ಬೇಕಾಗುವ ಸಾಮಗ್ರಿಗಳು:
ಬೂದು ಕುಂಬಳ ಕಾಯಿ ತುರಿ: 4 ಕಪ್
ತುಪ್ಪ: 1 ಟೇಬಲ್ ಚಮಚ
ಬಾದಾಮಿ ಮತ್ತು ಗೋಡಂಬಿ : ಸ್ವಲ್ಪ
ಹಾಲು: 3 ಕಪ್
ಸಕ್ಕರೆ: 1 ಕಪ್
ಏಲಕ್ಕಿ ಪುಡಿ: ಚಿಟಿಕೆ
ವಿಧಾನ:
1. ಬೂದು ಕುಂಬಳ ಕಾಯಿ ತುರಿ ಮಾಡಿ, ಸಣ್ಣ ಕುಕ್ಕರ್‌ನಲ್ಲಿ ಹಾಕಿ 1 ವಿಸಿಲ್ ಬರುವವರೆಗೆ ಬೇಯಿಸಿ, ನಂತರ ಶೋಧಿಸಿ ಪಕ್ಕಕ್ಕೆ ಇಡಿ.
2. ಒಂದು ಪಾತ್ರೆಯಲ್ಲಿ 1 ಟೇಬಲ್ ಚಮಚ ತುಪ್ಪ ಹಾಕಿ ಬಾದಾಮಿ ಮತ್ತು ಗೋಡಂಬಿ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ.
3. ನಂತರ ಬೇಯಿಸಿದ ಕುಂಬಳ ಕಾಯಿ ಸೇರಿಸಿ 3 ನಿಮಿಷ ಚೆನ್ನಾಗಿ ಹುರಿಯಿರಿ.
4. ಇದಕ್ಕೆ 3 ಕಪ್ ಹಾಲು ಹಾಕಿ ಚೆನ್ನಾಗಿ ಕಲಸಿ.
5. 1 ಕಪ್ ಸಕ್ಕರೆ ಮತ್ತು ಏಲಕ್ಕಿ ಪುಡಿ ಸೇರಿಸಿ, ಹಲ್ವಾ ದಪ್ಪವಾಗುವವರೆಗೆ ಚೆನ್ನಾಗಿ ಕುದಿಸಿ.
ಈಗ ರುಚಿಯಾದ ಬೂದು ಕುಂಬಳ ಕಾಯಿ ಹಲ್ವಾ ಸವಿಯಲು ಸಿದ್ಧ!