ಬ್ರಿಟಾನಿಯಾ ಬಿಸ್ಕತ್ತಿಗೆ “ಬ್ರಿಟಾನಿಯಾ” ಹೆಸರು ಬಂದಿದ್ದು ಹೇಗೆ?
How did Britannia Biscuits get the name “Britannia”?
ಆಗಸ್ಟ್ ತಿಂಗಳು ಬಂದೇ ಬಿಟ್ಟಿತು. ಈ ತಿಂಗಳಿನಲ್ಲಿ ಭಾರತೀಯರು ಎಂದಿಗೂ ಮರೆಯದ ದಿನ 15ನೇ ತಾರೀಖು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ ದಿನ. ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಅದೆಷ್ಟೋ ಜನರ ತ್ಯಾಗ, ಬಲಿದಾನದಿಂದ ಲಭಿಸಿದೆ. ಈ ಸಮಯದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ ಮತ್ತು ತಮ್ಮ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟ ಅಸಂಖ್ಯಾತ ಮಹಾನ್ ಚೇತನಗಳನ್ನು ನೆನೆಯುವುದು ಎಷ್ಟು ಮುಖ್ಯ. ಆದರೆ ಅಷ್ಟೇ ಮುಖ್ಯವಾದದ್ದು ದೇಶೀಯ ವಸ್ತುಗಳನ್ನು ಬಳಸವುದು.
ನಮಗೆ ಸ್ವಾತಂತ್ರ್ಯ ದೋರೆಯವ ಮುನ್ನವೇ ದೇಶದಲ್ಲಿ ಅನೇಕ ಸಂಸ್ಥೆಗಳು ಮತ್ತು ಕಾರ್ಖಾನೆಗಳು ಹುಟ್ಟಿಕೊಂಡವು ಅವುಗಳ ಬಗ್ಗೆ ಬರುವ ದಿನಗಳಲ್ಲಿ ತಿಳಿಯುತ್ತಾ ಹೋಗೋಣ.
ಬ್ರಿಟಾನಿಯಾ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ ಜಗತ್ತಿಗೆ ಪ್ರಸಿದ್ಧಿ. ಬ್ರಿಟಾನಿಯಾ ಬಿಸ್ಕತ್ತು ನೀವು ತಿನ್ನದೆ ಇರುವುದಿಲ್ಲ. ಹಾಗಿದ್ದರೆ ಈ ಕಂಪನಿ ಉದಯಸಿದ್ದು ಯಾವಾಗ, ಸ್ಥಾಪಕರು ಯಾರು ಇಲ್ಲಿದೆ ಮಾಹಿತಿ..
ಬ್ರಿಟಾನಿಯಾ ಕಂಪನಿ 1892 ರಲ್ಲಿ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಒಂದು ಸಣ್ಣ ಮನೆಯಲ್ಲಿ 295 ರೂ. ಬಂಡವಾಳದೊಂದಿಗೆ ಆರಂಭವಾಯಿತು.
ನಂತರ ಈ ಸಂಸ್ಥೆಯನ್ನು ಗುಪ್ತಾ ಸಹೋದರರಲ್ಲಿ ಒಬ್ಬರಾದ ನಳಿನ್ ಚಂದ್ರ ಗುಪ್ತಾ ಎಂಬ ವಕೀಲರು ಕೊಂಡುಕೊಂಡರು.
1918 ರಲ್ಲಿ ಕೋಲ್ಕತ್ತಾ ಮೂಲದ ಬ್ರಿಟಿಷ್ ಉದ್ಯಮಿ CH ಹೋಮ್ಸ್ ಅವರು ಪಾಲುದಾರರಾದರು.
ಮುಂದೆ ಈ CH ಹೋಮ್ಸ್ ಅವರು ಈ ಸಂಸ್ಥಗೆ ಬ್ರಿಟಾನಿಯಾ ಎಂದು ನಾಮಕರಣ ಮಾಡಿದರು.
ಬ್ರಿಟಾನಿಯಾ ಎಂಬುದು ರೋಮನ್ ಸಾಮ್ರಾಜ್ಯವು ಗ್ರೇಟ್ ಬ್ರಿಟನ್ ದ್ವೀಪಕ್ಕೆ ನೀಡಿದ ಲ್ಯಾಟಿನ್ ಹೆಸರು, ಈ ಹೆಸರನ್ನು ನಂತರ ಯುನೈಟೆಡ್ ಕಿಂಗ್ಡಂನ ಸ್ತ್ರೀ ವ್ಯಕ್ತಿತ್ವಕ್ಕಾಗಿ ಬಳಸಲಾಯಿತು.
ಬ್ರಿಟನ್ ಮತ್ತು ಬ್ರಿಟಿಷ್ ದೇಶಭಕ್ತಿಯನ್ನು ಸಂಕೇತಿಸುವ “ಬ್ರಿಟಾನಿಯಾ” ಎಂಬ ಹೆಸರನ್ನು ಈ ಕಂಪನಿಗೆ ಇಡಲಾಯಿತು. ನಂತರ ಇದು ದಿ ಬ್ರಿಟಾನಿಯಾ ಬಿಸ್ಕೆಟ್ ಕಂಪನಿ ಲಿಮಿಟೆಡ್ (BBCo) ಆಗಿ ಹೊರಹೊಮ್ಮಿತು.
1924 ರಲ್ಲಿ ಮುಂಬೈಯಲ್ಲಿ ಕಾರ್ಖಾನೆ ಆರಂಭವಾಯಿತು. ಈ ಸಂಸ್ಥೆ ಎರಡನೆಯ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷ್ ಸೈನಿಕರಿಗೆ ಬಿಸ್ಕತ್ತುಗಳನ್ನು ನಿರಂತರ ಪೂರೈಕೆ ಮಾಡಲಾಯಿತು.
ಬ್ರಿಟಾನಿಯಾ ಬಿಸ್ಕತ್ತು ಕಂಪನಿಯು ಹಲವು ವರ್ಷಗಳ ಕಾಲ ಬ್ರಿಟಿಷ್ ಸೈನ್ಯಕ್ಕೆ ಬಿಸ್ಕತ್ತುಗಳನ್ನು ಪೂರೈಸಿತು. ಎರಡನೇ ಮಹಾಯುದ್ಧದ ಸಮಯದಲ್ಲಿ ಬಿಸ್ಕೆಟ್ಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಇದು ಕಂಪನಿಯ ಮಾರಾಟಕ್ಕೆ ಉತ್ತೇಜನ ನೀಡಿತು. ಕಂಪನಿಯು ತನ್ನ ಹೆಸರನ್ನು 1979 ರಲ್ಲಿ ಬ್ರಿಟಾನಿಯಾ ಇಂಡಸ್ಟ್ರೀಸ್ ಲಿಮಿಟೆಡ್ಗೆ ಬದಲಾಯಿಸಲಾಯಿತು. ಈಗ ಇದೇ ಹೆಸರಿನೊಂದಿಗೆ ನಡೆಯುತ್ತಿದೆ.1982 ರಲ್ಲಿ ಅಮೇರಿಕನ್ ಕಂಪನಿ ನಬಿಸ್ಕೋ ಪೀಕ್ ಫ್ರೀನ್ಸ್ನ ಬ್ರಿಟಾನಿಯಾ ಕಂಪನಿಯ ಷೇರುಗಳನ್ನು ಕೊಂಡುಕೊಂಡಿತು.
ವರ್ಷಗಳು ಕಳೆದಂತೆ ಈ ಕಂಪನಿ ಜಗತ್ತಿನಾದ್ಯಂತ ಶಾಖೆಗಳನ್ನು ತೆರೆಯಿತು. ದೊಡ್ಡ ಉದ್ಯಮ ಸಂಸ್ಥೆಯಾಗಿ ಬೆಳೆಯಿತು. ಕಳೆದ ವರ್ಷ 2022 ರಲ್ಲಿ ಬ್ರಿಟಾನಿಯಾ ಕಂಪನಿಯ ಮಾರುಕಟ್ಟೆ ಬಂಡವಾಳ ಸಾವಿರ ಕೋಟಿಗೆ ತಲುಪಿತ್ತು.
ಡಿಸೆಂಬರ್ 2022 ರಲ್ಲಿ, ಬ್ರಿಟಾನಿಯಾ ಇಂಡಸ್ಟ್ರೀಸ್ ಭಾರತ ಮತ್ತು ಇತರ ಮಾರುಕಟ್ಟೆಗಳಲ್ಲಿ ಚೀಸ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು, ತಯಾರಿಸಲು ಮತ್ತು ಮಾರಾಟ ಮಾಡಲು ಫ್ರಾನ್ಸ್ನ ಬೆಲ್ ಎಸ್ಎನೊಂದಿಗೆ ಜಂಟಿ ಉದ್ಯಮ ಒಪ್ಪಂದವನ್ನು ಮಾಡಿಕೊಂಡಿತು.
ಕಂಪನಿಯು ವಾರ್ಷಿಕ 4,33,000 ಟನ್ಗಳಷ್ಟು ಉತ್ಪಾದನೆ ಮಾಡುತ್ತದೆ. ಈ ಕಂಪನಿಯ ಬಿಸ್ಕತ್ತುಗಳ ಬ್ರಾಂಡ್ ಆಗಿವೆ.
ಈ ಕಂಪನಿಯ ಪ್ರಮುಖ ಉತ್ಪನ್ನಗಳು ವಿಟಾಮಾರಿಗೋಲ್ಡ್ , ಟೈಗರ್ , ನ್ಯೂಟ್ರಿಚಾಯ್ಸ್ , ಗುಡ್ ಡೇ , 50 50 , ಟ್ರೀಟ್ , ಪ್ಯೂರ್ ಮ್ಯಾಜಿಕ್ , ಮಿಲ್ಕ್ ಬಿಕಿಸ್ , ಬೌರ್ಬನ್ , ನೈಸ್ ಟೈಮ್ ಮತ್ತು ಲಿಟಲ್ ಹಾರ್ಟ್ಸ್ .
ಇಷ್ಟುಮಾತ್ರವಲ್ಲದೆ ಕಂಪನಿಯು ಚೀಸ್,ಹಾಲು, ಮೊಸರು, ಬ್ರೆಡ್, ಕೇಕ್, ರಸ್ಕ್ ಮತ್ತು ಡೈರಿ ಉತ್ಪನ್ನಗಳನ್ನು ತಯಾರಿಸುತ್ತದೆ.
ಸದ್ಯ ಈ ಕಂಪನಿಯ ಮಾಲಿಕರು ನುಸ್ಲಿ ವಾಡಿಯಾ. ಪ್ರಸ್ತುತ ಭಾರತದಲ್ಲಿ 13 ಕಾರ್ಖನೆಗಳಿವೆ. 4 ಪ್ರಾಂಚೇಸಿಗಳಿವೆ. ಜಗತ್ತಿನಾದ್ಯಂತ 80 ಕಂಪನಿಗಳಿವೆ.
ಇದೇರೀತಿ ಹೆಚ್ಚಿನ ಇಂಟ್ರೆಸ್ಟಿಂಗತಿಗಳ ಬಗ್ಗೆ ತಿಳಿಯಲು ನಮ್ಮ ಚಾನೆಲ್ ಅನ್ನು ಶೇರ್ ಮಾಡಿ, ಲೈಕ್ ಮಾಡಿ ಹಾಗೆ Subscribe ಮಾಡಿ ಪಕ್ಕದಲ್ಲಿರುವ ಬೆಲ್ ಐಕಾನ್ ಮೇಲೆ ಕ್ಲಿಕ್ ಮಾಡಿ.








