್ಲ..
ದೇವರಕೊಂಡ ಫಾಲ್ಸ್ ನಲ್ಲಿ ಫೋಟೋಶೂಟ್ ಮಾಡಲು ಅನುಮತಿಯನ್ನೇ ಪಡೆದಿರಲಿಲ್ಲವಂತೆ. ದೇವಸ್ಥಾನದ ಆಡಳಿತ ಮಂಡಳಿಗೂ ಈ ವಿಚಾರ ಗೊತ್ತೇ ಇರಲಿಲ್ಲ ಎನ್ನಲಾಗಿದೆ. ಹೀಗಾಗಿ ಸ್ಥಳೀಯರು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ.
ದೇವಸ್ಥಾನದ ಆಡಳಿತ ಮಂಡಳಿಗೆ ದೂರು ಬರುತ್ತಿದ್ದಂತೆ ಸುಳ್ಯ ತಹಶೀಲ್ದಾರ್ ಹಾಗೂ ಅರಣ್ಯ ಇಲಾಖೆಗೆ ದೂರು ನೀಡಲು ಮಂಡಳಿ ಸದಸ್ಯರು ತೀರ್ಮಾನಿಸಿದ್ದಾರೆ.
ಬಿಕಿನಿ ಫೋಟೋಶೂಟ್ ನಡೆದ ದೇವಗುಂಡಿ ಸುತ್ತಮುತ್ತ ಮನೆಗಳಿವೆ. ಆದರೂ ಇಲ್ಲಿ ಅರೆಬೆತ್ತಲಾಗಿ ಓಡಾಗಿ ಸ್ಥಳೀಯರಿಗೆ ಮುಜುಗರ ಉಂಟು ಮಾಡಿದ್ದಾರೆ. ದೇವರಕೊಂಡ ಇರುವುದು ದಟ್ಟಾರಣ್ಯದಲ್ಲಿ, ಇಂತಹ ನಿರ್ಜನ ಪ್ರದೇಶದಲ್ಲಿ ಕೇವಲ ಎರಡು-ಮೂರು ಜನರು ಶೂಟಿಂಗ್ ನಡೆಸಿದ್ದಾರೆ. ಅಪಾಯಕಾರಿಯಾದ ಈ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೇ ಫೋಟೋಶೂಟ್ ಮಾಡಲಾಗಿದೆ. ಬೀಚ್ ಅಥವಾ ಒಳಾಂಗಣದಲ್ಲಿ ಮಾಡಬೇಕಿದ್ದ ಬಿಕಿನಿ ಫೋಟೋಶೂಟ್‍ನ್ನು ಕ್ಷೇತ್ರದ ಐತಿಹ್ಯ ಅರಿಯದೇ ಮಾಡುವ ಮೂಲಕ ಪವಿತ್ರ ಕ್ಷೇತ್ರವನ್ನು ಅಪವಿತ್ರಗೊಳಿಸುವ ಕೆಲಸ ಮಾಡಲಾಗಿದೆ ಎಂದು ಸ್ಥಳೀಯರ ಆತಂಕವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel