Chicken | ಹನಿ ಚಿಕನ್ ಕರ್ರಿ ಮಾಡೋದು ಹೇಗೆ….?
ಮಾಂಸಹಾರಿಗಳಿಗೆ ಚಿಕನ್ ಅಂದ್ರೆ ತುಸು ಪ್ರೀತಿ ಹೆಚ್ಚಿರುತ್ತದೆ. ಸಣ್ಣವರಿಂದ ಹಿಡಿದು ದೊಡ್ಡವರ ತನಕ ಚಿಕನ್ ಇಷ್ಟಪಡ್ತಾರೆ.
ಅಂತವರಿಗಾಗಿಯೇ ಹನಿ ಚಿಕನ್ ತಯಾರು ಮಾಡೋದು ಹೇಗೆ ಅಂತಾ ನಾವು ಹೇಳುತ್ತೇವೆ…
ಹನಿ ಚಿಕನ್ ಗೆ ಬೇಕಾಗುವ ಸಾಮಾಗ್ರಿಗಳು..
- ಕೆಲವು ಮೂಳೆಗಳಿಲ್ಲದ ಚಿಕನ್ ಪೀಸ್ ಗಳು
- ಅಗತ್ಯವಿರುವಷ್ಟು ಉಪ್ಪು
- ಬೇಕಾದಷ್ಟು ಜೇನುತುಪ್ಪ
- ಬೇಕಾದಷ್ಟು ಬೆಣ್ಣೆ
- ಬೇಕಾದಷ್ಟು ನಿಂಬೆ ರಸ
- ಸೋಯಾ ಸಾಸ್
ತಯಾರಿಸೋದು ಹೇಗೆ…?
ಮೊದಲು ಚಿಕನ್ ಸ್ವಚ್ಛಗೊಳಿಸಿ. ನಂತರ ಒಲೆಯ ಮೇಲೆ ಬಾಣಲೆಯನ್ನು ಇಟ್ಟಯ ಎಣ್ಣೆಯನ್ನು ಸುರಿಯಿರಿ.
ಎಣ್ಣೆ ಬಿಸಿಯಾದ ನಂತರ ಚಿಕನ್ ತುಂಡು ಅದರಲ್ಲಿ ಹಾಕಿ 4 ರಿಂದ 5 ನಿಮಿಷ ಫ್ರೈ ಮಾಡಿ ಪಕ್ಕಕ್ಕೆ ಇರಿಸಿ.
ನಂತರ ಇನ್ನೊಂದು ಪ್ಯಾನ್ ಅನ್ನು ಮಧ್ಯಮ ಉರಿ ಮೇಲೆ ಇಡಿ. ಸ್ವಲ್ಪ ಬೆಣ್ಣೆ ಮತ್ತು ಜೇನುತುಪ್ಪ ಸುರಿಯಿರಿ.
ಬೆಣ್ಣೆ ಸಂಪೂರ್ಣವಾಗಿ ಕರಗಿದ ನಂತರ ಬೆಂಕಿಯನ್ನ ಆಫ್ ಮಾಡಿ. ಈಗ ಅದೇ ಬಾಣಲೆಯಲ್ಲಿ ಸ್ವಲ್ಪ ನಿಂಬೆ ರಸ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಹುರಿದ ಚಿಕನ್ ತುಂಡುಗಳನ್ನು ಜೇನುತುಪ್ಪದ ಮಿಶ್ರಣಕ್ಕೆ ಸೇರಿಸಿ ಸುಮಾರು 20 ನಿಮಿಷ ಬೇಯಿಸಿ. ನಂತರ ಒಲೆ ಮೇಲಿಂದ ಇಳಿಸಿ.. ಹನಿ ಚಿಕನ್ ಕರ್ರಿ ರೆಡಿ.. how-make-honey-chicken