Telangana : ಮನೆಗೆ ಆಕಸ್ಮಿಕವಾಗಿ ಬೆಂಕಿ; ಒಂದೇ ಕುಟುಂಬದ 6 ಮಂದಿ ಮೃತ…
ಮನೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ನಿದ್ರೆಯಲ್ಲಿದ್ದ ಒಂದೇ ಕುಟುಂಬ ಆರು ಮಂದಿ ಸಜೀವ ದಹನವಾಗಿರುವ ಭೀಕರ ತೆಲಂಗಾಣದ ಮಂಚಯಾರ್ಲದಲ್ಲಿ ಸಂಭವಿಸಿದೆ.
ರಾಮಕೃಷ್ಣಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ವೆಂಕಟಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮನೆ ಮಾಲೀಕ ಸೇರಿ ಒಂದೇ ಕುಟುಂಬದ ಆರು ಜನ ಸಜೀವ ದಹನವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬೆಂಕಿ ಅವಘಡದಲ್ಲಿ ಮನೆ ಯಜಮಾನ ಶಿವಯ್ಯ (50), ಅವರ ಪತ್ನಿ ಪದ್ಮಾ (45), ಪದ್ಮಾ ಅವರ ಅಕ್ಕನ ಮಗಳು ಮೌನಿಕಾ (23) ಮತ್ತು ಆಕೆಯ ಇಬ್ಬರು ಪುತ್ರಿಯರು ಹಾಗು ಸಂಬಂಧಿ ಶಾಂತಯ್ಯ ಸಾವನ್ನಪ್ಪಿದ್ದಾರೆ.
ರಾತ್ರಿ ಸುಮಾರು 12-12:30 ರ ಸುಮಾರಿಗೆ ಅಕ್ಕ ಪಕ್ಕದ ಮನೆಯವರು ಬೆಂಕಿ ಗಮನಿಸಿ ಅಗ್ನಿ ಶಾಮಕ ದಳದವರಿಗೆ ಪೋನ್ ಮಾಡಿದ್ದಾರೆ. ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಷ್ಟರಲ್ಲಿ ಮನೆಯಲ್ಲಿದ್ದವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಡಿಸಿಪಿ ಅಖಿಲ್ ಮಹಾಜನ್ ದುರಂತದ ಹಿಂದಿರುವ ಕಾರಣಗಳ ಬಗ್ಗೆ ತಿಳಿಯಲು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
House Catches Fire In Telangana; 2 Children Among Family Of 6 Charred To Death