ಕೇವಲ ಒಂದು ಸಾಂಗ್ ನಿಂದ ರಾಜ್ಯ ಮಾತ್ರವಲ್ಲದೇ ನೆರೆ ರಾಜ್ಯಗಳಲ್ಲೂ ಸದ್ದು ಮಾಡ್ತಿರೋ ಸಿನಿಮಾ ಪೊಗರು.. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಈ ಸಿನಿಮಾ ಮೇಕಿಂಗ್ ನಿಂದಲೇ ಸಖತ್ ಸೌಂಡು ಮಾಡುತ್ತಿದೆ. ಚಿತ್ರದಲ್ಲಿ ಧ್ರುವ ಸರ್ಜಾ ಲುಕ್ ಖರಾಬಾಗಿದ್ದು, ಈ ಸಿನಿಮಾ ಗಲ್ಲಾಪೆಟ್ಟಿಗೆ ದೋಚುವ ಎಲ್ಲ ಲಕ್ಷಣಗಳೂ ದಟ್ಟವಾಗಿ ಕಾಣುತ್ತಿವೆ.

ಕೊರೊನಾದಿಂದಾಗಿ ಇಷ್ಟು ದಿನ ಸಿನಿಮಾದ ಶೂಟಿಂಗ್ ನಿಂದ ದೂರ ಇದ್ದ ಧ್ರುವ ಈಗ ಮತ್ತೆ ಸೆಟ್ ಗೆ ಮರಳಿದ್ದಾರೆ.
ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿರುವ ಪೊಗರು ತಂಡ, ಈಗ ಇಂಟ್ರೊಡಕ್ಷನ್ ಹಾಡಿನ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಂಡಿದೆ.
ಈ ಸಾಂಗ್ ಗೆ ಚಿತ್ರತಂಡ ಒಂದೂವರೆ ಕೋಟಿ ಖರ್ಚು ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಪೊಗರು ಅಣ್ಣನಿಗೆ ಪೊಗರು ಎಂಬ ಸಾಹಿತ್ಯವಿರುವ ಸಾಂಗ್ ಇದಾಗಿದ್ದು, ಮುರಳಿ ಮಾಸ್ಟರ್ ಕೊರಿಯೋಗ್ರಾಫಿ ಇದಕ್ಕಿದೆ. ಅಂದಹಾಗೆ ಈ ಹೈ ಬಜೆಟ್ ಹಾಡಿನ ಶೂಟಿಂಗ್ ಐದು ದಿನ ನಡೆಯಲಿದೆಯಂತೆ.

ಇನ್ನು ಪೊಗರು ಚಿತ್ರದ ಖರಾಬು ಹಾಡು ಕನ್ನಡದ ಜತೆಗೆ ತೆಲುಗಿನಲ್ಲೂ ಮೋಡಿ ಮಾಡಿದೆ. ಮಿಲಿಯನ್ ಗಟ್ಟಲೇ ಜನರಿಂದ ವೀಕ್ಷಣೆ ಪಡೆದಿದೆ. ರಶ್ಮಿಕಾ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಧನಂಜಯ್, ಮಯೂರಿ, ರವಿಶಂಕರ್, ಚಿಕ್ಕಣ್ಣ ಸೇರಿ ಹಲವು ಸ್ಟಾರ್ ಕಲಾವಿದರ ದಂಡೇ ಇದೆ.








