ಕಿರಾತಕನೊಬ್ಬ ಕಳ್ಳತನ (Theft) ಮಾಡಲು ಬರಲಿಲ್ಲ ಎಂಬ ಕಾರಣಕ್ಕೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ. ಹಾಸನ (Hassan) ನಗರದ ಎನ್.ಆರ್.ವೃತ್ತದಲ್ಲಿರುವ ಬಾರ್ ನಲ್ಲಿ ಈ ಘಟನೆ ನಡೆದಿದೆ.
ಚಿತ್ರದುರ್ಗ (Chitradurga) ಮೂಲದ ಚಿತ್ರಲಿಂಗೇಶ್ವರ ಅಲಿಯಾಸ್ ಶಿವಣ್ಣ ಘಟನೆಯಲ್ಲಿ ಗಾಯಗೊಂಡಿದ್ದಾನೆ. ಶಿವಣ್ಣ ಗುಜರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಸಂಜೆ ಓಡನಹಳ್ಳಿ ಗ್ರಾಮದ ಚೇತು ಅಲಿಯಾಸ್ ಚೇತನ್ ಎಂಬಾತನೊಂದಿಗೆ ಮದ್ಯ ಸೇವಿಸಲು ಹೋಗಿದ್ದಾನೆ.
ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಮದ್ಯಪಾನ ಮಾಡುತ್ತಿದ್ದಾಗ, ಎಲ್ಲೋ ಒಂದು ಕಡೆ ಕಬ್ಬಿಣ ಇದೆ. ಅದನ್ನು ಇಬ್ಬರು ಸೇರಿ ಕುಯ್ದುಕೊಂಡು ಬಂದು ಮಾರಾಟ ಮಾಡೋಣ ಎಂದು ಚೇತು ಹೇಳಿದ್ದಾನೆ.
ಇದಕ್ಕೆ ಶಿವಣ್ಣ ಒಪ್ಪಿಲ್ಲ. ಇದರಿಂದ ಸಿಟ್ಟಾದ ಚೇತು, ನಾನು ನಿನಗೆ ಎಣ್ಣೆ ಕುಡಿಸಿ, ಊಟ ಕೊಡಿಸಿದ್ದೇನೆ. ನೀನೇನಾದರೂ ಬರಲಿಲ್ಲವೆಂದರೆ ನಿನ್ನನ್ನು ಮುಗಿಸಿ ಬಿಡುತ್ತೇನೆಂದು ಹೆದರಿಸಿದ್ದಾನೆ. ಆನಂತರ ಚಾಕುವಿನಿಂದ ಇರಿದಿದ್ದಾನೆ. ಸದ್ಯ ಶಿವಣ್ಣ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಚಿಕಿತ್ಸೆಗೆ ದಾಖಲಾಗಿದ್ದಾನೆ. ಈ ಕುರಿತು ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.