ಕೊರೊನಾ ಸಂಕಷ್ಟದಲ್ಲಿದ್ದ ದಂಪತಿ ಕೋಟ್ಯಾಧೀಶರಾಗಿದ್ದು ಹೇಗೆ !
ನಾಟಿಂಗ್ ಹ್ಯಾಮ್: ಜುಲೈ 10: ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ಕೆಲಸ ಕಳೆದು ಕೊಂಡು ಸಂಕಷ್ಟದಲ್ಲಿದ್ದ ದಂಪತಿಗಳು ರಾತ್ರೋರಾತ್ರಿ ಕೋಟ್ಯಾಧೀಶರಾಗಿದ್ದಾರೆ.
ಶಿಬು ಪಾಲ್ ಮತ್ತು ಲಿನೆಟ್ ಜೋಸೆಫ್ ಯುಕೆ ನ ನಾಟಿಂಗ್ಹ್ಯಾಮ್ನಲ್ಲಿ ವಾಸಿಸುವ ಮಲಯಾಳಿ ದಂಪತಿಗಳು.
ಲಂಬೋರ್ಘಿನಿಯ ಪ್ರತಿನಿಧಿಗಳು ಅವರು 1.84 ಕೋಟಿ ರೂ. (5,000 195,000) ಮೌಲ್ಯದ ಲಂಬೋರ್ಘಿನಿ ಉರ್ಸ್’ ಕಾರನ್ನು ಗೆದ್ದಿರುವುದಾಗಿ ತಿಳಿಸಿದಾಗ ಅವರು ಅದನ್ನು ಕನಸು ಎಂದು ಭಾವಿಸಿದರು.
ಆದರೆ ‘ಬೆಸ್ಟ್ ಆಫ್ ದಿ ಬೆಸ್ಟ್’ (ಬಿಒಟಿಬಿ) ಆಯೋಜಿಸಿದ್ದ ಜೀವನಶೈಲಿ ಸ್ಪರ್ಧೆಯಲ್ಲಿ ಶಿಬು ವಿಜೇತರಾಗಿದ್ದು ಲ್ಯಾಂಬೋರ್ಗಿನಿ ಕಾರು ಮತ್ತು 18.94 ಲಕ್ಷ ರೂ ನಗದು ಬಹುಮಾನ ಗೆದ್ದಿದ್ದರು.
ಕೊಟ್ಟಾಯಂ ಜಿಲ್ಲೆಯ ಪಿರಾವೋಮ್ ಬಳಿಯ ವೆಲ್ಲೂರು ಮೂಲದ ಸೌಂಡ್ ಎಂಜಿನಿಯರ್ 31 ವರ್ಷದ ಶಿಬು ಅವರು ಒಂದು ವರ್ಷದ ಹಿಂದೆ ಬ್ರಿಟನ್ ಗೆ ತೆರಳಿದ್ದರು. ಪ್ರಾರಂಭದಲ್ಲಿ ಕೇಂಬ್ರಿಡ್ಜ್ ನಲ್ಲಿ ವಾಸಿಸುತ್ತಿದ್ದ ಅವರು ಬಳಿಕ ನಾಟಿಂಗ್ಹ್ಯಾಮ್ಗೆ ಹೋಗಿ ನೆಲಸಿದ್ದರು. ಈ ಮಧ್ಯೆ ಕೊರೊನಾ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಅವರು ಕೆಲಸವನ್ನು ಕಳೆದುಕೊಂಡಿದ್ದು, ಉದ್ಯೋಗಕ್ಕಾಗಿ ಹಲವು ಕಂಪನಿಗಳ ಸಂದರ್ಶನಗಳಿಗೆ ಹಾಜರಾಗಿ ಕೆಲಸದ ಕರೆಗಾಗಿ ಶಿಬು ಕಾಯುತ್ತಿದ್ದರು. ಈ ನಡುವೆ ಅವರು ಬಿಒಟಿಬಿ ಮೂರು ಟಿಕೆಟ್ಗಳನ್ನು ಖರೀದಿಸಿದ್ದು, ಈ ಮೂಲಕ ಅವರಿಗೆ ಅದೃಷ್ಟ ಒಲಿದು ಬಂದಿದೆ.