ದೇಶಾದ್ಯಂತ ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ಇನ್ನೇನು ಫಲಿತಾಂಶ ಒಂದೇ ಬಾಕಿಯಿದೆ. ಈ ಮಧ್ಯೆ ನೀತಿ ಸಂಹಿತೆ ಉಲ್ಲಂಘನೆ, ಅಕ್ರಮ ಹಣ ಸಾಗಾಟ ಹೆಚ್ಚಾಗಿ ನಡೆದಿದ್ದು, ಅಧಿಕಾರಿಗಳು ಸುಮಾರು 1,100 ಕೋಟಿ ರೂ. ಮೌಲ್ಯದ ನಗದು ಹಣ ಮತ್ತು ಚಿನ್ನ ವಶಪಡಿಸಿಕೊಂಡಿದ್ದಾರೆ. ಇದು 2019ರ ಚುನಾವಣೆಗಿಂತ 3 ಪಟ್ಟು ಹೆಚ್ಚು ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಕ್ರಮವಾಗಿ ನಗದು, ಅಭರಣ ಪತ್ತೆ ಆಗಿರುವ ಪಟ್ಟಿಯಲ್ಲಿ ಕರ್ನಾಟಕ ಮತ್ತು ದೆಹಲಿ ಮುಂಚೂಣಿಯಲ್ಲಿವೆ. ಈ ಎರಡು ರಾಜ್ಯಗಳಲ್ಲಿ 200 ಕೋಟಿ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ಕರ್ನಾಟಕ, ದೆಹಲಿ ಹೊರತುಪಡಿಸಿದರೆ ತಮಿಳುನಾಡಿನಲ್ಲಿ 150 ಕೋಟಿ ರೂ., ಆಂಧ್ರಪ್ರದೇಶ, ತೆಲಂಗಾಣ ಹಾಗೂ ಒಡಿಶಾದಲ್ಲಿ ಸುಮಾರು 100 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.