ರಾಷ್ಟ್ರೀಯ ಭದ್ರತೆಯ ವಿಷಯಗಳಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರನ್ನು ಎಷ್ಟು ಜನ ನಂಬುತ್ತಾರೆ?
ಹೊಸದಿಲ್ಲಿ, ಜೂನ್ 25: ಈಗ ಪಾಕಿಸ್ತಾನಕ್ಕಿಂತ ದೊಡ್ಡ ಶತ್ರುವಾಗಿರುವ ಚೀನಾವನ್ನು ನಿಭಾಯಿಸಲು ಪ್ರಧಾನಿ ನರೇಂದ್ರ ಮೋದಿಯವರನ್ನು ಭಾರತ ಅಗಾಧವಾಗಿ ನಂಬಿದೆ ಮತ್ತು ಜೂನ್ 15 ರಂದು ಲಡಾಖ್‌ನಲ್ಲಿ ಭಾರತೀಯ ಸೈನಿಕರ ಮೇಲಿನ ದಾಳಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ದೇಶವು ಕಾಯುತ್ತಿದೆ ಎಂದು ಇತ್ತೀಚಿನ ಐಎಎನ್‌ಎಸ್ ಸಿವೊಟರ್ ಸ್ನ್ಯಾಪ್ ಪೋಲ್ ತಿಳಿಸಿದೆ.
ಸಮೀಕ್ಷೆಯ ಪ್ರಕಾರ, ದೇಶಾದ್ಯಂತ ಶೇಕಡಾ 70 ಪ್ರತಿಶತಕ್ಕೂ ಹೆಚ್ಚು ಜನರು ರಾಷ್ಟ್ರೀಯ ಭದ್ರತೆಯ ವಿಷಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ನಂಬುತ್ತಾರೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ.
ರಾಹುಲ್ ಗಾಂಧಿ ದೇಶದ ಸುರಕ್ಷತೆಯನ್ನು ಕಾಪಾಡುವ ನಾಯಕರ ಪಟ್ಟಿಯಲ್ಲಿ ನಿಲ್ಲುವುದಾದರೆ ಎಷ್ಟು ಜನ ಬೆಂಬಲಿಸುತ್ತಾರೆ ಎನ್ನುವುದರ ಕುರಿತು ಸಿ-ವೋಟರ್ ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ ಶೇಕಡಾ 39ರಷ್ಟು ಜನರು ಸಂಸದ ರಾಹುಲ್ ಗಾಂಧಿ ಅವರಿಗೆ ಬೆಂಬಲ ನೀಡಿದ್ದಾರೆ
ಸುದ್ದಿ ಸಂಸ್ಥೆ ಐಎಎನ್‌ಎಸ್ ಮತ್ತು ಸಿವೊಟರ್ ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ 61.3% ಜನರು ರಾಷ್ಟ್ರೀಯ ಭದ್ರತೆಯ ವಿಷಯಗಳಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯನ್ನು ನಂಬುವುದಿಲ್ಲ ಎಂದು ಹೇಳಿದ್ದಾರೆ.
ಶೇಕಡಾ 61ರಷ್ಟು ಜನರು ರಾಹುಲ್ ಗಾಂಧಿ ವಿರುದ್ಧ ಮತ ಚಲಾಯಿಸಿದ್ದರೆ, ಶೇಕಡ14.4ರಷ್ಟು ಜನರು ರಾಹುಲ್ ಗಾಂಧಿಯವರ ಮೇಲೆ ಅಗಾಧ ನಂಬಿಕೆ ಇಟ್ಟುಕೊಂಡಿದ್ದಾರೆ. ಶೇಕಡ 24.3ರಷ್ಟು ಜನರು ಸ್ವಲ್ಪ ಮಟ್ಟಿಗೆ ನಂಬಬಹುದು ಎಂದು ಹೇಳಿದ್ದರೆ, ಶೇಕಡಾ 61.3ರಷ್ಟು ಜನರು ಸುರಕ್ಷತೆ ವಿಚಾರದಲ್ಲಿ ರಾಹುಲ್ ಗಾಂಧಿಯವರನ್ನು ನಾಯಕ ಎಂದು ಒಪ್ಪಿಕೊಳ್ಳಲಾಗದು ಎಂದು ಹೇಳಿದ್ದಾರೆ.
ಪುರುಷ ಮತ್ತು ಮಹಿಳೆಯರ ಪ್ರಮಾಣ
ರಾಷ್ಟ್ರೀಯ ಭದ್ರತೆಯ ವಿಷಯಗಳಲ್ಲಿ ಸಂಸದ ರಾಹುಲ್ ಗಾಂಧಿಯವರನ್ನು ಉತ್ತಮ ನಾಯಕ ಎಂದು ಶೇಕಡಾ 39ರಷ್ಟು ಜನರು ಬೆಂಬಲಿಸಿದ್ದು, ಅದರಲ್ಲಿ ಶೇಕಡಾ 16 ಪುರುಷರು ಹಾಗೂ ಶೇಕಡಾ12ರಷ್ಟು ಮಹಿಳೆಯರು ಅತ್ಯುತ್ತಮ ನಾಯಕ ಎಂದಿದ್ದರೆ, ಶೇಕಡಾ 26ರಷ್ಟು ಪುರುಷರು ಮತ್ತು 22.6ರಷ್ಟು ಮಹಿಳೆಯರು ಉತ್ತಮ ನಾಯಕ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಾತಿವಾರು ಲೆಕ್ಕಾಚಾರ
ಭಾರತದ ಸುರಕ್ಷತೆಗೆ ಸಂಬಂಧಿಸಿದಂತೆ ಸಂಸದ ರಾಹುಲ್ ಗಾಂಧಿಯವರನ್ನು ನಾಯಕ ಎಂದು ಒಪ್ಪಿಕೊಂಡವರಲ್ಲಿ ಹೆಚ್ಚಿನ ಜನರು ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಶೇ.43.9ರಷ್ಟು ಮುಸ್ಲಿಮರು ರಾಹುಲ್ ಗಾಂಧಿಯವರನ್ನು ಅತ್ಯುತ್ತಮ ನಾಯಕ ಎಂದು ಹೇಳಿದ್ದಾರೆ. ಶೇ.39.3ರಷ್ಟು ಮುಸ್ಲಿಮರು ಉತ್ತಮ ನಾಯಕ ಎಂದು ರಾಹುಲ್ ಗಾಂಧಿಯನ್ನು ಬೆಂಬಲಿಸಿದ್ದರೆ, ಶೇ.16ರಷ್ಟು ಮುಸ್ಲಿಮರು ಅವರನ್ನು ನಾಯಕ ಎಂದು ಒಪ್ಪಿಕೊಳ್ಳಲಾಗದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶೇಕಡಾ 90ರಷ್ಟು ಕ್ರಿಸ್ತರು ಮತ್ತು ಶೇಕಡಾ 71ರಷ್ಟು ಸಿಖ್ಖರು ರಾಹುಲ್ ಗಾಂಧಿ ಅವರನ್ನು ನಾಯಕ ಎಂದು ಒಪ್ಪಿಕೊಳ್ಳಲಾಗದು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಸಮೀಕ್ಷೆ ಹೇಳಿದೆ.
ಉನ್ನತ ಶಿಕ್ಷಣ ಪಡೆದ ಶೇಕಡಾ 67.2ರಷ್ಟು ಜನರು ಸಂಸದ ರಾಹುಲ್ ಗಾಂಧಿ ಅವರನ್ನು ದೇಶದ ಸುರಕ್ಷತೆ ವಿಚಾರದಲ್ಲಿ ನಂಬುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದರೆ, ಅತಿಹೆಚ್ಚು ಆದಾಯ ಗಳಿಸುವ ಉದ್ಯಮಿಗಳ ವಲಯದಲ್ಲಿ ಶೇಕಡಾ 72ರಷ್ಟು ಜನರು ರಾಹುಲ್ ಗಾಂಧಿ ಅವರನ್ನು ಭಾರತದ ಸುರಕ್ಷತೆಗೆ ಸಂಬಂಧಿಸಿದಂತೆ ಉತ್ತಮ ನಾಯಕ ಎಂದು ಒಪ್ಪಿಕೊಳ್ಳಲಾಗದು ಎಂದಿದ್ದಾರೆ