ಪಾನ್ ಗುಲ್ಕಂದ್ ಮಿಲ್ಕ್ಶೇಕ್ ಮಾಡೋದು ಹೇಗೆ..?
ಬೇಕಾಗುವ ಪದಾರ್ಥಗಳು:
ವೀಳ್ಯದೆಲೆಗಳು: 7-8
ಕಾಯಿಸಿ ಆರಿಸಿದ ಗಟ್ಟಿ ಹಾಲು: 2 ದೊಡ್ಡ ಲೋಟ
ಗುಲ್ಕಂದ್: 4 ಚಮಚ
ಜೇನುತುಪ್ಪ: 4 ಸಣ್ಣ ಚಮಚ
ತಾಜಾ ಗುಲಾಬಿ ದಳಗಳು: ಅಲಂಕಾರಕ್ಕೆ
ಮಾಡುವ ವಿಧಾನ:
1. ಮಿಕ್ಸರ್ ಜಾರ್ಗೆ ತೊಳೆದ ವೀಳ್ಯದೆಲೆಗಳನ್ನು ಕತ್ತರಿಸಿ, 4 ಚಮಚ ಗುಲ್ಕಂದ್ ಮತ್ತು ಅರ್ಧ ಲೋಟ ಹಾಲು ಸೇರಿಸಿ ಚೆನ್ನಾಗಿ ಗ್ರೈಂಡ್ ಮಾಡಿ.
2. ಈ ಪೇಸ್ಟ್ ಅನ್ನು ಒಂದು ಪಾತ್ರೆಗೆ ಹಾಕಿ, ಉಳಿದ ಹಾಲು ಮತ್ತು ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
3. ಈ ಮಿಶ್ರಣವನ್ನು ಅರ್ಧ ಗಂಟೆ ಫ್ರಿಡ್ಜ್ನಲ್ಲಿ ಇಡಿ, ಇದು ಹಾಲಿನ ರುಚಿಯನ್ನು ಹೆಚ್ಚಿಸುತ್ತದೆ.
4. ಫ್ರಿಡ್ಜ್ನಿಂದ ತೆಗೆದು ತಾಜಾ ಗುಲಾಬಿ ದಳಗಳಿಂದ ಅಲಂಕರಿಸಿ .
ಟಿಪ್ಪಣಿ: ಥಂಡಿ ಬೇಡದವರು ಫ್ರಿಡ್ಜ್ ನಲ್ಲಿ ಇಡದೆ ತಕ್ಷಣವೇ ಕುಡಿಯಬಹುದು.
ಈ ರಿಫ್ರೆಶಿಂಗ್ ಪಾನೀಯವು ವಿಶಿಷ್ಟ ರುಚಿ ಮತ್ತು ಆರೋಗ್ಯಕರ ಗುಣಗಳಿಂದ ತುಂಬಿರುತ್ತದೆ!