ಕೊರೊನಾ ಲಸಿಕೆ ಪಡೆದು ಮಿಲಿಯನೇರ್ ಆದ ಯುವತಿ

1 min read
COVID-19 saaksha tv

ಕೊರೊನಾ ಲಸಿಕೆ ಪಡೆದು ಮಿಲಿಯನೇರ್ ಆದ ಯುವತಿ COVID-19 saaksha tv

ಕ್ಯಾನ್ಬೆರಾ : ಕಿಲ್ಲರ್ ಕೊರೊನಾ ವೈರಸ್ ನ ಆರ್ಭಟ ಈಗ ಕಡಿಮೆಯಾಗಿರಬಹುದು, ಆದ್ರೆ ಹೆಮ್ಮಾರಿ ಸೋಂಕು ಪೂರ್ತಿಯಾಗಿ ಇನ್ನೂ ಹೋಗಿಲ್ಲ.

ಈ ಹಿನ್ನೆಲೆಯಲ್ಲಿ ಪ್ರಪಂಚದಾದ್ಯಂತ ಸರ್ಕಾರಗಳು ಕೋವಿಡ್ ಲಸಿಕೆ ತೆಗೆದುಕೊಳ್ಳುವಂತೆ ಜನರನ್ನು ಪ್ರೋತ್ಸಾಹಿಸುತ್ತಿವೆ.

ಹಲವು ಆಫರ್ಗಳನ್ನು ನೀಡಿ ಜನರು ಕೊರೊನಾ ಲಸಿಕೆ ಪಡೆಯುವಂತೆ ಸರ್ಕಾರಗಳು ಪ್ರೋತ್ಸಾಹಿಸುತ್ತಿವೆ.

ಅದರಂತೆ ಆಸ್ಟ್ರೇಲಿಯಾದಲ್ಲಿ ಲಸಿಕೆ ಪಡೆದರೆ ಲಾಟರಿ ಕೊಡುತ್ತಿದ್ದಾರೆ.

COVID-19 saaksha tv

ಈ ಹಿನ್ನೆಲೆ 25 ವರ್ಷದ ಸಿಡ್ನಿ ಯುವತಿಗೆ 7.4 ಕೋಟಿ ರೂ. ಲಾಟರಿ ಹೊಡೆದಿದ್ದು, ರಾತ್ರೋರಾತ್ರಿ ಈ ಯುವತಿ ಮಿಲಿಯನೇರ್ ಆಗಿದ್ದಾಳೆ.

ಹೌದು..! ಆಸ್ಟ್ರೇಲಿಯಾದಲ್ಲಿ ಕೊರೊನಾ ಲಸಿಕೆ ಪಡೆಯುವಂತೆ ಜನರನ್ನು ಪ್ರೇರೇಪಿಸಲು ಲಾಟರಿ ಆಫರ್ ನೀಡಿತ್ತು.

ಹೋಗಿ ವ್ಯಾಕ್ಸಿನ್ ಹಾಕಿಸಿಕೊಂಡ ಲಕ್ಷಾಂತರ ಆಸ್ಟ್ರೇಲಿಯನ್ನರಲ್ಲಿ ‘ಜೋನ್ನೆ ಝು’ ಎಂಬ ಯುವತಿ ಅದೃಷ್ಟದ ಡ್ರಾದಲ್ಲಿ ಮಿಲಿಯನೇರ್ ಆಗಿದ್ದಾಳೆ.

ಭಾನುವಾರ, ದಿ ಮಿಲಿಯನ್ ಡಾಲರ್ ವ್ಯಾಕ್ಸ್ ಅಲೈಯನ್ಸ್ ಲಾಟರಿಯ ವಿಜೇತರನ್ನು ಘೋಷಿಸಿದೆ. ಇದರಲ್ಲಿ 25 ವರ್ಷದ ‘ಜೋನ್ನೆ ಝು’ ವಿಜೇತಶಾಲಿಯಾಗಿದ್ದಾಳೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd